ಬೆಂಗಳೂರು[ಜ.29] ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ನಂತರ ದೋಸ್ತಿ ಸರ್ಕಾರದ ಪಾಲುದಾರಿಕೆ ಪಕ್ಷಗಳ ನಡುವೆ ಇದ್ದ ಭಿನ್ನಾಭಿಪ್ರಾಯ ಮತ್ತಷ್ಟು ಜಗಜ್ಜಾಹೀರು ಆಗಿದೆ. ಈ ಮಧ್ಯೆ ಸಚಿವ, ಸಿಎಂ ಕುಮಾರಸ್ವಾಮಿ ಅವರ ಸಹೋದರ ಎಚ್‌.ಡಿ ರೇವಣ್ಣ ಮತ್ತು  ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ  ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ವದಂತಿ ಮಂಗಳವಾರ ಸಂಜೆ ಹರಿದಾಡಿದೆ.

ಆಪರೇಶನ್ ವಿಚಾರಗಳಲ್ಲಿ ಇದ್ದ ದೋಸ್ತಿಗಳಿಗೆ ಇದು ಸಹಜವಾಗಿಯೇ ಆತಂಕ ಹೆಚ್ಚು ಮಾಡಿದೆ. ಆದರೆ ನಿಜಕ್ಕೂ ಇಬ್ಬರು ನಾಯಕರು ಭೇಟಿಯೇ ಆಗಿಲ್ಲ. ನಾಯಕರ ಭೇಟಿ ನಡುವಿನ ವಿಚಾರವನ್ನು ಪರಿಶೀಲನೆ ಮಾಡಿದಾಗ ಅಂತಹ ಯಾವುದೆ ರಾಜಕಾರಣದ ಬೆಳವಣಿಗೆ ನಡೆದಿಲ್ಲ ಎಂಬುದು ಗೊತ್ತಾಗಿದೆ.

ತಮ್ಮ ರಾಜೀನಾಮೆ ಕೊಟ್ರೆ.. ‘ಸೂಪರ್‌ ಸಿಎಂ’ ಏನ್‌ ಮಾಡ್ತಾರಂತೆ!

ಒಟ್ಟಿನಲ್ಲಿ ಆಪರೇಶನ್ ಸಂಕ್ರಾಂತಿ ಎಂಬ ವಿಚಾರ ಬದಿಗೆ ಸರಿಯುತ್ತಿದ್ದ ಹೊತ್ತಿನಲ್ಲಿ ರೇವಣ್ಣ  ಮತ್ತು ಬಿಎಸ್‌ವೈ ನಡುವಿನ ಭೇಟಿ ವಿಚಾರ  ಸಹಜವಾಗಿಯೇ ಕುತೂಹಲ ಮೂಡಿಸುವಂತ ವಿಚಾರ ಆಗಿತ್ತು. ಆದರೆ ಈ ಗಾಳಿ ಸುದ್ದಿ ಯಾವ ಮೂಲದಿಂದ ಹರಿದಾಡಿತೋ ಎಂಬುದು ಮಾತ್ರ ಗೊತ್ತಿಲ್ಲ.