Asianet Suvarna News Asianet Suvarna News

ಸರ್ಕಾರ ಉಪ್ಪೂ ಕೊಡದಷ್ಟು ಪಾಪರ್‌ ಆಗಿದೆಯಾ?: ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದ ಅಶೋಕ್‌

ರಾಜ್ಯದಲ್ಲಿ ರೈತರು ಟ್ರಾನ್ಸ್‌ಫಾರ್ಮರ್‌ ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಂಗಳವಾರ ಸದನದಲ್ಲಿ ಗಂಭೀರ ಚರ್ಚೆಯಾಯಿತು. ಟ್ರಾನ್ಸ್‌ಫಾರ್ಮರ್‌ ಅಳವಡಿಸುವಾಗ ಅರ್ತಿಂಗಿಗೂ ರೈತರೇ ಉಪ್ಪುತರಬೇಕಾಗಿದೆ. ನಿಮ್ಮ ಸರ್ಕಾರದಲ್ಲಿ ಉಪ್ಪಿಗೂ ಬರವಾ, ಅಷ್ಟು ಪಾಪರ್‌ ಆಗಿದೆಯಾ ನಿಮ್ಮ ಸರ್ಕಾರ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ ಆರ್‌.ಅಶೋಕ್‌
 

R Ashok Slams Karnataka Congress Government grg
Author
First Published Dec 6, 2023, 10:58 AM IST

ವಿಧಾನಸಭೆ(ಡಿ.06):  ಕರಡಿ, ಚಿರತೆ ಇನ್ನಿತರೆ ವನ್ಯಜೀವಿಗಳ ಹಾವಳಿ ಇರುವ ಪ್ರದೇಶಗಳಲ್ಲಿ ರೈತರಿಗೆ ಹಗಲು ವೇಳೆಯಲ್ಲಿಯೇ ಸಂಪೂರ್ಣ 7 ತಾಸು ತ್ರೀ ಫೇಸ್‌ ವಿದ್ಯುತ್‌ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಬರ ನಿರ್ವಹಣೆ ಕುರಿತ ನಿಲುವಳಿ ಸೂಚನೆ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು, ರೈತರಿಗೆ ಸರ್ಕಾರ ಕೊಟ್ಟ ಭರವಸೆಯಂತೆ ಇಂದಿಗೂ 7 ತಾಸು ವಿದ್ಯುತ್‌ ಕೊಡುತ್ತಿಲ್ಲ. ಏಳು ತಾಸಲ್ಲಿ ಐದಾರು ಬಾರಿ ವ್ಯತ್ಯಯವಾಗುತ್ತಿರುತ್ತದೆ. ಇನ್ನು ಹಗಲು ಮತ್ತು ರಾತ್ರಿ ವಿದ್ಯುತ್‌ ನೀಡುತ್ತಿರುವುದರಿಂದ ವಿವಿಧೆಡೆ ರೈತರು ಹಾವು, ಕರಡಿ, ಚಿರತೆ ದಾಳಿಗೆ ತುತ್ತಾಗುತ್ತಿದ್ದಾರೆ. ಬರ ಅಧ್ಯಯನ ಪ್ರವಾಸದ ವೇಳೆ ಸಂಡೂರಿನ ರೈತನೊಬ್ಬ ಕರಡಿ ದಾಳಿಗೆ ಒಳಗಾಗಿ 120 ಹೊಲಿಗೆ ಹಾಕಿಸಿಕೊಂಡಿದ್ದಾನೆ. ಇಂತಹ ಪ್ರಕರಣದಲ್ಲಿ ಇಂಧನ ಇಲಾಖೆ ಪರಿಹಾರವನ್ನೂ ನೀಡುವುದಿಲ್ಲ. ಇಂತಹ ಘಟನೆ ತಪ್ಪಿಸಲು ತಪ್ಪಿಸಲು ಸಂಪೂರ್ಣ 7 ತಾಸೂ ವಿದ್ಯುತ್‌ ಅನ್ನು ಸರ್ಕಾರ ಬೆಳಗಿನ ಅವಧಿಯಲ್ಲೇ ನೀಡಬೇಕು ಎಂದು ಅಶೋಕ್‌ ಆಗ್ರಹಿಸಿದರು.

ಬ್ರ್ಯಾಂಡ್‌ ಬೆಂಗಳೂರು: ಸದನದಲ್ಲಿ ಕೈ-ಕಮಲ ಕಿತ್ತಾಟ, ನಗರದ ಮಾನ ಕಳೆಯಬೇಡಿ ಎಂದ ಖಾದರ್

ಇದಕ್ಕೆ ಉತ್ತರಿಸಿದ ಸಚಿವರು, ವನ್ಯ ಜೀವಿ ಹಾವಳಿ ಇರುವ ಪ್ರದೇಶಗಳಲ್ಲಿ ಸಂಪೂರ್ಣ ಬೆಳಗಿನ ವೇಳೆಯೇ ಏಳೂ ತಾಸು ತ್ರೀ ಫೇಸ್ ವಿದ್ಯುತ್‌ ನೀಡಲು ಅಧಿಕಾರಿಗಳಿಗೆ ಆದೇಶಿಸಲಾಗುವುದು. ಸಂಡೂರಿನ ರೈತನ ಪ್ರಕರಣದ ಮಾಹಿತಿಯನ್ನುಸರ್ಕಾರಕ್ಕೆ ಕೊಟ್ಟರೆ ಇಲಾಖೆಯಿಂದಲೇ ಅವರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ಸರ್ಕಾರ ಉಪ್ಪೂ ಕೊಡದಷ್ಟು ಪಾಪರ್‌ ಆಗಿದೆಯಾ?

ರಾಜ್ಯದಲ್ಲಿ ರೈತರು ಟ್ರಾನ್ಸ್‌ಫಾರ್ಮರ್‌ ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಂಗಳವಾರ ಸದನದಲ್ಲಿ ಗಂಭೀರ ಚರ್ಚೆಯಾಯಿತು. ಟ್ರಾನ್ಸ್‌ಫಾರ್ಮರ್‌ ಅಳವಡಿಸುವಾಗ ಅರ್ತಿಂಗಿಗೂ ರೈತರೇ ಉಪ್ಪುತರಬೇಕಾಗಿದೆ. ನಿಮ್ಮ ಸರ್ಕಾರದಲ್ಲಿ ಉಪ್ಪಿಗೂ ಬರವಾ, ಅಷ್ಟು ಪಾಪರ್‌ ಆಗಿದೆಯಾ ನಿಮ್ಮ ಸರ್ಕಾರ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಸದನದಲ್ಲಿ ಮಾತನಾಡಲು ಅವಕಾಶ ಸಿಗದ್ದಕ್ಕೆ ಕಾಂಗ್ರೆಸ್‌ ಶಾಸಕ ರಾಯರೆಡ್ಡಿ ವಾಕೌಟ್..!

ಬರದ ಕುರಿತು ನಿಲುವಳಿ ಸೂಚನೆ ವೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ರೈತರು ತಮ್ಮ ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋದಾಗ ಹೊಸ ಟ್ರಾನ್ಸ್‌ಫಾರ್ಮರ್‌ ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ. ಸರ್ಕಾರ ಎರಡು ದಿನದಲ್ಲಿ ಬದಲಾವಣೆ ಮಾಡಬೇಕೆಂದು ಹೇಳಿದ್ದರೂ 20 ದಿನಗಳಾದರೂ ಟ್ರಾನ್ಸ್‌ಫಾರ್ಮರ್‌ ಸಿಗುತ್ತಿಲ್ಲ. ಟ್ರಾನ್ಸ್‌ಫಾರ್ಮರ್‌ ಅಳವಡಿಸುವಾಗ ಅಗತ್ಯ ಆಯಿಲ್‌, ಇದ್ದಿಲು, ಉಪ್ಪನ್ನೂ ರೈತರೇ ತಂದು ಕೊಡಬೇಕಾಗಿದೆ. ಇದು ನಾನು ಪ್ರವಾಸ ಮಾಡಿದಾಗ ರೈತರೇ ತೋಡಿಕೊಂಡ ಅಳಲು. ಉಪ್ಪಿಗೂ ಸರ್ಕಾರದಲ್ಲಿ ಬರವಾ ಎಂದು ಪ್ರಶ್ನಿಸಿದರು.

ಈ ವೇಳೆ, ಆಡಳಿತ ಪಕ್ಷದ ಸುರೇಶ್‌ಗೌಡ ಗುಬ್ಬಿ ತಾಲ್ಲೂಕಿನಲ್ಲಿ 10 ಸಾವಿರ ರೈತರು ಟ್ರಾನ್ಸ್‌ಫಾರ್ಮರ್‌ಗೆ ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ಇನ್ನೂ ಕೊಟ್ಟಿಲ್ಲ. ಹಣ ಕೊಟ್ಟವರಿಗೆ ತತ್ಕಾಲ್‌ನಲ್ಲಿ ಟ್ರಾನ್ಸ್‌ಫಾರ್ಮರ್‌ ನೀಡುತ್ತಿದ್ದಾರೆ ಎಂದು ದೂರಿದರೆ, ಆಡಳಿತ ಪಕ್ಷದ ಬಾಲಕೃಷ್ಣ ಅವರು ನಮ್ಮ ಕ್ಷೇತ್ರದಲ್ಲೂ ರೈತರಿಂದ ಟ್ರಾನ್ಸ್‌ಫಾರ್ಮರ್‌ಗೆ ಹಿಂದಿನ ಸರ್ಕಾರದಲ್ಲಿ ₹30 ಸಾವಿರ ಹಣ ಪಡೆಯಲಾಗಿದೆ. ಇದುವರೆಗೆ ನೀಡಿಲ್ಲ. ಯಾವಾಗ ನೀಡುತ್ತೀರಿ ಎಂದು ಸರ್ಕಾರ ಉತ್ತರ ನೀಡಬೇಕೆಂದು ಆಗ್ರಹಿಸಿದರು.

Follow Us:
Download App:
  • android
  • ios