ಉಡುಪಿ[ಜ.29]  ನನಗೇನೂ ಗೊತ್ತಿಲ್ಲ, ಎಲ್ಲಾ ವಿಚಾರ ಸಿಎಂಗೆ, ಪಕ್ಷದ ಅಧ್ಯಕ್ಷರಿಗೆ ಗೊತ್ತು ಸಿಎಂ ಕುಮಾರಸ್ವಾಮಿ ಅವರ ರಾಜೀನಾಮೆ ಹೇಳಿಕೆ ಬಗ್ಗೆ ರೇವಣ್ಣ  ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೇಸ್ ಶಾಸಕರ ಆಕ್ರೋಶಕ್ಕೂ ನೋ ಕಮೆಂಟ್ಸ್ ಎಂದ ರೇವಣ್ಣ. ನನಗೆ ಇದ್ಯಾವುದರ ಬಗೆಗೂ ಕಮೆಂಟ್ ಮಾಡುವ ಶಕ್ತಿ ಇಲ್ಲ. ಏನೋ ಸಣ್ಣಪುಟ್ಟ ವಿಚಾರ ಇರುತ್ತೆ, ನೀವ್ಯಾರೂ ಗಾಬರಿ ಆಗ್ಬೇಡಿ. ಎಲ್ಲಾ ಸೆಟ್ ರೈಟ್ ಆಗುತ್ತೆ, ಲೋಕಸಭಾ ಚುನಾವಣೆಗೂ ಆತಂಕ ಇಲ್ಲ ಎಂದು ಹೇಳಿದರು.

ದೇವೇಗೌಡ ಮೊಮ್ಮಗನ ‘ಕಾರು’ಬಾರು, ಇವರ ದರ್ಬಾರ್ ಕೇಳೋರಿಲ್ವಾ.?

ಸಿದ್ದರಾಮಯ್ಯ ರಿಂದ ಮಹಿಳೆಗೆ ಅವಮಾನ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ,  ಕೆಲವು  ಸನ್ನಿವೇಶದಲ್ಲಿ ಸಣ್ಣ ಪುಟ್ಟ ತೊಂದ್ರೆ ಆಗುತ್ತೆ. ಸಿದ್ದರಾಮಯ್ಯ ಆ ಥರ ಸ್ವಭಾವದವರಲ್ಲ. ಅವರ ಸ್ವಭಾವ ನನಗೆ ಚೆನ್ನಾಗಿ ಗೊತ್ತು. ಬೇಕುಂತ ಅವರೇನೂ ಮಾಡೋಕೆ ಹೋಗಿಲ್ಲ. ಸುಮ್ನೇ ಏನಮ್ಮಾ ಅಂಥ ಕೇಳೋಕೆ ಹೋಗಿದಾರೆ ಎಂದು

ಯಾರೂ ಅಲೋಚನೆ ಮಾಡೋದು ಬೇಡ. ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ. ಕುಮಾರಸ್ವಾಮಿಯೇ ಐದು ವರ್ಷ ಮುಖ್ಯಮಂತ್ರಿ ಆಗಿರ್ತಾರೆ. ಲೋಕಸಭೆನೂ ಜಾಯಿಂಟ್ ಆಗಿ ಎದುರಿಸ್ತೇವೆ. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ಕುಟುಂಬ ಸ್ಪರ್ಧೆ ವಿಚಾರ. ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಗಳು ತೀರ್ಮಾನ ಮಾಡ್ತಾರೆ. ಕುಟುಂಬ ಅಂತೇನಿಲ್ಲ, ಪಕ್ಷ ಏನ್ ಹೇಳುತ್ತೆ ಅದನ್ನ ಮಾಡುತ್ತೇವೆ ಎಂದರು.

ನಿಖಿಲ್ ಸ್ಪರ್ಧೆ ಪಕ್ಷಕ್ಕೆ ಬಿಟ್ಟ ವಿಷಯ. ನಾವ್ಯಾರೂ ಹಿಂಬಾಗಿಲಲ್ಲಿ ಬರ್ತಾ ಇಲ್ವಲ್ಲ ಡೈರೆಕ್ಟ್ ಬಾಗಿಲಲ್ಲೇ ಬರ್ತೇವೆ ಎಂದು ಕೆಲ ರಾಜಕಾರಣದ ಅಂಶಗಳನ್ನು ಉಲ್ಲೇಖ ಮಾಡಿದರು.