ಪ್ರದೀಪ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಹೊಸ ಹಾದಿ ಹಿಡಿದಿದೆ. ಜೆಡಿಎಸ್ ಶಾಸಕರ ಸುದ್ದಿಗೋಷ್ಠಿ ನಂತರ ಸಿಎಂ ನಡೆ ಕೂತುಹಲ ಸೃಷ್ಟಸಿದೆ. ಶಾಸಕ ಪ್ರದೀಪ್ ಈಶ್ವರ ಅವರನ್ನು ಮನೆಗೆ ಕರೆಸಿದ ಸಿದ್ದು, ಕೇಳಿದ್ದೇನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಬೆಂಗಳೂರು (ಜೂ:೩೦) : ಶಾಸಕ ಪ್ರದೀಪ್ ಈಶ್ವರ ಮೇಲೆ ಚಪ್ಪಲಿ ಎಸೆದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲದೇ ಸಿಎಂ ಡಿಕೆ ಶಿಕುಮಾರ್ ಈ ಕುರಿತು ಮಾಧ್ಯಮದ ಮುಂದೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪ್ರದೀಪ್ ಪರ ಪೀಲ್ಡ್‌ಗೆ ಇಳಿದಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದು ನಡೆ ಈಗ ರಾಜ್ಯ ರಾಜಕಾರಣದಲ್ಲಿ ಕೂತುಹಲ ಸೃಷ್ಟಿಸಿದೆ.
ಚಪ್ಪಲಿ ಎಸೆದ ಪ್ರಕರಣಕ್ಕೆ ಕಾರಣವಾಗಿದ್ದೇನು..?
ಈಗ ಚಪ್ಪಲಿ ಎಸೆದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಎದುರಾಗಿದೆ. ಘಟನೆಗೆ ಜಾತಿ ಕಾರಣವಾಯ್ತಾ ಎನ್ನುವ ಮಾತು ಇದೀಗ ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ಒಕ್ಕಲಿಗ ಸಮುದಾಯದ ಜೆಡಿಎಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರದೀಪ್ ಈಶ್ವರ್ ಕರೆದು ವಿವರ ಪಡೆದ ಸಿದ್ದರಾಮಯ್ಯ. ನಂತರ ಡಿಸಿಎಂ ಪರಮೇಶ್ವರ ಮತ್ತು ಗೃಹ ಸಚಿವ ಪ್ರಿಯಾಂಕಾ ಖರ್ಗೆ ರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ.
ಸಿದ್ದು ಕೊಟ್ರಾ ಬಿಗ್ ಮೇಸೇಜ್?
ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಸಂಭಂಧಿತ ಅಧಿಕಾರಿಗಳಿಗೆ ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ. ತಮ್ಮ ನಿವಾಸಕ್ಕೆ ಪ್ರದೀಪ್ ಈಶ್ವರ್ ಕರೆಸಿಕೊಂಡ ಸಿದ್ದರಾಮಯ್ಯ ಪಿನ್ ಟು ಪಿನ್ ಮಾಹಿತಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್, ಸಚಿವ ಯತೀಂದ್ರ, ಮಧು ಬಂಗಾರಪ್ಪ ಹಾಗೂ ಸಂತೋಷ ಲಾಡ್, ರವಿ ಬೋಸರಾಜ್ ಸಹ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ!
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ಪರಮೇಶ್ವರ್ ಕೂಡಲೇ ಜಿಲ್ಲಾಧಿಕಾರಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ. ಜನಾರ್ಶೀವಾದದಿಂದಲೇ ಗೆದ್ದ ಬಂದ ಶಾಸಕನ ಮೇಲೆ ದಬ್ಬಾಳಿಕೆ ನಡೆಯುತ್ತಿದ್ರೆ ಏನ್ ಮಾಡ್ತಿದ್ರಿ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ. ಅಲ್ಲದೇ ಗಲಾಟೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಯಾರು..? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏನ್ ಮಾಡ್ತಿದ್ರು, ಅಷ್ಟಕ್ಕೂ ಪ್ರಕರಣ ನಡೆದು ಇಷ್ಟು ದಿವಸಗಳಾದರೂ ಏನ್ ಮಾಡ್ತಿದ್ರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಕರಣದ ಕುರಿತು ಜಿಲ್ಲಾಧಿಕಾರಿ ಹೇಳಿದ್ದಿಷ್ಟೇ!
ಪ್ರಕರಣ ಸಂಬಂಧ ಬಂಧಿಸಿದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಕೂಡಲೇ ಎನ್‌ಕ್ವೈರಿ ಕಮಿಷನ್ ನೇಮಿಸುವಂತೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖಾ ಕಮಿಷನ್ ನೇಮಿಸಿದ್ದಾರೆ. ಡಿಸಿಎಂ ಪರಮೇಶ್ವರ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಹ ಉಪಸ್ಥಿತರಿದ್ದ ಕಾರಣ, ಒಪ್ಪಿಗೆ ಮೇರೆಗೆ ತನಿಖಾ ಸಮಿತಿ ನೇಮಕ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಶಾಸಕ ಪ್ರದೀಪ ಈಶ್ವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾರ್ಯಕರ್ತರು ಕೋಪಗೊಳ್ಳುವಂತೆ ಮೀಸೆ ತಿರುವಿದೆ ಕಾರಣ ಶಾಸಕರ ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿತ್ತು. ಇದಾದ ನಂತರ ಎಫ್‌ಐಆರ್ ದಾಖಲಾಗಿ, ಈಗ ಪ್ರಕರಣ ತನಿಖಾ ಹಂತದಲ್ಲಿದೆ.

