ಜಾತಿ ಒಡೆಯುವುದರಲ್ಲಿ ಸಿದ್ದುಗೆ ನೋಬೆಲ್ ಪ್ರಶಸ್ತಿ ನೀಡಬೇಕು: ಆರ್.ಅಶೋಕ್
ರಾಜ್ಯದಲ್ಲಿರೋದು ಪಾಪಿ ಸರ್ಕಾರ, ಸಿದ್ದರಾಮಯ್ಯರವರ ಹೃದಯದಲ್ಲಿ ಟಿಪ್ಪು ಸುಲ್ತಾನ್ ಇದ್ದಾರೆ. ಜಾತಿ ಮತ್ತು ಧರ್ಮ ಒಡೆಯುವುದರಲ್ಲಿ ಸಿದ್ದು ಎಕ್ಸ್‌ಫರ್ಟ್ ಅವರಿಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಸಿಎಂ ವಿರುದ್ಧ ಟೀಕೆಯ ಸುರಿ ಮಳೆ ಸುರಿಸಿದರು.
ಚಿಕ್ಕಮಗಳೂರು (ಫೆ.1) : ರಾಜ್ಯದಲ್ಲಿರೋದು ಪಾಪಿ ಸರ್ಕಾರ, ಸಿದ್ದರಾಮಯ್ಯರವರ ಹೃದಯದಲ್ಲಿ ಟಿಪ್ಪು ಸುಲ್ತಾನ್ ಇದ್ದಾರೆ. ಜಾತಿ ಮತ್ತು ಧರ್ಮ ಒಡೆಯುವುದರಲ್ಲಿ ಸಿದ್ದು ಎಕ್ಸ್‌ಫರ್ಟ್ ಅವರಿಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಸಿಎಂ ವಿರುದ್ಧ ಟೀಕೆಯ ಸುರಿ ಮಳೆ ಸುರಿಸಿದರು.
ಬುಧವಾರ ಪಕ್ಷದ ಕಚೇರಿಯ ಹೊರ ವಲಯದಲ್ಲಿ ನಡೆದ ಬಿಜೆಪಿ ಜಿಲ್ಲಾ ನೂತನ ಅಧ್ಯಕ್ಷ ದೇವರಾಜ್ ಶೆಟ್ಟಿ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾಗಿದ್ದು, 8 ಹಗರಣಗಳಾಗಿವೆ. ಸಿದ್ದರಾಮಯ್ಯ ಎಂದರೆ ಹಳೆ ಬ್ರಾಂಡ್ ಅಂಬಾಸಿಟರ್ ಇದ್ದಂತೆ. ಜಾತಿ ಗಣತಿಗಾಗಿ ನೇಮಕ ಮಾಡಲಾಗಿದ್ದ ಕಾಂತರಾಜು ಅವರು ವರದಿಗೆ ಸಹಿ ಮಾಡಿಲ್ಲ, ವರದಿಯ ಮೂಲ ಪ್ರತಿ ಕಳೆದು ಹೋಗಿದೆ. ಇದೀಗ ಸಿದ್ಧವಿರುವ ವರದಿ ಸಿದ್ದರಾಮಯ್ಯ ಬರೆಸಿದಂತಿದೆ ಎಂದರು.
ಅಗ್ನಿ ಅವಘಡಕ್ಕೆ ಕಂಪನಿ ಸುಟ್ಟು ಆರ್ಥಿಕ ಸಂಕಷ್ಟ; ತಾಯಿಯ ಗೆಳತಿ ಮನೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಇಂಜಿನೀಯರ್!
ಸಿದ್ದರಾಮಯ್ಯ ದಾರಿಯಲ್ಲಿ ಹೋಗುವವರನ್ನೆಲ್ಲಾ ಕರೆದು ನಾನು ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಮ ಎನ್ನುವುದು ಹೆಸರಿನಲ್ಲಿದ್ದರೆ ಸಾಲದು ಅದು ಮನಸ್ಸಿನಲ್ಲಿರಬೇಕು. ಸಿದ್ದರಾಮಯ್ಯ ಎದೆ ಬಗೆದರೆ ಟಿಪ್ಪು ಇದ್ದಾರೆ. ಅವರು ಆರಾಧಿಸುತ್ತಿರುವ ಜಗಮಗಿಸುತ್ತಿರುವ ಟಿಪ್ಪು ಇದ್ದಾರೆ ಎಂದ ಅವರು, ಗಂಟಲಲ್ಲಿ ಮಾತ್ರ ರಾಮ, ಒಳಗೆಲ್ಲ ಟಿಪ್ಪು ರಾರಾಜಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಾದಿ ಭಾಗ್ಯ ತರುವ ಮೂಲಕ ಮುಸಲ್ಮಾನರು ಮಾತ್ರ ಬಡವರು ಎಂದು ಹೇಳಿದರು, ಮುಲ್ಲಾಗಳಿಗೆ ಹತ್ತು ಸಾವಿರ ಕೋಟಿ ಕೊಡುವ ಭರವಸೆ ನೀಡಿದ್ದಾರೆ. ಆದರೆ, ರೈತರಿಗೆ ನೂರು ಕೋಟಿ ಕೊಡುತ್ತೇವೆ ಎಂದಿದ್ದಾರೆ ಎಂದು ಹೇಳಿದರು.
ಅದಕ್ಕೆ ಪೈಪೋಟಿ ಎನ್ನುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಅದನ್ನೇ ಹೇಳುತ್ತಿದ್ದಾರೆ. ಜಾತಿ ಒಡೆಯುವುದಕ್ಕೆ ನೋಬೆಲ್ ಪ್ರಶಸ್ತಿ ಕೊಟ್ಟರೆ ಅದನ್ನು ಸಿದ್ದರಾಮಯ್ಯನವರಿಗೆ ಕೊಡಬೇಕು ಅಂತಹ ಮನೆಹಾಳು ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಹನುಮ ಧ್ವಜ ಹಾರಬೇಕೆಂದು 24 ಮಂದಿ ಸಹಿ ಹಾಕಿದ್ದಾರೆ. ಹನುಮ ದೇವಸ್ಥಾನದ ಮುಂದೆ ಹನುಮ ಧ್ವಜ ಹಾಕೋಕೆ ಕಾಂಗ್ರೆಸ್ ಅಪ್ಪಣೆ ಯಾಕೆ ಬೇಕು ಎಂದು ಹೇಳಿದ ಅವರು, 22 ಹಳ್ಳಿಯ ಜನ ಹಣ ಹಾಕಿಧ್ವಜ ಕಟ್ಟಿ ನಿರ್ಮಿಸಿದ್ದಾರೆ. ಸರ್ಕಾರ ಒಂದು ಕೋಟಿ ಹಣ ಹಾಕಿ ಅದಕ್ಕಿಂತ ದೊಡ್ಡ ಕಂಬ ನಿರ್ಮಿಸಿ ಧ್ವಜ ಹಾರಿಸಲಿ ಎಂದು ಹೇಳಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರದ ಕೊಂಪೆಯಾಗಿದೆ. ಸಿದ್ದರಾಮಯ್ಯ ತುಂಬಾ ಚಾಣಕ್ಯರು ಅವರಿಗೆ ಹೆಂಗಸರಿಗೆ 2 ಸಾವಿರ ಕೊಟ್ಟು ಗಂಡಸರ ಬಳಿ 3 ಸಾವಿರ ಕಿತ್ತುಕೊಂಡು ಅದರಲ್ಲಿ ಒಂದು ಸಾವಿರ ರಾಹುಲ್‌ಗಾಂಧಿಗೆ ಲಂಚ ಕೊಡಲು ಕಮಿಷನ್ ಉಳಿಸಿಕೊಳ್ಳುತ್ತಿದ್ದಾರೆ
ಚಿಕ್ಕಮಗಳೂರಿಗೆ ಶಾಸಕ ಯಾರು ಎಂದು ಗೊತ್ತೇ ಇಲ್ಲ, ಒಂದೇ ಒಂದು ನಯಾ ಪೈಸೆ ಅಭಿವೃದ್ಧಿ ಕೆಲಸ ಮಾಡದ ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದರು.
ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ, ಹಳೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡುತ್ತಿದ್ದಾರೆಯೇ ಹೊರತು. ಹೊಸದಾದ ಒಂದಾದರೂ ಕಾಮಗಾರಿಗೆ ಅನುದಾನ ತಂದಿದ್ದಾರೆಯೇ ? ನಾವು ಅನುದಾನ ತಂದ ಎಲ್ಲಾ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಿ ಪೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪಿಎಸ್‌ಐ, ಡಾಕ್ಟರ್ ಅವರ ಬಳೀ ಪೋಸ್ಟಿಂಗ್ ಗೆ ಇಂತಿಷ್ಟು ಎಂದು ಮಾಮೂಲಿ ಪಡೆಯುವ ಪೊಲಿಟಿಕಲ್ ಕಲ್ಚರ್ ಎಲ್ಲೋ ದೂರದ ಜಿಲ್ಲೆಗಳಲ್ಲಿ ಇತ್ತು. ಆದ್ರೆ ಆ ಕಲ್ಚರ್ ನಮ್ಮ ಜಿಲ್ಲೆಗೆ ತಂದ ಅಪಕೀರ್ತಿ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸಲ್ಲುತ್ತದೆ. ಹಿರಿಯಕ್ಕನ ಛಾಳಿ ಮನೆಮಂದಿಗೆಲ್ಲ ಎಂದ ಅವರು, ವೈನ್ ಶಾಪ್, ಪೊಲೀಸ್ ಠಾಣೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಯಾವ ಸಂಸ್ಕೃತಿ ಜಿಲ್ಲೆಯಲ್ಲಿ ಇರಲಿಲ್ಲವೋ ಅದನ್ನ ಜಿಲ್ಲೆಗೆ ತಂದಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ಲೋಕಸಭಾ ಚುನಾವಣೆ ದೇಶ ಗೆಲ್ಲಿಸುವ ಚುನಾವಣೆ, ದೇಶವನ್ನು ಒಡೆಯಬೇಕೆನ್ನುವ ತುಕಡೇ ಗ್ಯಾಂಗ್ ಬೆಂಬಲಿಸುವ ಚುನಾವಣೆಯಲ್ಲ, ಅವರಿಗೆ ಬೆಂಬಲ ಕೊಟ್ಟ ಪಕ್ಷ ಕಾಂಗ್ರೆಸ್ ಎಂದು ಹೇಳಿದರು. ಮೋದಿ ಪ್ರಧಾನಿಯಾಗಬೇಕಾದರೆ ಒಂದೊಂದು ವೋಟ್, ಒಂದೊಂದು ಸಿಟ್ ಮುಖ್ಯ ಇದನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದರು.
ನೂತನ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಮಾತನಾಡಿ, ಇವತ್ತೇ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು 20-25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಮತದಾರರ ಮನಸ್ಸಿನಲ್ಲಿ ಬಿಜೆಪಿ, ಮೇದಿ, ಯಡಿಯೂರಪ್ಪ ಇದ್ದಾರೆ. ನಾವು ಅವರನ್ನು ತಲುಪುವ ಕೆಲಸ ಮಾಡಬೇಕು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ ಎಚ್.ಸಿ. ಕಲ್ಮುರುಡಪ್ಪ ಮಾತನಾಡಿ, ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಸೋತಿದ್ದೇವೆ. ಸೋಲು ಶಾಸ್ವತವಲ್ಲ. ಮುಂದಿನ ದಿನಗಳು ಬಿಜೆಪಿಯ ದಿನಗಳಾಗಿರುತ್ತವೆ ಎಂದರು.
ಹನುಮನ ನಾಡಲ್ಲಿ ಧ್ವಜ ಹಾರಿಸೋಕೆ ಕಾಂಗ್ರೆಸ್‌ನ ಕೇಳಬೇಕಾ?: ಆರ್.ಅಶೋಕ್
ಚುನಾವಣೆಯಲ್ಲಿ ಸೋತರೂ ಕೂಡಾ ಜನಮಾನಸದಲ್ಲಿ ಬಿಜೆಪಿ ಅಚ್ಚಳಿಯದೇ ಉಳಿದಿದೆ, ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನವರು ಆಶ್ಚರ್ಯಪಡುವ ಫಲಿತಾಂಶ ಕೊಡಬೇಕು ಎಂದು ಕರೆ ನೀಡಿದರು.
ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿಯಾಗಿದ್ದು, ಮುಂದೆ ಸರ್ಕಾರ ರಚನೆಯಾದ ದಿನಗಳಲ್ಲಿ ಕಾರ್ಯಕರ್ತರನ್ನೇ ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಮಾಜಿ ಶಾಸಕರುಗಳಾದ ಡಿ.ಎಸ್. ಸುರೇಶ್, ಬೆಳ್ಳಿಪ್ರಕಾಶ್, ಪಕ್ಷದ ಮುಖಂಡರಾದ ದೀಪಕ್ ದೊಡ್ಡಯ್ಯ, ಗಿರೀಶ್ ಪಟೇಲ್,ಪ್ರಮೇದ್ ಮದ್ವರಾಜ್, ಹರೀಶ್ ಪೂಂಜಾ ಹಾಗೂ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.