ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿ: ತೇಜಸ್ವಿ ಸೂರ್ಯ ಸವಾಲು
ಬಿಜೆಪಿಯ ಮೇಲೆ ಹಿಟ್ ಆ್ಯಂಡ್ ರನ್ ರೀತಿ ಭ್ರಷ್ಟಾಚಾರ ಆರೋಪ ಹೊರಿಸುತ್ತಿರುವ ಕಾಂಗ್ರೆಸ್ ನಾಯಕರು ಆರೋಪಗಳನ್ನು ಸಾಬೀತು ಮಾಡುತ್ತಿಲ್ಲ. ನಮ್ಮ ಮೇಲಿನ ಭ್ರಷ್ಟಾಚಾರದ ಕುರಿತು ದಾಖಲಾತಿ ಇದ್ದರೆ ಕೋರ್ಚ್‌ಗೆ ಹೋಗಿ ಸಾಬೀತು ಮಾಡುವ ಧೈರ್ಯ ತೋರಿಸಲಿ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸವಾಲು ಹಾಕಿದ್ದಾರೆ.
ಕುಂದಾಪುರ (ಏ.21) : ಬಿಜೆಪಿಯ ಮೇಲೆ ಹಿಟ್ ಆ್ಯಂಡ್ ರನ್ ರೀತಿ ಭ್ರಷ್ಟಾಚಾರ ಆರೋಪ ಹೊರಿಸುತ್ತಿರುವ ಕಾಂಗ್ರೆಸ್ ನಾಯಕರು ಆರೋಪಗಳನ್ನು ಸಾಬೀತು ಮಾಡುತ್ತಿಲ್ಲ. ನಮ್ಮ ಮೇಲಿನ ಭ್ರಷ್ಟಾಚಾರದ ಕುರಿತು ದಾಖಲಾತಿ ಇದ್ದರೆ ಕೋರ್ಚ್‌ಗೆ ಹೋಗಿ ಸಾಬೀತು ಮಾಡುವ ಧೈರ್ಯ ತೋರಿಸಲಿ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ(Tejasvi surya) ಸವಾಲು ಹಾಕಿದ್ದಾರೆ.
ಅವರು ಗುರುವಾರ ಬೈಂದೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ, ಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡಿದ ಕಾರ್ಯಕರ್ತನನ್ನು ಪಕ್ಷ ಗುರುತಿಸಿ ಬೈಂದೂರಿಗೆ ಟಿಕೆಟ್ ನೀಡಿದೆ. ಈ ಭಾಗದಲ್ಲಿ ಯುವಕರ, ದÜಮನಿತರ, ಸನಾತನ ಪರಂಪರೆಯ ಧ್ವನಿಯಾಗಿ ಗುರುರಾಜ್ ಗಂಟಿಹೊಳೆ ವಿಧಾನಸಭೆ ಪ್ರವೇಶಿಸಬೇಕು ಎಂದು ಆಶಿಸಿದರು.
ಚುನಾವಣಾ ನಿವೃತ್ತಿ ಘೋಷಣೆ, ಈಶ್ವರಪ್ಪ ನಿರ್ಧಾರ ಯುವಕರಿಗೆ ಸ್ಫೂರ್ತಿ: ತೇಜಸ್ವಿ ಸೂರ್ಯ
ಮೂರುವರೆ-ನಾಲ್ಕು ವರ್ಷಗಳ ಹಿಂದೆ ಯುವಮೋರ್ಚಾದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ತನ್ನನ್ನು ಪಕ್ಷ ಗುರುತಿಸಿ ಲೋಕಸಭಾ ಚುನಾವಣೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಪಕ್ಷದ ಈ ತೀರ್ಮಾನದಿಂದಾಗಿ ಅಂದು ಬೆಂಗಳೂರಿನ ದಕ್ಷಿಣ ಕಾರ್ಯಕರ್ತರಲ್ಲಿ ಯಾವ ರೀತಿಯ ಸಂಚಲನ ಮೂಡಿಸಿತ್ತೊ ಅದೇ ರೀತಿಯ ಮಿಂಚಿನ ಸಂಚಲನವನ್ನು ಇಂದು ಗುರುರಾಜ್ ಗಂಟಿಹೊಳೆ ಅವರನ್ನು ಅಭ್ಯರ್ಥಿ ಮಾಡುವ ಮೂಲಕ ನಾವೆಲ್ಲರೂ ಅನುಭವಿಸುತ್ತಿದ್ದೇವೆ ಎಂದರು.
ಸಣ್ಣ-ಪುಟ್ಟವ್ಯವಹಾರಗಳ ಜೊತೆ ಜೊತೆಗೆ ಅವರಿಗೆ ಬರುವ ಆದಾಯದಲ್ಲಿ ಈಶಾನ್ಯ ಭಾರತದಲ್ಲಿರುವ ನಮ್ಮ ಯುವಕರನ್ನು ಕರೆತಂದು ಅವರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡು ಒಂದೇ ಭಾರತದ ಪರಿಕಲ್ಪನೆಯನ್ನು ಹಳ್ಳಿಗಾಡಿನಲ್ಲಿ ತರುವ ಚಿಂತನೆಯಲ್ಲಿ ಗುರುರಾಜ್ ತೊಡಗಿಕೊಂಡಿದ್ದಾರೆ. ಕೋಟ್ಯಾಧೀಶ್ವರರ ಮಧ್ಯದಲ್ಲಿ ಗುಣಗಳ ಕೋಟ್ಯಾಧೀಶರಾಗಿ ಜನ ಸಂಪತ್ತನ್ನು ಗಳಿಸಿರುವ ಒಬ್ಬ ಕಾರ್ಯಕರ್ತನಾಗಿದ್ದಾರೆ ಎಂದರು.
ಹಣವಲ್ಲ, ಗುಣವಿರುವ ಅಭ್ಯರ್ಥಿ:
ಚಿತ್ರನಟಿ ಶ್ರುತಿ ಮಾತನಾಡಿ, ರಾಜ್ಯದ ಹಲವಾರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಹಳ ವಿಭಿನ್ನ. ಹಣವಿರುವ ಅಭ್ಯರ್ಥಿಗಳನ್ನು ನೋಡಿದ್ದೇನೆ. ಆದರೆ ಕೇವಲ ಗುಣಕ್ಕೆ ಹೆಸರಾಗಿರುವ ಅಭ್ಯರ್ಥಿ ಕ್ಷೇತ್ರದಲ್ಲಿದ್ದಾರೆ. ಬಿಜೆಪಿ ಕನಸೇ ಅದು. ಈ ಚುನಾವಣೆಯಲ್ಲಿ ಒಂದಷ್ಟುಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ 60 ಕ್ಕೂ ಹೆಚ್ಚು ಹೊಸ ಮುಖಗಳಿಗೆ ಬಿಜೆಪಿ ಪ್ರಾಶಸ್ತ್ಯ ನೀಡಿದೆ ಎಂದರು.
ದೇವೇಗೌಡರಂತೆ ಕುಳಿತಲ್ಲೆ ಟಿಕೆಟ್ ಘೋಷಣೆ ಬಿಜೆಪಿಯಲ್ಲಿ ನಡೆಯಲ್ಲ: ಸಂಸದ ತೇಜಸ್ವಿ ಸೂರ್ಯ
ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ಚುನಾವಣಾ ಉಸ್ತುವಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಖಂಡರಾದ ಸದಾನಂದ ಉಪ್ಪಿನಕುದ್ರು, ಪ್ರಿಯದರ್ಶಿನಿ ದೇವಾಡಿಗ ಇದ್ದರು.