Asianet Suvarna News Asianet Suvarna News

ನನ್ನೊಳಗಿನ ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ, ತಲೆಗೆ ಹುಳ ಬಿಟ್ಟ ಕಾಂಗ್ರೆಸ್ ನಾಯಕ!

ನಿಮ್ಗೆ ನಾನು ರಾಹುಲ್ ಗಾಂಧಿ. ಆದರೆ ನನ್ನೊಳಗೆ ರಾಹುಲ್ ಗಾಂಧಿ ಇಲ್ಲ. ನನ್ನೊಳಗಿನ ರಾಹುಲ್ ಗಾಂಧಿಯನ್ನು ಯಾವತ್ತೋ ಕೊಂದಿದ್ದೇನೆ. ಇದು ಸ್ವತಃ ರಾಹುಲ್ ಗಾಂಧಿ ಆಡಿದ ಮಾತು. ರಾಹುಲ್ ಗಾಂಧಿ ತತ್ವಶಾಸ್ತ್ರಜ್ಞರ ರೀತಿ ಮಾತನಾಡಿದ್ದಾರೆ. ಇಷ್ಟೇ ಅಲ್ಲ ಪ್ರಶ್ನೆ ಕೇಳಿದ ಪತ್ರಕರ್ತರ ತಲೆಗೆ ಹುಳ ಬಿಟ್ಟಿದ್ದಾರೆ. 

Rahul Gandhi is in your mind i have killed him not in mind also says wayanad mp during Bharat Jodo yatra Haryana ckm
Author
First Published Jan 9, 2023, 7:34 PM IST

ಹರ್ಯಾಣ(ಜ.09): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಹರ್ಯಾಣದಲ್ಲಿ ಸಂಚರಿಸುತ್ತಿದೆ. ಇದರ ನಡುವೆ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಹಲವರ ತಲೆಗೆ ಹುಳ ಬಿಟ್ಟಿದ್ದಾರೆ. ತತ್ವಶಾಸ್ತ್ರಜ್ಞರ ರೀತಿಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ನಾನು ನನ್ನೊಳಗಿನ ಅಹಂ ಕುರಿತು ಮಾತನಾಡಿದ್ದಾರೆ. ನಿಮಗೆ ನಾನು ರಾಹುಲ್ ಗಾಂಧಿ. ಆದರೆ ನನಗೆ ನಾನು ರಾಹುಲ್ ಗಾಂಧಿ ಅಲ್ಲ. ನನ್ನೊಳಗಿನ ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ. ನನ್ನ ಮನಸ್ಸಿನಲ್ಲೂ ರಾಹುಲ್ ಗಾಂಧಿ ಇಲ್ಲ. ನಿಮ್ಮ ತಲೆಯಲ್ಲಿ ರಾಹುಲ್ ಗಾಂಧಿ ಆದರೆ ನನ್ನ ತಲೆಯಲ್ಲಿಲ್ಲ. ಅವರು ಹೋಗಿದ್ದಾರೆ, ಹೋಗಿದ್ದಾರೆ ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯಿಂದ ನಿಮ್ಮ ಇಮೇಜ್ ಬದಲಾಗಿದೆಯಾ ಅನ್ನೋ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಎಲ್ಲರ ತಲೆಗೆ ಒಂದಷ್ಟು ಕೆಲಸ ನೀಡಿತ್ತು. ನನಗೆ ಇಮೇಜ್ ಕುರಿತು ಯಾವುದೇ ಚಿಂತೆ ಇಲ್ಲ. ನಾನು ಇಮೇಜ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನೀವು ನನಗೆ ಒಳ್ಳೆಯ ಅಥವಾ ಕೆಟ್ಟ ಇಮೇಜ್ ನೀಡಿ. ಅದರಿಂದ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಚಳಿ ತಡೆಗೆ ಟೀಶರ್ಟ್‌ನೊಳಗೆ ಥರ್ಮಲ್ಸ್‌ ಬಳಕೆ: ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ನಾಯಕರ ಟೀಕೆ

ನೀವು ಅರ್ಥಮಾಡಿಕೊಂಡರೆ ನಿಮಗೆ ಒಳ್ಳೆಯದು ಕಾಣುತ್ತದೆ. ಅರ್ಥಮಾಡಿಕೊಳ್ಳದೇ ಹೋದರೆ ಕೆಟ್ಟದು. ಇದು ಈ ರಾಷ್ಟ್ರದ ತತ್ವಶಾಸ್ತ್ರ ಎಂದು ರಾಹುಲ್ ಹಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ತತ್ವಶಾಸ್ತ್ರದಂತ ಮಾತುಗಳು ಹಲವರಲ್ಲಿ ಗೊಂದಲ ಸೃಷ್ಟಿಸಿದ್ದರೆ, ಮತ್ತೆ ಕೆಲವರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. 

ರಾಹುಲ್‌ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ಉದ್ದೇಶ ಪಾದಯಾತ್ರೆಗಿಲ್ಲ: ಜೈರಾಂ
ಭಾರತ್‌ ಜೋಡೋ ಯಾತ್ರೆಯು 2024ರ ಲೋಕಸಭಾ ಚುನಾವಣೆಗೆ ರಾಹುಲ್‌ ಗಾಂಧಿ ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿ ಎಂಬುದನ್ನು ಬಿಂಬಿಸುವುದಕ್ಕಾಗಿ ಕೈಗೊಂಡ ಯೋಜನೆಯಲ್ಲ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹೇಳಿದ್ದಾರೆ.ಪ್ರಸ್ತುತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯು ಹರಾರ‍ಯಣದ ಕರ್ನಾಲ್‌ನಲ್ಲಿ ಸಾಗುತ್ತಿದ್ದು ಈ ವೇಳೆ ಮಾತನಾಡಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್‌, ‘ಯಾತ್ರೆ ಚುನಾವಣೆ ಯಾತ್ರೆ ಅಲ್ಲ, ಇದೊಂದು ಸೈದ್ಧಾಂತಿಕ ಯಾತ್ರೆಯಾಗಿದ್ದು ರಾಹುಲ್‌ ಗಾಂಧಿ ಇದರ ಪ್ರಮುಖ ಮುಖವಾಗಿದ್ದಾರೆ ಹಾಗೂ ಇದು ವೈಯಕ್ತಿಕ ಯಾತ್ರೆಯಲ್ಲ’ ಎಂದಿದ್ದಾರೆ.

ಭಾರತ್‌ ಜೋಡೋ ಯಾತ್ರೆ ಪುನಾರಂಭ ಯುಪಿಯಲ್ಲಿ ರಾಹುಲ್‌ಗೆ ಭರ್ಜರಿ ಸ್ವಾಗತ

 ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜೊತೆ ಪ್ರಿಯಾಂಕ ಗಾಂಧಿ ಅವರ ಸಾಕು ನಾಯಿ ‘ಲೂನಾ’ ಹೆಜ್ಜೆ ಹಾಕಿದೆ. ಇದೇ ವೇಳೆ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಕೂಡ ರಾಹುಲ್‌ ಜತೆ ಹೆಜ್ಜೆ ಹಾಕಿದ್ದಾರೆ. ರಾಹುಲ್‌ ಗಾಂಧಿಗಿಂತ ವೇಗವಾಗಿ ‘ಲೂನಾ’ ಹೆಜ್ಜೆಹಾಕುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನನ್ನ ಲೂವಾವನ್ನು ಅಪಹರಿಸಲಾಗಿದೆ’ ಎಂದು ಪ್ರಿಯಾಂಕಾ ಗಾಂಧಿ ಅವರು ಟ್ವೀಟರ್‌ನಲ್ಲಿ ರಾಹುಲ್‌ ಕಾಲೆಳಿದಿದ್ದಾರೆ. ಈ ಬಗೆಗಿನ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ನಾಯಕರು, ಲೂನಾಗೆ ರಾಹುಲ್‌ ಮೇಲಿರುವ ಪ್ರೀತಿಯನ್ನು ವರ್ಣಿಸಿದ್ದಾರೆ.
 

Follow Us:
Download App:
  • android
  • ios