ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಿಡ್ನಾಪ್ ಹೇಳಿಕೆಗೆ ರಿಯಾಕ್ಟ್ ಮಾಡಲ್ಲ; ಡಿಸಿಎಂ ಡಿ.ಕೆ. ಶಿವಕುಮಾರ್!
ಡಿ.ಕೆ.ಶಿವಕುಮಾರ್, ಬಿಡದಿಯಲ್ಲಿ 9 ವರ್ಷದ ಮಗು ಕಿಡ್ನಾಪ್ ಮಾಡಿ ಅವರ ತಂದೆಯ ಎಲ್ಲ ಆಸ್ತಿ ಬರೆಸಿಕೊಂಡಿದ್ದಾರೆಂಬ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಚಿಲ್ಲರೆ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು (ಏ.17): ಡಿ.ಕೆ. ಶಿವಕುಮಾರ್ 9 ವರ್ಷದ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿ ಅವರಪ್ಪನಿಂದ ಬಿಡದಿ ಹೆದ್ದಾರಿ ಬಳಿಯಿದ್ದ ಎಲ್ಲ ಆಸ್ತಿಯನ್ನು ಬರೆಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆರೋಪ ಅಥವಾ ಚಿಲ್ಲರೆ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಗಳನ್ನು ಕರೆದುಕೊಂಡು ಆಸ್ತಿ ಬರೆಸಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ ತಿರುಗೇಟು ನೀಡಿದರು. ಅವರು ದಾಖಲೆ ಬಿಡುಗಡೆ ಮಾಡಲಿ. ಇದರ ಚರ್ಚೆಗೆ ವಿಧಾನಸಭೆಯೇ ವೇದಿಕೆಯಾಗಲಿ. ಅಂತಹ ಚಿಲ್ಲರೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಕಾಂಗ್ರೆಸ್ ಸರ್ಕಾರ ಪತನ ಆಗಲಿದೆ ಎಂಬ ದೇವೆಗೌಡ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅವರೆಲ್ಲಾ ಆಫ್ ದಿ ರೇಕಾರ್ಡ ಮಾತಾಡಿದ್ದಾರೆ. ನಾವು ಮೈತ್ರಿ ಮಾಡಿಕೊಳ್ಳದಿದ್ದರೆ ನಮ್ಮವರೆಲ್ಲಾ ಹೋಗಬಿಡ್ತಿದ್ರು ಅಂತ ಮಾತಾಡಿದ್ದಾರೆ. ಅದೇ ಸಾಕು ಬಿಡಿ ಎಂದು ತಿರುಗೇಟು ನೀಡಿದರು.
ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಮಾಡಿ ಅವರಪ್ಪನ ಆಸ್ತಿ ಬರೆಸಿಕೊಂಡ ದಾಖಲೆಯಿದೆ; ಹೆಚ್.ಡಿ. ದೇವೇಗೌಡ ಆರೋಪ
ಕುಮಾರಸ್ವಾಮಿ ಮತ್ತು ಡಿಕೆಶಿ ಮಧ್ಯೆ ವೈಯಕ್ತಿಕ ಮಟ್ಟದ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ನಾನು ಅವರಿಗೆ ಗೌರವ ಕೊಡ್ತೇನೆ. ಅವರ ಜೊತೆ ಕೆಲಸ ಮಾಡಿದ್ದೇನೆ. ಆದರೂ ನಾನು ವಿಷ ಹಾಕಿದ್ದೇನೆ ಅಂತ ಹೇಳಿದರು. ಇನ್ನೂ ಬಹಳ ಇದೆ. ಇವರು ಮಹಿಳೆಯರ ಸ್ವಾಭಿಮಾನಕ್ಕೆ ಕೈ ಹಾಕಿದ್ರು. ಅವರು ರಿಯಾಕ್ಟ್ ಮಾಡುವ ರೀತಿಯ ರೀತಿಯಲ್ಲೇ ರಿಯಾಕ್ಷನ್ ಕೊಟ್ಟಿದ್ದೇನೆ. ಅವರು ಗೌರವಿಸಿದರೆ ನಾನು ಗೌರವ ಕೊಡ್ತೇನೆ. ರಾಜ್ಯದಲ್ಲಿ ಬಿಜೆಪಿಗೆ ಯಾಕೆ ಓಟ್ ಹಾಕಬೇಕು.? ಅವರಿಗೆ ಯಾವತ್ತೂ ಬಹುಮತ ಬಂದಿಲ್ಲ. ಆಪರೇಷನ್ ಕಮಲ ಮಾಡಿ ಅಧಿಕಾರ ಮಾಡಿದ್ದಾರೆ. ಅವರಿಗೆ ನುಡಿದಂತೆ ನಡೆಯಲು ಸಾಧ್ಯ ಆಗಲಿಲ್ಲ. ಹೀಗಿರುವಾಗ ಅವರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಟೀಕೆ ಮಾಡಿದರು.
ನಾನು ಒಕ್ಕಲಿಗ ಜಾತಿಯಲ್ಲಿ ಹುಟ್ಟಿರಬಹುದು. ಅದರೆ ಎಲ್ಲಾ ಜಾತಿ ಪರ ನಾನು. ನಾನು ಸಮುದಾಯದ ನಾಯಕ ಆಗಲು ಹೊರಟಿಲ್ಲ. ಅವರಿಗೆ ಯಾರು ಚೂರಿ ಹಾಕಿದ್ರೋ ಅವರ ಜೊತೆ ಸ್ವಾಮೀಜಿ ಹತ್ರ ಹೋಗಿದ್ರಿ ಅಂತ ಹೇಳಿದೆ ಅಷ್ಟೇ. ಇನ್ನು ನಮ್ಮ ಕಾಂಗ್ರೆಸ್ ಗ್ಯಾರಂಟಿ ಯಾವುದೇ ಕಾರಣಕ್ಕೂ ರದ್ದಾಗಲ್ಲ. ಇನ್ನೂ 9 ವರ್ಷಗಳ ಕಾಲ ಇರಲಿದೆ. ಇದನ್ನು ಬರೆದುಕೊಳ್ಳಿ. ಹೈಕಮಾಂಡ್ ಮಟ್ಟದಲ್ಲಿ ಎಲ್ಲಾ ತಿರ್ಮಾನ ಆಗಿದೆ ಅನ್ನೋ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ನಾನು ಕ್ಲೋಸ್ ಡೋರ್‌ನಲ್ಲಿ ಮಾತಾಡಿದ್ದೇನೆ. ಅದನ್ನೆಲ್ಲಾ ಬಹಿರಂಗ ಚರ್ಚೆ ಮಾಡಲ್ಲ. ನಾನು ಬಹಿರಂಗ ವಾಗಿ ಮಾತಾಡಲು ಬಯಸಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪತನ: ದೇವೇಗೌಡ
ಗಾಣಗಾಪುರ ದೇವಾಲಯದಲ್ಲಿ ನೀವು ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟ ವಿಚಾರದ ಬಗ್ಗೆ ಮಾತನಾಡಿ, ಭಕ್ತ ಮತ್ತು ಭಗವಂತ ನಡುವೆ ಅದು ನಡೆದಿರೋದು. ಅದೆಲ್ಲಾ ದೇವಾಲಯದಲ್ಲಿ ನಡೆಯೋದು. ಅದೆಲ್ಲಾ ಈಗ ಯಾಕೆ ಬೇಕು. ಜಾತಿ ಗಣತಿ ವಿರೋಧ ಮಾಡಿದ ವಿಚಾರದ ಬಗ್ಗೆ ಮಾತನಾಡಿ, ಕೆಲವು ಕಡೆ ತಪ್ಪಾಗಿರೋದು ಸರಿ ಮಾಡಿ ಅನ್ನೋದು ಅಷ್ಟೇ. ಎಲ್ಲರ ಸಮೀಕ್ಷೆ ಆಗಬೇಕು. ಅದಕ್ಕೆ ದೇಶದ ಮಟ್ಟದಲ್ಲಿ ಜಾತಿಗಣತಿ ಪ್ರಸ್ತಾಪ ಮಾಡಿದ್ದೇವೆ. ಸಮೀಕ್ಷೆ ಎಲ್ಲರಿಗೂ ತಲುಪಬೇಕು. ಯಾವುದೇ ವ್ಯತ್ಯಾಸ ಆಗಬಾರದು. ಇನ್ನು ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಅನ್ನೋ ಸರ್ವೇ ಒಪ್ಪಲ್ಲ. ಸರ್ವೇ ಬಹಳ ಸಲ ತಪ್ಪಾಗಿದೆ. ನಾವು ಅಧಿಕಾರಕ್ಕೆ ಬರುವುದು ಖಚಿತ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.