Asianet Suvarna News Asianet Suvarna News

Karnataka Politics: ಕಾಂಗ್ರೆಸ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಂಸದ ಜಿ.ಎಂ.ಸಿದ್ದೇಶ್ವರ

ಕೇವಲ 10 ತಿಂಗಳಲ್ಲೇ ಚುನಾವಣೆ ಬರಲಿದ್ದು, ನೀವು ಚುನಾವಣೆಗೆ ತಯಾರಾಗಿ ಎಂದು ಸಂಸದ ಜಿಎಂ ಸಿದ್ದೇಶ್ವರ್ ಅಭಿಪ್ರಾಯಿಸಿದರು. ದಾವಣಗೆರೆ ಶಾಮನೂರು ಜಯದೇವಪ್ಪ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಜಿ ಎಂ ಸಿದ್ದೇಶ್ವರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

Mp Gm Siddeshwar Slams on Karnataka Congress in Davanagere gvd
Author
Bangalore, First Published Apr 20, 2022, 7:39 PM IST

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಏ.20): ಕೇವಲ 10 ತಿಂಗಳಲ್ಲೇ ಚುನಾವಣೆ ಬರಲಿದ್ದು, ನೀವು ಚುನಾವಣೆಗೆ (Election) ತಯಾರಾಗಿ ಎಂದು ಸಂಸದ ಜಿಎಂ ಸಿದ್ದೇಶ್ವರ (GM Siddeshwara) ಅಭಿಪ್ರಾಯಿಸಿದರು. ದಾವಣಗೆರೆ ಶಾಮನೂರು ಜಯದೇವಪ್ಪ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಜಿ ಎಂ ಸಿದ್ದೇಶ್ವರ್ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದರು. ಏಳು ಕ್ಷೇತ್ರದಲ್ಲಿ ಐದು ಕ್ಷೇತ್ರದಲ್ಲಿ ಬಿಜೆಪಿ ಇದೆ. 2023ನೇ ಇಸವಿಯಲ್ಲಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. ಕಾಂಗ್ರೆಸ್ ಶಾಸಕರಿರುವ ಹರಿಹರ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಈ ಬಾರಿ ಗೆಲ್ಲಬೇಕು ಎಂದರು.

ಅಟಲ್ ಬಿಹಾರಿ ವಾಜಪೇಯಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿದ್ದವು. ಆಗ ಬಿಜೆಪಿ ಕಾರ್ಯಕರ್ತರು ನಮ್ಮ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲಿಲ್ಲ. ಅದಕ್ಕೆ ನಾವು ಸೋತೆವು ಎಂದಿದ್ದರು . ಅಟಲ್ ಬಿಹಾರಿ ವಾಜಪೇಯಿ ಯೋಜನೆಗಳು ಇಂದಿಗು ಪ್ರಸ್ತುತಿ. ಆದೇ ರೀತಿ ಮೋದಿಯವರು ಕೊರೊನೊ ಕಂಟ್ರೋಲ್ ಮಾಡಿದ್ದು, ವ್ಯಾಕ್ಸಿನ್ , ಉಚಿತ ದವಸ ಧಾನ್ಯ ವಿತರಣೆ, ಪ್ರಪಂಚದಲ್ಲಿ ದೇಶದ ಸ್ಥಾನಮಾನ ಹೀಗೆ ವಿವಿಧ ವಿಚಾರಗಳನ್ನು ನಾವು ಹೇಳಬೇಕಿದೆ. ಯಡಿಯೂರಪ್ಪನವರ ಅವಧಿಯಲ್ಲಿ ಹಲವು ಯೋಜನೆಗಳು, ಬಸವರಾಜ್ ‌ಬೊಮ್ಮಾಯಿ ಯೋಜನೆಗಳನ್ನು  ಸುಧಾರಣೆಗಳನ್ನು ಮಾಡಿದ್ದಾರೆ.

ದಾವಣಗೆರೆ ಬಿಜೆಪಿ ವಿಭಾಗೀಯ ಸಮಾವೇಶದಲ್ಲಿ ಕೈ ವಿರುದ್ಧ ಯಡಿಯೂರಪ್ಪ ಗುಡುಗು

ಎಸ್ಸಿ ಎಸ್ಟಿಗೆ ಹಣ ನೀಡಿಕೆ, ಮಠಗಳಿಗೆ 117 ಕೋಟಿ ಹಣ ನೀಡಿರುವುದು, ನೀರಾವರಿ ಯೋಜನೆಗಳನ್ನು ಕ್ರಾಂತಿ, ಕಂದಾಯ ಇಲಾಖೆಯಲ್ಲಿ ಹೊಸ ಹೊಸ ಯೋಜನೆಗಳನ್ನು ಮಾಡಿದ್ದಾರೆ.ಬೈರತಿ ಬಸವರಾಯ ಪಾಲಿಕೆ ನಗರಸಭೆ, ಪುರಸಭೆಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದ್ದರಿಂದ ನಾಳೆಯಿಂದಲೇ ಬಿಜೆಪಿ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವ ಅವಶ್ಯಕತೆ ಇದೆ. ಕಾಂಗ್ರೆಸ್ ಬಡವರ ಹೆಸರಿನಲ್ಲಿ ಹೊಟ್ಟೆ ತುಂಬಿಸಿಕೊಂಡರು. ಆದರೆ ಮೋದಿ ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಮಾಡಿದ್ದಾರೆ. ಆ ಕಾರಣಕ್ಕಾಗಿ ದಾವಣಗೆರೆಯಲ್ಲಿ ಎಂಟಕ್ಕು ಎಂಟು ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.

ಶಾಮನೂರು ಎಸ್‌ಎಸ್ ಮಲ್ಲಿಕಾರ್ಜುನಗೆ ತಿರುಗೇಟು: ಶಾಮನೂರು ಪುತ್ರ ಮಾಜಿ ಸಚಿವ  ಎಸ್ ಎಸ್ ಮಲ್ಲಿಕಾರ್ಜುನಗೆ ಚುನಾವಣೆ ಹತ್ತಿರ ಬಂದಾಗ ಕುಂದವಾಡ ಕೆರೆ ನೆನಪಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ. ದಾವಣಗೆರೆಯ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 20:20 ಕಮಿಷನ್ ಪಡೆಯಲಾಗುತ್ತಿದೆ ಎಂಬ ಮಾಜಿ ಸಚಿವರ  ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು ಹತಾಶರಾಗಿ ಎಸ್ ಎಸ್ ಮಲ್ಲಿಕಾರ್ಜುನ್ ಈ ರೀತಿ ಹೇಳುತ್ತಿದ್ದಾರೆ. ಯಾರೋ‌ ಜೊತೆ ಸೇರಿ ಶ್ರೀಮಂತಿಕೆಯ ಅಹಂಕಾರದಿಂದ‌ ಮಾತನಾಡುತ್ತಿದ್ದಾರೆ. ಯಾರು ಕೂಡ ಕಮಿಷನ್ ತೆಗೆದುಕೊಂಡಿಲ್ಲ, ಅವರ ಅವಧಿಯಲ್ಲಿ ತೆಗೆದುಕೊಂಡಿದ್ದಾರೆ ಅದಕ್ಕೆ ಈ ರೀತಿ ಹೇಳುತ್ತಿದ್ದಾರೆ. ಅವರನ್ನು ಮೂರು ಬಾರಿ ಲೋಕಸಭೆ, ವಿಧಾನಸಭೆಯಲ್ಲಿ ಸೋಲಿಸಿದ್ದೇವೆ.

BJP Core Committee Meeting ಸಿದ್ಧರಾಮಯ್ಯ ವಿರುದ್ಧ BSY ಗುಡುಗು

ಈಗ ಚುನಾವಣೆ ಹತ್ತಿರ ಬಂದಾಗ ಕುಂದುವಾಡ ಕೆರೆ ನೆನಪಾಗಿದೆ. ಸೋತಾಗಿನಿಂದ ಹೊರಗೆ ಬಂದಿಲ್ಲ, ಈಗ ಮಾತನಾಡುತ್ತಿದ್ದಾರೆ.ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ತಂದೆ ಹೆಸರು ಇಡಲು ನಾವು ಸರ್ಕಾರದ ಪರ್ಮಿಷನ್ ತೆಗೆದುಕೊಂಡಿದ್ದೇವೆ. ಅವರು ಎಲ್ಲೇಲ್ಲಿ ಹೆಸರು ಇಟ್ಟಿದ್ದಾರೆ, ಪರ್ಮಿಷನ್ ತೆಗೆದುಕೊಂಡಿದ್ದಾರೋ ಇಲ್ಲವೋ ಹೇಳಲಿ ಎಂದರು. ಅಧಿಕಾರಕ್ಕೆ ಬಂದಾಗ ನಮ್ಮ ತಂದೆಯ ಹೆಸರು ತಗಿಸುತ್ತಾರೆಂದು‌ ಹೇಳಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬರೋದಿಲ್ಲ ಇನ್ನೇಲ್ಲಿ ಹೆಸರು ತೆಗೆಸುತ್ತಾರೆ ಎಂದು ವ್ಯಂಗ್ಯವಾಡಿದರು. ನಾನು ಅವರ ಹೆಸರು ತೆಗೆಸಬಹುದು ಆದರೆ ಅಂತಹ ಕೀಳು ಮಟ್ಟಕ್ಕೆ‌ ನಾನು ಇಳಿಯುವುದಿಲ್ಲ. ಕಾಂಗ್ರೆಸ್‌ನ ‌ನಡವಳಿಕೆಗೆ ಬೇಸತ್ತು ಕೆಲವರು ಬಿಜೆಪಿಗೆ ಬರುತ್ತಿದ್ದಾರೆ. ಇನ್ನು ಹಲವರು ಕೂಡ ನಮ್ಮ ಪಕ್ಷ ಸೇರಲಿದ್ದಾರೆ ಎಂದರು. 

Follow Us:
Download App:
  • android
  • ios