ರಾಹುಲ್ ಗಾಂಧಿಗೆ ಯಾವುದೇ ಗ್ಯಾರಂಟಿ ಇಲ್ಲ: ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮ

ರಾಜ್ಯದ ಜನತೆಗೆ ಗ್ಯಾರಂಟಿ ಕಾರ್ಡ್ ಕೊಟ್ಟು ಯಾವುದೇ ಪ್ರಯೋಜನವಿಲ್ಲ ಎಂದ ಅಸ್ಸಾಂ ಸಿಎಂ ಹಿಮಂತ್ ಬಿಶ್ವಾಸ್ ಶರ್ಮ

Rahul Gandhi Has No Guarantee Says Assam CM Himanta Biswa Sarma grg

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಮೇ.07):  ರಾಜ್ಯ ಚುನಾವಣೆಯಲ್ಲಿ ಕರ್ನಾಟಕದ ಜನತೆಗೆ ಗ್ಯಾರೆಂಟಿ ಕಾರ್ಡ್ ನೀರುವ ರಾಹುಲ್ ಗಾಂಧಿಗೇ ಯಾವುದೇ ಗ್ಯಾರೆಂಟಿ ಇಲ್ಲ. ಇನ್ನು ಕರ್ನಾಟಕದ ಜನತೆಗೆ ಗ್ಯಾರೆಂಟಿ ಕಾರ್ಡ್ ಕೊಟ್ಟು ಏನು ಪ್ರಯೋಜನ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮ ಲೇವಡಿ ಮಾಡಿದ್ದಾರೆ. 

ಕೊಡಗಿನ ಶನಿವಾರಸಂತೆಯಲ್ಲಿ ಮಡಿಕೇರಿ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಪರವಾಗಿ ನಡೆದ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಮುಸಲ್ಮಾನರಿಗೆ ಸೀಮಿತವಾಗಿ ಪ್ರಣಾಳಿಕೆ ಘೋಷಿಸಿದೆ. ಹಾಗಾದರೆ ರಾಜ್ಯದಲ್ಲಿ ಮುಸ್ಲಿಮರನ್ನು ಬಿಟ್ಟರೆ ಬೇರೆ ಯಾರೂ ಇಲ್ಲವೆ. ಇದರಲ್ಲೇ ಅವರ ಮನಸ್ಥಿತಿ ಏನೆಂದು ತಿಳಿಯುತ್ತದೆ. ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡಿದಕ್ಕೆ ರಾಜ್ಯದ ಸಿಎಂ‌ ಬಸವರಾಜ ಮೊಮ್ಮಾಯಿಗೆ ಧನ್ಯವಾದ ಎಂದರು. 

ಸಿದ್ದರಾಮಯ್ಯ ಸೋಲಲಿ ಎಂದು ಡಿಕೆಶಿ ಹೋಮ ಮಾಡಿಸಿದ್ದಾರೆ: ಸಿ.ಟಿ. ರವಿ

ಕಾಂಗ್ರೆಸ್ ಭಜರಂಗದಳ ಮತ್ತು ಪಿಎಫ್‌ಐ ಅನ್ನು ಒಂದೆ ದೃಷ್ಟಿಯಲ್ಲಿ ನೋಡ್ತಿದೆ. ಆದರೆ ಬರಜಂಗದಳ ರಾಷ್ಟ್ರಭಕ್ತರ ಸಂಘ. ಅಸ್ಸಾಂನಲ್ಲಿ 600 ಮದರಸಗಳನ್ನು ನಾನು ಬಂದ್ ಮಾಡಿಸಿ ನಿಮ್ಮಲ್ಲಿಗೆ ಬಂದಿದ್ದೇನೆ. ನಾನು ಅಲ್ಲಿ 400 ಪಿಎಫ್ಐ ಕಾರ್ಯಕರ್ತರನ್ನ ಜೈಲಿಗೆ ಕಳುಹಿಸಿದ್ದೇನೆ. ಒಬ್ಬೊಬ್ಬ ಪಿಎಫ್‌ಐ ಕಾರ್ಯಕರ್ತನನ್ನು ಹುಡುಕಿ ಜೈಲಿಗೆ ಹಾಕ್ತೀದ್ದೀವಿ ಎಂದರು. ಬಿಬಿಸಿ ಮೀಡಿಯಾ ಮೋದಿ ಬಗ್ಗೆ ಡ್ಯಾಕ್ಯುಮೆಂಟ್ರಿ ಮಾಡಿ ತಂದಾಗ ಕಾಂಗ್ರೆಸ್ ಬಹಳ ಸಂಭ್ರಮಿಸಿತ್ತು. ಅದನ್ನ ಪ್ರತಿಯೊಬ್ಬರು ನೋಡಬೇಕು ಅಂತ ಕಾಂಗ್ರೆಸ್ ಕರೆ ಕೊಟ್ಟಿತ್ತು. ಆದ್ರೆ ಈಗ ನಡೆಯುತ್ತಿರುವ ಮತಾಂತರ ಮತ್ತು ಭಯೋತ್ಪಾದನೆ ಬಗ್ಗೆ ದಿ ಕೇರಳ ಸ್ಟೋರಿ ಬಂದಿದೆ. ಆದರೆ ಅದನ್ನ ಜನ ನೋಡದಂತೆ ಕಾಂಗ್ರೆಸ್ ತಡೆಯುತ್ತಿದೆ. ಇದು ಯಾಕೆ ಎಂದು ಅಸ್ಸಾಂ ಸಿಎಂ ಪ್ರಶ್ನಿಸಿದರು. ಕೇರಳ ಸ್ಟೋರಿ ಪ್ರತಿಯೊಬ್ಬರು ನೋಡುವಂತೆ ನಾನು‌ ಕರೆ ಕೊಡ್ತೀನಿ. ಎಲ್ಲರೂ ತಪ್ಪದೇ ದಿ‌ ಕೇರಳ ಸ್ಟೋರಿ ನೋಡಿ, ಆಗ ಮತಾಂಧರ ಮನಸ್ಥಿತಿ ಎಂತಹದ್ದು ಎಂದು ತಿಳಿಯುತ್ತೆ. ಕರ್ನಾಟಕದ ಜನ ತುಂಬಾ ಬುದ್ದಿವಂತರಿದ್ದಾರೆ. ಅವರಿಗೆ ಯಾರ ಗ್ಯಾರಂಟಿ ಬೇಕಾಗಿಲ್ಲ. ಈಗ ಕರ್ನಾಟಕ ರಾಜ್ಯದಲ್ಲಿ ಇರುವ ಬಿಜೆಪಿ ಟ್ರೆಂಡ್ ನೋಡಿದ್ರೆ 150 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.  

ಬಿಜೆಪಿ ಕರ್ನಾಟವನ್ನ ದೇಶದ ಮಾದರಿ ರಾಜ್ಯ ಮಾಡುವ ಪಣ ತೊಟ್ಟಿದೆ. ಹೀಗಾಗಿ ರಾಜ್ಯದ ಜನರು ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು. ಬಿಜೆಪಿ ಪಕ್ಷಕ್ಕೆ ಗುರು ಮತ್ತು ಗುರಿ ಇದೆ, ಮೋದಿ ನೇತೃತ್ವದಲ್ಲಿ ಭಾರತ ದೇಶವು ವಿಶ್ವಗುರು ಆಗ್ತಿದೆ. ಆದರೆ ಕಾಂಗ್ರೆಸ್‌ಗೆ ಗುರುವೂ ಇಲ್ಲ, ಗುರಿಯೂ ಇಲ್ಲ. ಅಂತಹ ಪಕ್ಷಕ್ಕೆ ನಿಮ್ಮ ಅಮೂಲ್ಯ ಮತವನ್ನು ಹಾಕದೆ  ಮೋದಿಯ ಕೈಯನ್ನು ಬಲಪಡಿಸಲು ನಿಮ್ಮ ಕ್ಷೇತ್ರದ ಅಭ್ಯರ್ಥಿ ಅಪ್ಪಚ್ಷು ರಂಜನ್‌ ಅವಿರಗೆ ಮತ ನೀಡಿ. ಭಾರೀ ಅಂತರದಲ್ಲಿ ಅಪ್ಪಚ್ಚು ರಂಜನ್ ಅವರನ್ನು ಗೆಲ್ಲಿಸಿ‌ ಎಂದು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ್ ಬಿಶ್ವಾಸ್ ಶರ್ಮ ಮತಯಾಚಿಸಿದರು. ಇನ್ನು ಟಿಪ್ಪು ವಿಚಾರವನ್ನು ಪ್ರಸ್ತಾಪಿಸಿದ ಹಿಮಂತ್ ಬಿಶ್ವಾಸ್ ಶರ್ಮ ಹಿಂದೂಗಳನ್ನು ರಕ್ಷಣೆ ಮಾಡುತ್ತಿರುವ ಬಿಜೆಪಿಗೆ ಮತ ನೀಡಬೇಕಾಗಿದೆ ಎಂದರು. 

ಇದಕ್ಕೂ ಮೊದಲು ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಜಿ. ಬೋಪಯ್ಯ ಅವರ ಪರವಾಗಿಯೂ ಗೋಣಿಕೊಪ್ಪದಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮತಯಾಚಿಸಿದರು.

Latest Videos
Follow Us:
Download App:
  • android
  • ios