ಬಿಜೆಪಿ ವಿರುದ್ಧ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದ್ದಾಯ್ತು ಇದೀಗ ತಪಶೆಟ್ಟಿ ಆಕ್ರೋಶ
2018ರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಪಟ್ಟೆ. ನಂತರ ಶಾಸಕರು ನನ್ನನ್ನು ಕಡೆಗಣಿಸುತ್ತಾ ಬಂದರು. ಅವಕಶ್ಯತೆ ಇಲ್ಲವೆಂದು ದೂರವಿಡುತ್ತಾ ಹೋದರು. ಶಾಸಕರ ಪ್ರವೃತ್ತಿ ಯೂಸ್ ಆ್ಯಂಡ್ ಥ್ರೋ ಆಗಿದೆ. ನನ್ನೊಬ್ಬನಿಗೆ ಈ ರೀತಿ ಆಗಿಲ್ಲ. ಸಾಕಷ್ಟುಕಾರ್ಯಕರ್ತರಿಗೆ ಇದೇ ಗತಿಯಾಗಿದೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿಹೇಳಿದರು.
ಬಾಗಲಕೋಟೆ (ಏ.28) : 2018ರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಪಟ್ಟೆ. ನಂತರ ಶಾಸಕರು ನನ್ನನ್ನು ಕಡೆಗಣಿಸುತ್ತಾ ಬಂದರು. ಅವಕಶ್ಯತೆ ಇಲ್ಲವೆಂದು ದೂರವಿಡುತ್ತಾ ಹೋದರು. ಶಾಸಕರ ಪ್ರವೃತ್ತಿ ಯೂಸ್ ಆ್ಯಂಡ್ ಥ್ರೋ ಆಗಿದೆ. ನನ್ನೊಬ್ಬನಿಗೆ ಈ ರೀತಿ ಆಗಿಲ್ಲ. ಸಾಕಷ್ಟುಕಾರ್ಯಕರ್ತರಿಗೆ ಇದೇ ಗತಿಯಾಗಿದೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ(Prakash tapashetty)ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕಾರಜೋಳ, ನಿರಾಣಿ ಸೇರಿದಂತೆ ನನ್ನ ಹಿತೈಷಿಗಳು ಬಿಜೆಪಿಯನ್ನು 2018ರಲ್ಲಿ ಸೇರ್ಪಡೆ ಮಾಡಿಸಿದರು. ಶಾಸಕರು ಕಳೆದ ಐದು ವರ್ಷಗಳಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೊರಟಿರುವುದು ಸರಿಯಲ್ಲ. ಪಕ್ಷದಲ್ಲಿರುವ ಮುಖಂಡರು, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಯಾವುದೇ ಗೌರವ ನೀಡದೇ ನಡೆದುಕೊಳ್ಳುತ್ತಾರೆ. ಸೌಜನ್ಯಕ್ಕೂ ಮಾತನಾಡುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲೆತ್ನ: ಸಿದ್ದರಾಮಯ್ಯ ಕಿಡಿ
ಹಿಂದಿನ ಚುನಾವಣೆಯಲ್ಲಿ ಪಿ.ಎಚ್.ಪೂಜಾರ ಅವರು ಸೇರ್ಪಡೆಯಾದರು. ಅವರು ಗೆಲುವಿಗಾಗಿ ಶ್ರಮಪಟ್ಟರು. ಅವರನ್ನು ಸಹಿತ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಡೆದುಕೊಳ್ಳುತ್ತಿದ್ದಾರೆ. ಪೂಜಾರ ಅವರು ಪಕ್ಷಕ್ಕೆ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಅಂಥವರನ್ನು ದೂರವಿಟ್ಟಿದ್ದಾರೆ. ಬಿಜೆಪಿ ಸಭೆಗಳಲ್ಲಿ ನನ್ನನ್ನು ಹಾಗೂ ಪೂಜಾರ ಅವರನ್ನು ಅವಹೇಳನ ಮಾಡುತ್ತಾ ವ್ಯಂಗ್ಯವಾಗಿ ಮಾತನಾಡುತ್ತಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಪ್ರಕಾಶ ತಪಶೆಟ್ಟಿಅವರು ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷ ಕ್ಕೆ ಬಲ ಬಂದಂತಾಗಿದೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ಮಾತನಾಡಿ, ನನ್ನಿಂದ ಲೋಪಗಳು ಆಗಿದ್ದು ನಿಜ. ನೋವುಗಳು ಆಗಿವೆ. ಇನ್ನು ಮುಂದೆ ಇಂತಹ ಘಟನೆಗಳು ಆಗಲಾರದಂತೆ ನೋಡಿ ಕೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬದ್ಧರಾಗಬೇಕು: ಬಿಎಸ್‌ವೈ
ಮಾಜಿ ಸಚಿವ ಅಜಯಕುಮಾರ ಸರನಾಯಕ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಬಸವ ರಾಜ ಬದಾಮಿ, ನಾಗರಾಜ್ ಹದ್ಲಿ, ರಕ್ಷಿತಾ ಈಟಿ, ಸಿಕಂದರ್ ಅಥಣಿ ಉಪಸ್ಥಿತರಿದ್ದರು.