ದೇವೇಗೌಡರಂತೆ ಕುಳಿತಲ್ಲೆ ಟಿಕೆಟ್ ಘೋಷಣೆ ಬಿಜೆಪಿಯಲ್ಲಿ ನಡೆಯಲ್ಲ: ಸಂಸದ ತೇಜಸ್ವಿ ಸೂರ್ಯ
ದೇವೆಗೌಡರು ಮನೆಯಲ್ಲಿ ಕುಳಿತು ಸೋಸೆಗೆ ನೀಡಬೇಕು, ಮಗಳಿಗೆ ಜೆಡಿಎಸ್ ಟಿಕೆಟ್ ಅರ್ಧ ಗಂಟೆಯಲ್ಲಿ ಟಿಕೆಟ್ ಘೋಷಣೆ ಮಾಡಬಹುದು, ಹಾಗೇ ಕಾಂಗ್ರೆಸ್‌ನಲ್ಲಿ ಕೆಲ ಮುಖಂಡರು ಕುಳಿತು ಟಿಕೆಟ್ ನಿರ್ಧರಿಸಬಹುದು.
ಬೀದರ್ (ಏ.09): ದೇವೆಗೌಡರು ಮನೆಯಲ್ಲಿ ಕುಳಿತು ಸೋಸೆಗೆ ನೀಡಬೇಕು, ಮಗಳಿಗೆ ಜೆಡಿಎಸ್ ಟಿಕೆಟ್ ಅರ್ಧ ಗಂಟೆಯಲ್ಲಿ ಟಿಕೆಟ್ ಘೋಷಣೆ ಮಾಡಬಹುದು, ಹಾಗೇ ಕಾಂಗ್ರೆಸ್‌ನಲ್ಲಿ ಕೆಲ ಮುಖಂಡರು ಕುಳಿತು ಟಿಕೆಟ್ ನಿರ್ಧರಿಸಬಹುದು. ಬಿಜೆಪಿಯಲ್ಲಿ ಇಂತಹದ್ದಕ್ಕೆ ಆಸ್ಪದ ಇಲ್ಲ ಬಿಜೆಪಿ ಕುಟುಂಬದ ಪಕ್ಷವೂ ಇಲ್ಲ. ಇದು ಒಬ್ಬ ನಾಯಕನ ಪಕ್ಷಲ್ಲ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ನುಡಿದರು. ಅವರು ನಗರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿ, ಜೆಡಿಎಸ್‌ನಲ್ಲಿ ದೇವೇಗೌಡರು ಮನೆಯಲ್ಲಿ ಕುಳಿತು ಸೋಸೆಗೆ ನೀಡಬೇಕು, ಮಗಳಿಗೆ ನೀಡಬೇಕು ಎಂದು ಕೇವಲ ಅರ್ಧ ಗಂಟೆಯಲ್ಲಿ ಪಕ್ಷದ ಟಿಕೆಟ್ ಘೋಷಣೆ ಮಾಡಬಹುದು.
ಅದೇ ರೀತಿ ಕಾಂಗ್ರೆಸ್‌ನಲ್ಲಿ ಕೆಲ ಮುಖಂಡರು ಕುಳಿತು ಟಿಕೆಟ್ ಘೋಷಿಸಬಹುದು ಬಿಜೆಪಿಯಲ್ಲಿ ಇಂತಹದ್ದಕ್ಕೆ ಆಸ್ಪದ ಇಲ್ಲ ಎಂದರು. ಜೆಡಿಎಸ್ ಹಾಗೂ ಕಾಂಗ್ರೆಸ್‌ನವರು ಪಕ್ಷದ ಟಿಕೆಟ್ ಘೋಷಣೆ ಮಾಡಿದಂತೆ ನಮ್ಮ ಪಕ್ಷದಲ್ಲಿ ಇಲ್ಲ. ಪ್ರಜಾಪ್ರಭುತ್ವದ ನೆಲೆಯಲ್ಲಿ ರಾಜ್ಯದ ಸುಮಾರು 22 ಸಾವಿರ ಶಕ್ತಿ ಕೇಂದ್ರಗಳ ಪ್ರಮುಖರ ಸಲಹೆ ಪಡೆದು ನಂತರ ಪಕ್ಷದ ವರಿಷ್ಠರು ಎರಡ್ಮೂರು ಸಭೆಗಳು ನಡೆಸಿದ ನಂತರ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತದೆ ಎಂದರು. ಬಿಜೆಪಿ ಕುಟುಂಬದ ಪಕ್ಷವೂ ಇಲ್ಲ. ಒಬ್ಬ ನಾಯಕನ ಪಕ್ಷವಲ್ಲ ಎಂದ ಅವರು, ಕಾರ್ಯಕರ್ತರೇ ಪಕ್ಷದ ಜೀವಾಳ ಹಾಗೂ ಬೆನ್ನೆಲುಬಾಗಿದ್ದಾರೆ.
ಬಟ್ಟೆಯಿಂದ ಶಿವಮೊಗ್ಗ ಏರ್‌ಪೋರ್ಟ್ ಮುಚ್ಚಲು ಚುನಾವಣಾ ಆಯೋಗಕ್ಕೆ ಮೊರೆ!
2014ರಲ್ಲಿ ನಾನೊಬ್ಬ ಸಾಮಾನ್ಯ ಯುವ ಮೋರ್ಚಾ ಕಾರ್ಯಕರ್ತನಾಗಿ ಗೋರ್ಟಾ ಗ್ರಾಮದಲ್ಲಿ ಇದ್ದು ಕೆಲಸ ಮಾಡಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಈ ಮಟ್ಟಕ್ಕೆ ಪಕ್ಷ ಬೆಳೆಸಿದೆ ಎಂದರೆ ಅದು ಕೇವಲ ಬಿಜೆಪಿಯಲ್ಲಿ ಮಾತ್ರ ಎಂದರು. ರಾಜ್ಯಾದ್ಯಂತ ಎಲ್ಲ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ ಇಲ್ಲಿನ ಯುವ ಕಾರ್ಯಕರ್ತರ ಉತ್ಸಾಹ ಹಾಗೂ ಶ್ರದ್ಧೆ ನೋಡಿದರೆ ನಾವು ಅಧಿಕಾರಕ್ಕೆ ಬರುವುದನ್ನು ಯಾವ ಶಕ್ತಿಯು ತಡೆಯಲು ಸಾಧ್ಯವಿಲ್ಲ ಬರುವ ಮೇ 13ರಂದು ಪೂರ್ಣ ಬಹುಮತದಿಂದ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಇದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ತೇಜಸ್ವಿ ಸೂರ್ಯ ನುಡಿದರು.
ಹಿಂದಿನ ಚುನಾವಣೆಯಲ್ಲಿ ಸುದೀಪ ಸಜ್ಜನರಾಗಿದ್ದರೆ?: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡಲು ಚಿತ್ರನಟ ಸುದೀಪ ಅವರು ಸಿದ್ಧರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಸುದೀಪ ಅವರ ಸಿನೆಮಾ ಬ್ಯಾನ್ ಮಾಡಿ ಅವರು ಸರಿಯಿಲ್ಲ ಎಂದು ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪರ ಪ್ರಚಾರ ಮಾಡಿದಾಗ ಅವರು ಸಜ್ಜನರಾಗಿದ್ದರೆ ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದರು.
ಗ್ಯಾರಂಟಿ ಇಲ್ಲದ ಪಕ್ಷದಿಂದ ಗ್ಯಾರಂಟಿ ಕಾರ್ಡ್ ಹಂಚಿಕೆ: ಕಾಂಗ್ರೆಸ್ ಪಕ್ಷ ಮುಂದೆ ಇರುತ್ತದೆಯೋ ಇಲ್ಲವೋ ಅದರ ಗ್ಯಾರಂಟಿಯೇ ಇಲ್ಲ. ಅಲ್ಲದೇ ಮುಂಬರುವ ಚುನಾವಣೆಯಲ್ಲಿ ಗೆದ್ದು ಬರುವ ಗ್ಯಾರಂಟಿ ಕೂಡ ಇಲ್ಲ. ಆದರೂ ಜನರಿಗೆ ಗ್ಯಾರಂಟಿ ಕಾರ್ಡ್ ಹಂಚಲು ಹೊರಟಿದೆ. ಕಾಂಗ್ರೆಸ್ 3000, 2000 ರು. ಗ್ಯಾರಂಟಿ ನೀಡುತ್ತಿದ್ದರೆ ಬಿಜೆಪಿ ಪಕ್ಷವು ಜನರನ್ನು ಆತ್ಮ ನಿರ್ಭರರನ್ನಾಗಿಸುವ ಕೆಲಸಕ್ಕೆ ಮುಂದಾಗಿದೆ. ವಿದ್ಯಾವಂತರಿಗೆ ಉದ್ಯೋಗ ನೀಡುವುದು ಅಥವಾ ಉದ್ಯೋಗ ನೀಡುವ ಸಾಮರ್ಥ್ಯ ಸ್ಥಾಪನೆ ಮಾಡುವುದಕ್ಕೆ ಮುಂದಾಗಿದೆ ಎಂದರು.
ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಎಚ್.ಎಂ.ರೇವಣ್ಣ ಅಸಮಾಧಾನ
ಕೋವಿಡ್‌ನಂತಹ ಪರಿಸ್ಥಿಯಿಯಲ್ಲಿ ಮೋದಿ ಸ್ಥಳದಲ್ಲಿ ರಾಹುಲ್ ಪ್ರಧಾನಿಯಾಗಿದ್ದರೆ ಈ ದೇಶದಲ್ಲಿ ಯಾರೂ ಕೂಡ ಜೀವಂತವಾಗಿ ಇರುತ್ತಿರಲಿಲ್ಲ. ಅಂತಹ ಸಮಯದಲ್ಲಿ ಬಿಜೆಪಿಯ ಯುವ ಪಡೆ ಕೋವಿಡ್‌ನಲ್ಲಿ ಜನರ ಮನೆ ಬಾಗಿಲಿಗೆ ತೆರಳಿ ಅವರ ಕಷ್ಟಗಳನ್ನು ದೂರ ಮಾಡಿದ ಹೆಮ್ಮೆ ನಮಗಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.