Asianet Suvarna News Asianet Suvarna News

ಮಾರ್ಚ್ 25ಕ್ಕೆ ದಾವಣಗೆರೆಗೆ ಆಗಮಿಸಲಿರುವ ಪ್ರಧಾನಿ ಮೋದಿ : 150 ಸೀಟು ಗೆಲ್ಲಲು ಇಲ್ಲಿಂದಲೇ ರಣಕಹಳೆ!

ಮಾರ್ಚ್ 25 ರಂದು ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನೆಲೆ ಸಂಸದ ಜಿಎಂ ಸಿದ್ದೇಶ್ವರ ಮೋದಿ ಸಮಾವೇಶದ ಕುರಿತು ಪತ್ರಿಕಾಗೋಷ್ಠಿ ನಡೆಸಿದರು.  

 

Prime Minister Narendra Modi will visit Davangere on March 25 vijayasankalpayatre rav
Author
First Published Mar 23, 2023, 5:33 PM IST

ದಾವಣಗೆರೆ (ಮಾ.23)  ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನೆಲೆ ಸಂಸದ ಜಿಎಂ ಸಿದ್ದೇಶ್ವರ ಮೋದಿ ಸಮಾವೇಶದ ಕುರಿತು ಪತ್ರಿಕಾಗೋಷ್ಠಿ ನಡೆಸಿದರು.  

ಮಾರ್ಚ್ 25 ರಂದು ಮಧ್ಯಾಹ್ನ 3 ಗಂಟೆಗೆ  ಮೋದಿಯವರು(PM Narendra Modi) ದಾವಣಗೆರೆ ಜಿ ಎಂ ಐಟಿ ಕ್ಯಾಂಪಸ್(Davanagere IIT Campus) ಆಗಮಿಸಲಿದ್ದಾರೆ. ಪ್ರಧಾನಿ ಆಗಮನದ ವೇಳೆ ಸುರಕ್ಷತೆ ,ಸೂಕ್ತ ವ್ಯವಸ್ಥೆ ಬಗ್ಗೆ ಈಗಾಗಲೇ ಸಭೆ ಮಾಡಲಾಗಿದೆ ಎಂದರು.

 

Karnataka Politics: ಕಾಂಗ್ರೆಸ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಂಸದ ಜಿ.ಎಂ.ಸಿದ್ದೇಶ್ವರ

ರಾಜ್ಯದೆಲ್ಲೆಡೆ ಮೋದಿ ಮೇನಿಯಾ ಶುರುವಾಗಿದೆ. ವಿಜಯ ಸಂಕಲ್ಪ ಯಾತ್ರೆ ರಾಜ್ಯದ ನಾಲ್ಕು ಭಾಗಗಳಲ್ಲಿ ನಡೆಯಿತು.‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಜೆಪಿ ನಡ್ಡಾ(JP Nadda) ಆರಂಭಿಸಿದ ವಿಜಯ ಸಂಕಲ್ಪ ಯಾತ್ರೆ (Vijayasankalpa yatre) ನಾಲ್ಕು ದಿಕ್ಕುಗಳಲ್ಲಿ ಮುಗಿದು ದಾವಣಗೆರೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯುತ್ತಿದೆ. ಅಂದಾಜು 10 ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ ಎಂದರು.

ಈಗಾಗಲೇ ಇಡೀ ದಾವಣಗೆರೆಯನ್ನು ಕಾರ್ಯಕರ್ತರು ಕೇಸರಿಮಯ ಮಾಡಿದ್ದಾರೆ. ಇಷ್ಟು ವಿಜೃಂಭಣೆ ಕಾರ್ಯಕ್ರಮ ದಾವಣಗೆರೆ ಇತಿಹಾಸದಲ್ಲಿ ನಡೆದಿಲ್ಲ. ಮೋದಿಯವರು ಈ ಕಾರ್ಯಕ್ರಮದಲ್ಲಿ ಜನರ ಮಧ್ಯೆ ಹೋಗುತ್ತಾರೆ. ಅದಕ್ಕಾಗಿ ವಿಶೇಷ ರಸ್ತೆ ವ್ಯವಸ್ಥೆ ಮಾಡಿದ್ದೇವೆ. ಒಟ್ಟು 8 ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ‌ ಮೂಲೆಯಿಂದ 10 ಲಕ್ಷ ಕಾರ್ಯಕರ್ತರು ಬರುತ್ತಾರೆ. ದಾವಣಗೆರೆಯಿಂದಲೇ  3 ಲಕ್ಷ ಕಾರ್ಯಕರ್ತರು ಬರುತ್ತಾರೆ. ಈ ಕಾರ್ಯಕ್ರಮದಲ್ಲಿ  ಕಾರ್ಯಕರ್ತರು ಮೋದಿಯವರನ್ನು ಬಹಳ ಹತ್ತಿರದಿಂದ ನೋಡುವ ವ್ಯವಸ್ಥೆ ಮಾಡಲಾಗಿದೆ. ಎಂದರು.

 

'ನನ್ನ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರ ಮಾಡುತ್ತಿದೆ'

ಈ ಬಾರಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಎಲ್ಲೆಡೆ ಬಿಜೆಪಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ನರೇಂದ್ರ ಮೋದಿ, ಅಮಿತ್ ಶಾ ಹೋದಲೆಲ್ಲಾ ಜನಸಾಗರವೇ ಹರಿದು ಬರುತ್ತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ  150 ಸೀಟು ಗೆಲ್ಲುವುದು ಖಚಿತ. ಆ ಗೆಲುವಿಗೆ ದಾವಣಗೆರೆಯಿಂದಲೇ ವಿಜಯೋತ್ಸವ ಕಹಳೆ ಮೊಳಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios