ಅಮಾನತಿಗೂ ಮೊದಲು ಪರಿಣಿತಿ ಚೋಪ್ರಾ ಜೊತೆ ರಾಘವ್ ಚಡ್ಡಾ, ವಿಡಿಯೋ ವೈರಲ್!
ಆಪ್ ಸಂಸದ ರಾಘವ್ ಚಡ್ಡಾ ರಾಜ್ಯಸಭೆಯಿಂದ ಅಮಾನತ್ತಾಗಿದ್ದಾರೆ. ಅಮಾನತ್ತಿಗೂ ಮೊದಲು ಭಾವಿ ಪತ್ನಿ ಪರಿಣಿತಿ ಚೋಪ್ರಾ ಜೊತೆ ಕಾಣಿಸಿಕೊಂಡಿದ್ದರು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ
ನವದೆಹಲಿ(ಆ.11) ಅವಿಶ್ವಾಸ ನಿರ್ಣಯದ ಪರವಾಗಿ ಐವರು ಸಂಸದರ ನಕಲಿ ಸಹಿ ಮಾಡಿದ ಆರೋಪ ಹೊತ್ತಿರುವ ದೆಹಲಿಯ ಆಪ್ ಸಂಸದ ರಾಘವ ಚಡ್ಡಾ ರಾಜ್ಯಸಭೆಯಿಂದ ಅಮಾನತ್ತಾಗಿದ್ದಾರೆ. ಸಮಿತಿ ವರದಿ ನೀಡುವವರೆಗೆ ರಾಘವ್ ಚಡ್ಡಾರನ್ನು ಅಮಾನತ್ತಿನಲ್ಲಿಡಲಾಗುವುದು ಎಂದು ರಾಜ್ಯಸಭೆ ಚೇರ್ಮೆನ್ ಜಗದೀಪ್ ಧನ್ಕರ್ ಹೇಳಿದ್ದಾರೆ. ರಾಘವ್ ಚಡ್ಡಾ ಅಮಾನತು ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ವಿಡಿಯೋವೊಂದು ವೈರಲ್ ಆಗಿದೆ. ರಾಘವ್ ಜಡ್ಡಾ ಅಮಾನತ್ತಿಗೂ ಮೊದಲು ಭಾವಿ ಪತ್ನಿ, ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.
ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ನೀಲಿ ಬಣ್ಣದ ಮ್ಯಾಚಿಂಗ್ ಡ್ರೇಸ್ ಹಾಕಿ ಗಮನಸೆಳೆದಿದ್ದರು. ಇಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ನಿಲ್ದಾಣದಲ್ಲಿ ಕಾಣಿಸಿಕೊಂಡ ಜೋಡಿಯ ಫೋಟೋ ತೆಗೆಯಲು ಹಲವರು ಮುಂದಾಗಿದ್ದರು. ಆದರೆ ಪರಿಣಿತಿ ಹಾಗೂ ರಾಘವ್ ಫೋಟೋಗೆ ಫೋಸ್ ನೀಡಲಿಲ್ಲ. ಇದೇ ವೇಳೆ ಪಾಪರಾಜಿಗಳು, ನೀವಿಬ್ಬರು ಜೊತೆಯಾಗಿ ನಿಂತರೆ ಮತ್ತಷ್ಟು ಕ್ಯೂಟ್ ಕಾಣುತ್ತೀರಿ. ಒಂದು ಫೋಟೋ ಪ್ಲೀಸ್ ಎಂದು ಮನವಿ ಮಾಡಿದ್ದಾರೆ. ಆದರೆ ಯಾವುದೇ ಮನವಿಗೂ ಸ್ಪಂದಿಸದೆ ಈ ಜೋಡಿ ನೇರವಾಗಿ ವಿಮಾನ ನಿಲ್ದಾಣದೊಳಕ್ಕೆ ಪ್ರವೇಶಿಸಿತು.
ಕಾಗೆ ಕುಕ್ಕೋದು ಅಂದ್ರೆ ಸುಮ್ನೇನಾ, ರಾಜ್ಯಸಭೆಯಿಂದ ರಾಘವ್ ಚಡ್ಡಾ ಅನಿರ್ದಿಷ್ಟಾವಧಿ ಅಮಾನತು!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇತ್ತ ಪರಿಣಿತಿ ಜೊತೆ ಕಾಣಿಸಿಕೊಂಡು ಬಳಿ ರಾಜ್ಯ ಸಭೆಗೆ ಆಗಮಿಸಿದ್ದ ರಾಘವ್ ಚಡ್ಡಾ, ಫೋರ್ಜರಿ ಪ್ರಕರಣದಲ್ಲಿ ಅಮಾನತ್ತಾಗಿದ್ದಾರೆ.
ಮಂಗಳವಾರ ಸಂಸತ್ತಿನಿಂದ ಹೊರನಡೆದು ಬರುತ್ತಿರುವ ರಾಘವ್ ತಲೆ ಮೇಲೆ ಕಾಗೆಯೊಂದು ಸುಳಿದಾಡಿತ್ತು. ಈ ವೇಳೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಅವರು ಕೆಲ ಕಾಲ ಬೆದರಿ ಬಾಗಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಬಿಜೆಪಿ ‘ಸುಳ್ಳು ಹೇಳುವವರನ್ನು ಕಾಗೆ ಕುಕ್ಕುತ್ತದೆ ಎಂದು ಕೇಳಿದ್ದೆವು. ಇದೀಗ ಅದನ್ನು ನಾವು ನಿಜವಾಗಿಯೂ ನೋಡಿದೆವು’ ಎಂದು ಟ್ವೀಟ್‌ನಲ್ಲಿ ಟೀಕಿಸಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ರಾಘವ್ ಚಡ್ಡಾ ಅಮಾನತ್ತಾಗಿರುವುದು ಇದೀಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಕಾಗೆ ಕುಕ್ಕಿದ ಬಳಿಕ ರಾಘವ್ ಚಡ್ಡಾಗೆ ಶನಿದೆಸೆ ಆರಂಭಗೊಂಡಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಕಾಗೆ ಕುಕ್ಕಿದ ಬಳಿಕ ಶುರುವಾಯ್ತು ರಾಘವ್ ಚಡ್ಡಾಗೆ ಶನಿಕಾಟ, 'ನಕಲಿ ಸಹಿ' ಆರೋಪಕ್ಕೆ ಆಪ್ ಸಂಸದ ಕಂಗಾಲು!
ಮೇ 13 ರಂದು ರಾಘವ್ ಚಡ್ಡಾ ಹಾಗೂ ಪರಿಣಿತಿ ಚೋಪ್ರಾ ನಿಶ್ಚಿತಾರ್ಥ ನೇರವೇರಿತ್ತು. ಕಪೂರ್ತಲಾ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರೂ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದರು. ಸಮಾರಂಭದಲ್ಲಿ ಪರಿಣೀತಿ ಅವರ ಹಿರಿಯ ಸೋದರಿ, ನಟಿ ಪ್ರಿಯಾಂಕಾ ಚೋಪ್ರಾ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಸೇರಿ 150 ಆಪ್ತೇಷ್ಟರು, ಸ್ನೇಹಿತರು ಪಾಲ್ಗೊಂಡಿದ್ದರು. ಇವರು ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಆಗಲೇ ಪ್ರೇಮಾಂಕುರವಾಗಿತ್ತು. ಇಬ್ಬರ ಡಿನ್ನರ್ ಮೀಟ್ ಫೋಟೊಗಳು ವೈರಲ್ ಆಗಿ, ಬಹುದಿನಗಳಿಂದ ಇವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.