Asianet Suvarna News Asianet Suvarna News

ಮೇಲ್ಮನೆ ಸ್ಥಾನ ಸವದಿಗೋ, ಶಂಕರ್‌ಗೋ?: ಕಮಲಕ್ಕೆ ಗೆಲುವು ಸುಲಭ!

ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್‌ರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಫೆ.12ಕ್ಕೆ ಚುನಾವಣೆ ಡಿಸಿಎಂ ಆಗಿರಲು ಸವದಿಗೆ ಆಯ್ಕೆ ಅನಿವಾರ್ಯ | ಶಂಕರ್ ಸಚಿವರಾಗಲು ಇದೊಂದೇ ದಾರಿ

Karnataka Legislative Council Election Laxman Savadi or R Shankar Whom Will choose BJP
Author
Bangalore, First Published Jan 28, 2020, 8:41 AM IST

ಬೆಂಗಳೂರು[ಜ.28]: ವಿಧಾನಸಭೆ ಉಪಚುನಾವಣೆ ಯಲ್ಲಿ ರಿಜ್ವಾನ್ ಅರ್ಷದ್ ಶಿವಾಜಿನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಒಂದು ಸ್ಥಾನಕ್ಕಾಗಿ ಆಡಳಿತಾರೂಢ ಬಿಜೆಪಿಯ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಅನರ್ಹ ಶಾಸಕ ಆರ್. ಶಂಕರ್ ನಡುವೆ ಪೈಪೋಟಿ ಏರ್ಪಟ್ಟಿದೆ

ವೇಳಾಪಟ್ಟಿ ಪ್ರಕಟಿಸಿದ್ದು, ಜ.30ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಫೆ.6 ಕೊನೆಯ ದಿನ. ಫೆ.೭ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಫೆ.10 ಕೊನೆಯ ದಿನ. ಫೆ.17ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಸಂಜೆ 5ರಿಂದ ಮತ ಎಣಿಕೆ ನಡೆಯಲಿದೆ. ಕೇವಲ 1 ಸ್ಥಾನಕ್ಕಾಗಿ ಚುನಾವಣೆ ನಡೆಯುವುದರಿಂದ ಸಂಖ್ಯಾಬಲದ ಆಧಾರದ ಮೇಲೆ ಅದು ಬಿಜೆಪಿಗೇ ಒಲಿಯುವುದು ಬಹುತೇಕ ನಿಶ್ಚಿತವಾಗಿದೆ. ಹೀಗಾಗಿ, ಪ್ರತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ತೀರಾ ಕಡಿಮೆ. ಹಾಗಾದಲ್ಲಿ ಅವಿರೋಧವಾಗಿಯೇ ಆಯ್ಕೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಇದೀಗ ಬಂದ ಸುದ್ದಿ: ಮತ್ತೊಂದು ಹೆಜ್ಜೆ ಮುಂದಿಟ್ಟ CM, ಈ ತಿಂಗಳ ಅಂತ್ಯಕ್ಕೂ ಇಲ್ಲ ಸಂಪುಟ ವಿಸ್ತರಣೆ

ಲಕ್ಷ್ಮಣ ಸವದಿ ಅವರು ತಮ್ಮ ಉಪಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಫೆಬ್ರವರಿ ೨೦ರೊಳಗಾಗಿ ವಿಧಾನಮಂಡಲದ ಉಭಯ ಸದನಗಳ ಪೈಕಿ ಯಾವುದಾದರೊಂದರ ಸದಸ್ಯರಾಗಿ ಆಯ್ಕೆ ಯಾಗುವುದು ಅನಿವಾರ್ಯ. ಇಲ್ಲದಿದ್ದರೆ ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳ ಬೇಕಾಗುತ್ತದೆ. ಸವದಿ ಅವರನ್ನು ಉಪಮುಖ್ಯ ಮಂತ್ರಿಯನ್ನಾಗಿ ಮಾಡಿರುವ ಬಿಜೆಪಿ ವರಿಷ್ಠರು ಅವರನ್ನು ಮುಂದುವರೆಸುವ ಸಲುವಾಗಿ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯೇ ಹೆಚ್ಚಿದೆ.

ಇಲ್ಲದಿದ್ದರೆ ವರಿಷ್ಠರಿಗೇ ಮುಜುಗರ ಉಂಟಾಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸದೆ ಕ್ಷೇತ್ರ ಬಿಟ್ಟುಕೊಟ್ಟಿರುವ ಅನರ್ಹ ಶಾಸಕ ಆರ್.ಶಂಕರ್ ಅವರನ್ನು ವಿಧಾನಪ ರಿಷತ್ತಿನ ಸದಸ್ಯರನ್ನಾಗಿಸಿ ಸಚಿವ ಸ್ಥಾನ ನೀಡುವ ಭರ ವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಹಿನ್ನೆಲೆಯಲ್ಲಿ ಶಂಕರ್ ಈ ಸ್ಥಾನ ಪಡೆಯಲು ತೀವ್ರ ಕಸರತ್ತು ಮಾಡುವುದು ಶತಃಸಿದ್ಧ. ಈಗ ಪರಿಷತ್ ಪ್ರವೇಶಕ್ಕೆ ಟಿಕೆಟ್ ಸಿಗದಿದ್ದರೆ ಬರುವ ಜೂನ್‌ನಲ್ಲಿ ವಿಧಾನಸಭೆ ಯಿಂದ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಅವ ಕಾಶ ಕಲ್ಪಿಸಬಹುದಾಗಿದೆ.

'ಯಡಿಯೂರಪ್ಪ ಸೂಚಿಸಿದರೆ ಸಂತೋಷದಿಂದ ಡಿಸಿಎಂ ಹುದ್ದೆ ತ್ಯಜಿಸುತ್ತೇನೆ'

ಅದಕ್ಕೂ ಮೊದಲೇ ನೀಡಬ ಕಾದರೆ ಪಕ್ಷದ ನಿಷ್ಠಾವಂತ ಪರಿಷತ್ ಸದಸ್ಯರನ್ನು ಗುರು ತಿಸಿ ರಾಜೀನಾಮೆ ಕೊಡಿಸಬೇಕಾಗುತ್ತದೆ. ಆದರೆ, ಪರಿ ಷತ್ತಿಗೆ ಆಯ್ಕೆಯಾಗದ ಹೊರತು ಶಂಕರ್ ಅವರಿಗೆ ಸಚಿವರಾಗುವುದಕ್ಕೆ ಸಾಧ್ಯವಿಲ್ಲ. ನಾಮಪತ್ರ ಸಲ್ಲಿಸಲು ಫೆ.6 ಕೊನೆಯ ದಿನವಾಗಿರುವುದರಿಂದ ಅಷ್ಟರೊಳಗಾಗಿ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಬಿಜೆಪಿಗೆ ಗೆಲುವು ಸುಲಭ

ವಿಧಾನಸಭೆಯಿಂದ ಆಯ್ಕೆಯಾಗುವ ಈ ವಿಧಾನ ಪರಿಷತ್ ಸದಸ್ಯತ್ವ ಬಿಜೆಪಿ ಅಭ್ಯರ್ಥಿಗೆ ಒಲಿ ಯುವುದು ಸ್ಪಷ್ಟ ವಾಗಿದೆ. 116 ಸದಸ್ಯರಿರುವ ಬಿಜೆಪಿಗೆ ಬಹುಮತವಿದ್ದು, ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವ ಕಾರಣ ಪಕ್ಷ ಕಣಕ್ಕಿಳಿಸುವ ಅಭ್ಯರ್ಥಿ ಗೆ ಗೆಲುವು ಖಚಿತ. ಒಂದು ವೇಳೆ ಕಾಂಗ್ರೆಸ್ (68), ಜೆಡಿಎಸ್ (34) ಕೈಜೋಡಿಸಿದರೂ 102 ಮತಗಳಷ್ಟೇ ಆಗುವ ಕಾರಣ ವಿಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆ.

'ಸಚಿವ ಸಂಪುಟ ವಿಸ್ತರಣೆ, ಬದಲಾವಣೆ ವಿಚಾರದಲ್ಲಿ ಸಿಎಂ ನಿರ್ಧಾರವೇ ಅಂತಿಮ'

Follow Us:
Download App:
  • android
  • ios