ವಿಧಾನ ಪರಿಷತ್ತಿನ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಉಳಿದಿರುವ ಹಾಗೂ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರ ಮನೆಗೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು.
ಬೆಳಗಾವಿ (ಜೂ.12): ವಿಧಾನ ಪರಿಷತ್ತಿನ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಉಳಿದಿರುವ ಹಾಗೂ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರ ಮನೆಗೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರನೇ ಭೇಟಿ ನೀಡಿ, ಸುದೀರ್ಘ ಮಾತುಕತೆ ನಡೆಸಿ ಕೋರೆ ಅವರ ಮನವೊಲಿಸಿದರು.
ಅವರ ಜೊತೆಗೆ ಉಪಾಹಾರವನ್ನೂ ಸೇವಿಸಿದರು. ಬಳಿಕ ಕೆಎಲ್‌ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ನಡೆದ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ, ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡುವ ವೇಳೆಯೂ ಅವರು ಪ್ರಭಾಕರ ಕೋರೆಯವರ ಗುಣಗಾನ ಮಾಡಿದರು. ಅವರು ನಮ್ಮ ಹಿರಿಯರು, ಮಾರ್ಗದರ್ಶಕರು. ಸದಾಕಾಲ ನಮ್ಮ ಮಾರ್ಗದರ್ಶಕರಾಗಿ ಇರುತ್ತಾರೆ ಎಂದು ತಿಳಿಸಿದರು. ಪ್ರಭಾಕರ ಕೋರೆ ಅವರು ಕೆಎಲ್‌ಇ ಸಂಸ್ಥೆಯ ಅಧಿಕಾರ ಸ್ವೀಕರಿಸಿದಾಗ 34 ಇದ್ದ ಶಿಕ್ಷಣ ಸಂಸ್ಥೆ ಈಗ 272 ಶಿಕ್ಷಣ ಸಂಸ್ಥೆಗಳು ಇವೆ.
'B ಟೀಂ ಯಾರಾದರೇನು, ಬಿಜೆಪಿ A ಟೀಮ್ ಎನ್ನುವುದು ಖಾತ್ರಿ ಆಯ್ತು'
ದೇಶದ ಗಡಿದಾಟಿ ಮಾರಿಷಸ್, ದುಬೈ ಸೇರಿ ಎಲ್ಲ ಕಡೆ ಸಂಸ್ಥೆ ಮಾಡಿದ್ದಾರೆ. ಇದು ಲೀಡರ್‌ಶಿಪ್ ಇನ್ ಎಜ್ಯುಕೇಶನ್ ತೋರಿಸುತ್ತದೆ ಎಂದು ಪ್ರಶಂಸಿಸಿದರು. ದಿ ಗ್ರೌಥ್ ಆಫ್ ಎಜ್ಯುಕೇಶನ್ ಸೊಸೈಟಿ ಇನ್ ಡೆಮಾಕ್ರಟಿಕ್ ವೇ ಇದರ ಮೇಲೆ ಪಿಎಚ್‌ಡಿ ಮಾಡಬೇಕು. ಸಪ್ತರ್ಷಿಗಳ ಕನಸು ನನಸು ಮಾಡಿದ ಪ್ರಭಾಕರ ಕೋರೆ ಬಗ್ಗೆ ಪಿಎಚ್‌ಡಿ ಮಾಡಬೇಕು. ಮುಂದಿನ ಪೀಳಿಗೆಗೆ ಈ ಸಂಸ್ಥೆ ಹೇಗೆ ಕಟ್ಟಿದ್ದರು ಹೇಗೆ ಬೆಳೆಯಿತು ತಿಳಿಯಬೇಕು. ಕೆಎಲ್‌ಇ ಸಂಸ್ಥೆ ಇರದಿದ್ದರೆ ಕೆಂಪು ಅಂಗಿ ಧೋತರ ಉಟ್ಟು ಹೊಲದಲ್ಲಿ ಇರುತ್ತಿದ್ದವೇನೂ ಎಂದು ಸಿಎಂ ಬೊಮ್ಮಾಯಿ ಅವರು ಪ್ರಭಾಕರ ಕೋರೆ ಅವರನ್ನು ಹೊಗಳಿದರು.
ಸಿಎಂ ಸ್ಪಷ್ಟನೆ: ಪ್ರಭಾಕರ ಕೋರೆ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಪಕ್ಷದ ಹಿರಿಯರು ಆದ ಡಾ.ಪ್ರಭಾಕರ ಕೋರೆ ಅವರನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಕೋರೆ ಅವರು ನನಗೆ ಮುಂಚೆನೇ ಹೇಳಿದ್ದರು. ಪೂರ್ವಭಾವಿಯಾಗಿ ಡಾಕ್ಟರೆಟ್ ಪದವಿ ಸ್ವೀಕಾರ ಸಮಾರಂಭ ಇತ್ತು. ಆರು ತಿಂಗಳು ಮೊದಲೇ ಇದು ನಿಶ್ಚಯವಾಗಿತ್ತು ಎಂದು ನನಗೆ ಹೇಳಿಯೇ ಹೋಗಿದ್ದರು. ಕೋರೆ ನಮ್ಮ ಜೊತೆಗಿದ್ದಾರೆ. ಅವರು ನಮ್ಮ ಹಿರಿಯರು, ಮಾರ್ಗದರ್ಶಕರು. ಸದಾಕಾಲ ನಮ್ಮ ಮಾರ್ಗದರ್ಶಕರಾಗಿ ಇರುತ್ತಾರೆ ಎಂದು ತಿಳಿಸಿದರು.
ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಪ್ರತಿಭಟನೆ:ನೂಪುರ್ ಶರ್ಮಾ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿದ್ದರೂ ಪರಿಸ್ಥಿತಿ ಹತೋಟಿಯಲ್ಲಿದೆ. ಹೀಗಾಗಿ ಉತ್ತರ ಪ್ರದೇಶ ಮಾದರಿ ಅಗತ್ಯವಿಲ್ಲ. ಶೂಟ್ ಆ್ಯಟ್ ಸೈಟ್ ಆರ್ಡರ್ ಕೊಡೋ ಪರಿಸ್ಥಿತಿ ನಮ್ಮ ರಾಜ್ಯದಲ್ಲಿಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅಂಜನಾದ್ರಿ ಅಭಿವೃದ್ಧಿ: ಶೀಘ್ರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯದ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಹೀಗಾಗಿ ನಾವು ಉತ್ತರ ಪ್ರದೇಶದ ಮಾದರಿಯನ್ನು ಅಳವಡಿಸಿಕೊಳ್ಳಲು ಅಗತ್ಯವಿಲ್ಲ. ದೇಶದಲ್ಲಿ ವಿವಿಧೆಡೆ ನಡೆಯುತ್ತಿರುವ ಹಿಂಸಾಚಾರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಪ್ರತಿಯೊಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ವಹಿಸಲು ಸೂಚಿಸಲಾಗಿದೆ. ಆಯಾ ಠಾಣೆ ವ್ಯಾಪ್ತಿಯಲ್ಲಿ ಎಲ್ಲಾ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಸೌಹಾರ್ದತೆ ಕಾಪಾಡಬೇಕೆಂದು ಸೂಚನೆ ನೀಡಲಾಗಿದೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಜೊತೆಗೂ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ.
