Asianet Suvarna News Asianet Suvarna News

ಸದನದಲ್ಲಿ ಮಾತನಾಡಲು ಅವಕಾಶ ಸಿಗದ್ದಕ್ಕೆ ಕಾಂಗ್ರೆಸ್‌ ಶಾಸಕ ರಾಯರೆಡ್ಡಿ ವಾಕೌಟ್..!

ರಾಯರೆಡ್ಡಿ ಅವರ ಸಲಹೆಯನ್ನು ಹಗುರವಾಗಿ ಪರಿಗಣಿಸಿದ ಯು.ಟಿ. ಖಾದರ್, ‘ನೀವು ಹಿರಿಯ ಸದಸ್ಯರಾಗಿ 12 ಗಂಟೆಗೆ ಸದನಕ್ಕೆ ಬಂದಿದ್ದೀರಿ. ತಡವಾಗಿ ಬಂದು ನೀವು ನಿಯಮಗಳ ಬಗ್ಗೆ ಪಾಠ ಮಾಡಿದರೆ ಹೇಗೆ? ಕುಳಿತುಕೊಳ್ಳಿ ಮೊದಲು’ ಎಂದು ಗದರಿದರು.
 

Basavaraj Rayareddy Walked out for not getting Chance to Speak in Belagavi Winter Session grg
Author
First Published Dec 6, 2023, 7:59 AM IST

ವಿಧಾನಸಭೆ(ಡಿ.06):  ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಆಗುತ್ತಿದ್ದ ಲೋಪಗಳನ್ನು ಪ್ರಸ್ತಾಪಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಕಾಂಗ್ರೆಸ್‌ ಹಿರಿಯ ಸದಸ್ಯ ಬಸವರಾಜ ರಾಯರೆಡ್ಡಿ ಸದನದಿಂದ ಸಭಾತ್ಯಾಗ ಮಾಡಿದ ಘಟನೆ ಮಂಗಳವಾರ ನಡೆಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಎನ್‌.ಎ. ಹ್ಯಾರಿಸ್‌ ಕೇಳಿದ ಪ್ರಶ್ನೆಗೆ, ಬಿಜೆಪಿಯ ಹಲವು ಸದಸ್ಯರು ಎದ್ದು ನಿಂತು ಪದೇ ಪದೇ ಮಾತನಾಡುತ್ತಿದ್ದರು. ಈ ಹಂತದಲ್ಲಿ ಸದನದ ಒಳಗಡೆ ಬಂದ ಬಸವರಾಜ ರಾಯರೆಡ್ಡಿ ಅವರು, ‘ಇದು ಕ್ವಶ್ಚನ್ ಅವರ್‌ ಅಥವಾ ಕ್ವಶ್ಚನ್‌ ಅವರ್ಸ್? ಒಂದು ಪ್ರಶ್ನೆ ಮೇಲೆ ಗಂಟೆಗಟ್ಟಲೇ ಮಾತನಾಡಲು ಅವಕಾಶ ನೀಡುತ್ತೀರಾ?’ ಎಂದು ಸ್ಪೀಕರ್‌ ಅವರಿಗೆ ಹೇಳಿದರು.

ತೆಲಂಗಾಣ ಸಿಎಂ ಆಯ್ಕೆ: 2ನೇ ದಿನವೂ ಡಿಕೆಶಿ, ಜಮೀರ್‌ ಸದನಕ್ಕೆ ಗೈರು

ರಾಯರೆಡ್ಡಿ ಅವರ ಸಲಹೆಯನ್ನು ಹಗುರವಾಗಿ ಪರಿಗಣಿಸಿದ ಯು.ಟಿ. ಖಾದರ್, ‘ನೀವು ಹಿರಿಯ ಸದಸ್ಯರಾಗಿ 12 ಗಂಟೆಗೆ ಸದನಕ್ಕೆ ಬಂದಿದ್ದೀರಿ. ತಡವಾಗಿ ಬಂದು ನೀವು ನಿಯಮಗಳ ಬಗ್ಗೆ ಪಾಠ ಮಾಡಿದರೆ ಹೇಗೆ? ಕುಳಿತುಕೊಳ್ಳಿ ಮೊದಲು’ ಎಂದು ಗದರಿದರು.

ಇದರಿಂದ ಸಿಟ್ಟಿಗೆದ್ದ ರಾಯರೆಡ್ಡಿ, ‘35 ವರ್ಷದಿಂದ ಈ ಸದನದ ಸದಸ್ಯನಾಗಿ ನನಗೆ ಅನುಭವ ಇದೆ. ನನ್ನ ಬಗ್ಗೆ ಕೇವಲವಾಗಿ ಮಾತನಾಡುತ್ತೀರಿ. ಸದನವನ್ನು ನಿಯಮಾವಳಿ ಪ್ರಕಾರ ನಡೆಸಿ ಎಂದು ಹೇಳಿದ್ದೇ ತಪ್ಪೇ? ನನಗೆ ಗೌರವ ಕೊಡದಿದ್ದರೆ ನಾನೇಕೆ ಇಲ್ಲಿರಬೇಕು. ನಾನು ವಾಕ್ ಔಟ್ ಮಾಡುತ್ತೇನೆ’ ಎಂದು ಹೊರನಡೆದರು.

Follow Us:
Download App:
  • android
  • ios