Asianet Suvarna News Asianet Suvarna News

ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರದಲ್ಲಿ ಕೈ-ಕಮಲ ರಾಜಕಾರಣ

ನ.15ರಂದು ಕಾಂಗ್ರೆಸ್ಸಿಗರ ಸಭೆಯ ಬೆನ್ನಲ್ಲೇ ಇಂದು ಸಭೆ ನಡೆಸಿದ ಬಿಜೆಪಿ ನಾಯಕರು
ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ನ.28 ರಂದು ಕಾಂಗ್ರೆಸ್ ಪಾದಯಾತ್ರೆ
ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ
15 ದಿನದಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ಹೊಣೆ ನನ್ನದು - ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ

Politics in the case of Sharavati drowning victims sat
Author
First Published Nov 18, 2022, 5:32 PM IST

ವರದಿ: ರಾಜೇಶ್ ಕಾಮತ್,  ಸುವರ್ಣ ನ್ಯೂಸ್
ಶಿವಮೊಗ್ಗ (ನ.18): ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಭರ್ಜರಿ ರಾಜಕಾರಣ ಆರಂಭವಾಗಿದೆ. ಕಾಂಗ್ರೆಸ್‌ನಿಂದ ರಾಜ್ಯ ನಾಯಕರ ನೇತೃತ್ವದಲ್ಲಿ ಪಾದಯಾತ್ರೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರೆ, ಇದಕ್ಕೆ ವಿರುದ್ಧವಾಗಿ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ವತಿಯಿಂದ ಸಭೆ ಆಯೋಜನೆ ಮಾಡಿ ೧೫ ದಿನಗಳಲ್ಲಿ ಸಂತ್ರಸ್ತರ ಸಮಸ್ಯೆ ಇತ್ಯರ್ಥ ಮಾಡುವ ಭರವಸೆ ನೀಡಲಾಗಿದೆ.

ಇತ್ತೀಚಿಗೆ ನ.15ರಂದು ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಕಾಂಗ್ರೆಸ್ ನಾಯಕರಾದ ಕಾಗೋಡು ತಿಮ್ಮಪ್ಪ (Kagodu thimmappa) ಮತ್ತು ಮಧು ಬಂಗಾರಪ್ಪ (Madhu bangarappa) ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ನ.28ರಂದು ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಿಂದ ಶಿವಮೊಗ್ಗದವರೆಗೆ ಪಾದಯಾತ್ರೆ (Hiking) ನಡೆಸುವ ಘೋಷಣೆ ಮಾಡಲಾಗಿತ್ತು. ಈ ಪಾದಯಾತ್ರೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೊದಲಾದವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ.

ಕಾಂಗ್ರೆಸ್ ನಾಯಕರ ವೋಟ್‌ ಬ್ಯಾಂಕ್ ಪಾಲಿಟಿಕ್ಸ್ (Vote bank Politics) ಹಿನ್ನೆಲೆಯಲ್ಲಿ ಬಿಜೆಪಿ (BJP) ಕೂಡ ಇದಕ್ಕೆ ಸೆಡ್ಡು ಪ್ರಯತ್ನ ಆರಂಭಿಸಿದೆ. ಇದರ ಬೆನ್ನಲ್ಲೇ ಬಿಜೆಪಿಯಿಂದ ಶುಕ್ರವಾರ ಶಿವಮೊಗ್ಗ ನಗರದ ಈಡಿಗರ ಭವನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಭೆ ಆಯೋಜಿಸಿ ತಿರುಗೇಟು ನೀಡಿದೆ. ಈ ಸಭೆಯಲ್ಲಿ ಮುಳುಗಡೆ ಸಂತ್ರಸ್ತರ ಪರವಾಗಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಬಗೆಹರಿಸುವ ಭರವಸೆ ನೀಡಿದೆ. ಜೊತೆಗೆ ಕಾಂಗ್ರೆಸ್ಸಿರ ಪಾದಯಾತ್ರೆ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸದಂತೆ ಸಂತ್ರಸ್ತರಿಗೆ ಮನವಿ ಮಾಡಲಾಗಿದೆ.

15 ದಿನದಲ್ಲಿ ಸಂತ್ರಸ್ತರ ಸಮಸ್ಯೆ ಪರಿಹಾರ: ಶರಾವತಿ ಸಂತ್ರಸ್ತರ ಸಭೆಯಲ್ಲಿ ಭಾವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Yadiyurappa) ಅವರು ಮುಂದಿನ 15 ದಿನದಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ಹೊಣೆ (Responsibility) ನನ್ನದು. ಈಗ ಯಾರು ಪಾದಯಾತ್ರೆಗೆ ಮುಂದಾಗಿದ್ದಾರೋ ಅವರು ತಾವು ಅಧಿಕಾರದಲ್ಲಿದ್ದಾಗ ಯಾಕೆ ಸಮಸ್ಯೆ ಪರಿಹರಿಸುವ ಕೆಲಸ ಮಾಡಲಿಲ್ಲ. ಪಾದಯಾತ್ರೆಯ ಮೂಲಕ ರಾಜಕೀಯ ಡೊಂಬರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಮೂಲಕ ಸಂತ್ರಸ್ತರ ಪರಿಹಾರದ ಬಗ್ಗೆ ಪ್ರಸ್ತಾವನೆ (Proposal) ಸಲ್ಲಿಸಿ ಕೇಂದ್ರದಿಂದ ಶೀಘ್ರ ಸಮಸ್ಯೆ ಬಗೇಹರಿಸುತ್ತೇವೆ. ಆದರೆ, ಕಾಂಗ್ರೆಸ್ ನವರ ಉದ್ದೇಶವಾದ ಸಮಸ್ಯೆಯನ್ನು ಸಮಸ್ಯೆ ಯಾಗಿಯೇ ಉಳಿಬೇಕು ಎನ್ನುವ ಸಿದ್ದಾಂತ (Theory) ರೈತರನ್ನು ಬಲಿ ಕೊಡುವುದಕ್ಕೆ ನಾವು ಬಿಡುವುದಿಲ್ಲ. ಆದ್ದರಿಂದ ನೀವು ಯಾರ ಮಾತನ್ನೂ ಕೇಳಬೇಡಿ. ಅಗತ್ಯವಿದ್ದಲ್ಲಿ ನಾನೇ ಸ್ವತಃ ದೆಹಲಿಗೆ ಹೋಗಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನನ್ನದು ಎಂದು ಹೇಳಿದರು.

60 ವರ್ಷದ ಸಮಸ್ಯೆಗೆ ಮುಕ್ತಿ: ಶೀಘ್ರದಲ್ಲೇ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. 60 ವರ್ಷದ ಸಮಸ್ಯೆಯನ್ನು ನಮ್ಮ ಕಾಲದಲ್ಲೇ ಮುಗಿಸಬೇಕು ಅಂತ ಇತ್ತು ಅನಿಸುತ್ತದೆ. ಚುನಾವಣೆ ಹತ್ತಿರ ಬಂದಾಗ ಮಾತ್ರ ಕಾಂಗ್ರೆಸ್‌ನವರಿಗೆ ಸಮಸ್ಯೆ ಕಾಣುತ್ತದೆ. ಈ ರೀತಿಯ ರಾಜಕೀಯವನ್ನು ಕಾಂಗ್ರೆಸ್ ಕಳೆದ 70 ವರ್ಷಗಳಿಂದ ಮಾಡುತ್ತಾ ಜನರ ಜೀವನದ ಜೊತೆ ಆಟ ಆಡುತ್ತಿದೆ. ಈಗ ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ (Congress) ಮುಖಂಡರಿಗೆ ವೈದ್ಯರು ವಾಕಿಂಗ್‌ ಮಾಡಿ ಎಂದು ಹೇಳಿದ್ದಕ್ಕೆ ಪಾದಯಾತ್ರೆ ನಾಟಕವಾಡಲು (Drama) ಬರುತ್ತಿದ್ದಾರೆ ಎಂದು ವ್ಯಂಗ್ಯ (sarcasm)ವಾಡಿದರು. ಆದರೆ, ನೀವು ತಲೆಕೆಳಗಾದರೂ ಸಮಸ್ಯೆ ಬಗೆಹರಿಸುವುದಿಲ್ಲ. ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗದ ನಿವಾರಣೆಗೆ ಸರ್ಕಾರ ಔಷಧಿ (Medicine) ನೀಡುತ್ತಿದೆ. ಬೆಳೆಗಾರರು ಸಂಕಷ್ಟ ದಲ್ಲಿದ್ದಾರೆ. ಕೇಂದ್ರದ ವಿಜ್ಞಾನಿಗಳ ತಂಡ (Scientist Team) ಸಂಶೋಧನೆ ಮಾಡುವುದಕ್ಕೆ ಬರುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಕಾಯ್ದೆಗೂ ಮುನ್ನ ಅವಕಾಶ ಇತ್ತು: ಅರಣ್ಯ ಸಂರಕ್ಷಣಾ ಕಾಯ್ದೆಗೆ ಮುಂಚೆ ಈ ಸಮಸ್ಯೆ ಬಗೆಹರಿಸುವ ಅವಕಾಶ ಕಾಂಗ್ರೆಸ್‌ ಸರ್ಕಾರಕ್ಕಿದ್ದರೂ ಯಾಕೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿಲ್ಲ. ಕೇಂದ್ರ ಸರ್ಕಾರದ ಗಮನಕ್ಕೆ ತಂದು ಡಿ ನೋಟಿಪಿಕೇಷನ್ ಪುನರ್ ಪರಿಶೀಲಿಸಲು ಗಮನ ನೀಡುತ್ತಿದೆ. ಚುನಾವಣೆ ಇದ್ದಾಗ ಮಾತ್ರ ಕಾಂಗ್ರೆಸ್ ಮುಖಂಡರಿಗೆ ಕಾಟಾಚಾರಕ್ಕೆ ಈ ಸಮಸ್ಯೆ ನೆನಪಾಗುತ್ತದೆ. ಆದರೆ, ಈ ಸಮಸ್ಯೆಯನ್ನು ನಮ್ಮ ಸರ್ಕಾರ ನೂರಕ್ಕೆ ನೂರು ಬಗೆಹರಿಸುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Follow Us:
Download App:
  • android
  • ios