Asianet Suvarna News Asianet Suvarna News

ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಬೆನ್ನಲ್ಲೇ ಬೂತ್ ವಿಜಯ ಅಭಿಯಾನ ಘೋಷಿಸಿದ ಪ್ರಹ್ಲಾದ್ ಜೋಶಿ

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಗುಜರಾತ್ ಮಾದರಿಯ ಬೂತ್ ವಿಜಯ ಅಭಿಯಾನವನ್ನ ರಾಜ್ಯದಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ.
 

Prahlad Joshi announced the booth victory campaign after Amit Shah came to karnataka gvd
Author
First Published Jan 1, 2023, 8:00 PM IST

ಬೆಂಗಳೂರು (ಜ.01): ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಗುಜರಾತ್ ಮಾದರಿಯ ಬೂತ್ ವಿಜಯ ಅಭಿಯಾನವನ್ನ ರಾಜ್ಯದಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವರು, ನಾಳೆಯಿಂದ 10 ದಿನಗಳ ಬೂಥ್ ವಿಜಯ ಅಭಿಯನದ ವೇಳಾಪಟ್ಟಿಯನ್ನ ಘೋಷಿಸಿದರು. 10 ದಿನಗಳ ಅಭಿಯಾನದಲ್ಲಿ 20 ಲಕ್ಷ ಕಾರ್ಯಕರ್ತರು ಕೈ ಜೋಡಿಸಲಿದ್ದಾರೆ. 

ಚುನಾವಣಾ ಚಾಣಾಕ್ಯ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಬಳಿಕ ರಾಜ್ಯದಲ್ಲಿ ಬಿಜೆಪಿ ಹಲವು ಸಂಘಟನಾತ್ಮಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದು, ಬೂಥ್ ವಿಜಯ ಅಭಿಯಾನ ಮಹತ್ವದ್ದಾಗಿದೆ. ಪ್ರತಿಯೊಂದು ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷಕ್ಕೆ ಅತಿ ಹೆಚ್ಚು ಮತ ತರುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಬೂತ್ ಮಟ್ಟದಲ್ಲಿ ಕಡಿಮೆ ಮತಗಳ ಪಡೆದಿದೆ. ಎಲ್ಲಿ ಕಡಿಮೆ ಮತಗಳು ಬಂದಿವೆ ಎಂಬುದನ್ನ ಪತ್ತೆ ಹಚ್ಚಲಾಗಿದೆ. 

ಪೊಲೀಸ್‌ ವ್ಯವಸ್ಥೆಗೆ ರಣ ನೀತಿ ಬೇಕು: ಗೃಹ ಸಚಿವ ಅಮಿತ್‌ ಶಾ

ಎಲ್ಲಾ ಬೂತ್‌ಗಳಲ್ಲಿ ನಮ್ಮ ಪಕ್ಷ ಗೆಲ್ಲಬೇಕೆಂಬುದು ಅಭಿಯಾನದ ಪರಿಕಲ್ಪನೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ನೀಡಿದ ಯೋಜನೆಗಳನ್ನ ಬೂತ್ ವಿಜಯ ಅಭಿಯಾನ‌ದಲ್ಲಿ ಜನರಿಗೆ ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎಂದು ಜೋಶಿ ಮಾಹಿತಿ ನೀಡಿದರು. ಅಭಿಯಾನದ ವೇಳೆ ಪ್ರತಿ ಮತಗಟ್ಟೆಯ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ 25 ಕಾರ್ಯಕರ್ತರಿಂದ ಪಕ್ಷದ ಧ್ವಜಾರೋಹಣ ನೆರವೇರಲಿದೆ. ಒಟ್ಟಾರೆ ರಾಜ್ಯದಲ್ಲಿ 50 ಲಕ್ಷ ಪಕ್ಷದ ಧ್ವಜಗಳನ್ನ ಹಾರಿಸುವ ಗುರಿ ಹೊಂದಲಾಗಿದ್ದು, ರಾಜ್ಯದಲ್ಲಿ 20 ಲಕ್ಷ ಕಾರ್ಯಕರ್ತರನ್ನ ಈ ಕಾರ್ಯಕ್ಕೆ ಜೋಡಿಸಲಿದ್ದೇವೆ ಎಂದು ಜೋಶಿ ವಿವರಿಸಿದರು. 

ಐಟಿಬಿಪಿ ಯೋಧರಿಗೆ ವರ್ಷದಲ್ಲಿ 100 ದಿನ ಕುಟುಂಬ ಸ್ನೇಹಿ ಕರ್ತವ್ಯ: ಅಮಿತ್‌ ಶಾ

ಪಕ್ಷದ ಎಲ್ಲಾ ಹಿರಿಯರು ಬೂತ್ ವಿಜಯ್ ಅಭಿಯಾನದಲ್ಲಿ ಭಾಗಿಯಾಗಲಿದ್ದು, ಜನವರಿ 12 ರಂದು ಹುಬ್ಬಳ್ಳಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಾರೆ. ಅಂದು ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿ ಯುವಕರ ಸಮಾವೇಶ ನಡೆಯಲಿದೆ‌ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು. 30 ವಯಸ್ಸಿನ ಒಳಗಿನ ಯುವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಮಧ್ಯಾಹ್ನ 2:30 ಕ್ಕೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಧಾರವಾಡದಲ್ಲಿ ಜನವರಿ 12 ರಿಂದ ನಾಲ್ಕು ದಿನಗಳ ಕಾಲ ಯುವಜನ ಮಹೋತ್ಸವ ಕಾರ್ಯಕ್ರಮ ನೆರವೇರಲಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರು ಚಾಲನೆ ನೀಡಲಿದ್ದಾರೆ‌.

Follow Us:
Download App:
  • android
  • ios