ಬೆಂಗಳೂರು (ಜೂ. 05): ಬಿಜೆಪಿ ಮೊದಲ ಬಂಡಾಯದಲ್ಲಿ 40 ಶಾಸಕರನ್ನು ಇಟ್ಟುಕೊಂಡು ಮಾಂಡವಲಿ ಮಾಡಲು ದೆಹಲಿಗೆ ಬಂದಿದ್ದ ಜನಾರ್ಧನ್‌ ರೆಡ್ಡಿ ಸೆವೆನ್‌ ಸ್ಟಾರ್‌ ಐಟಿಸಿ ಮೌರ್ಯದಲ್ಲಿ ಉಳಿದು ಕೊಂಡಿದ್ದರು. ಒಂದು ಸಂಜೆ ಅವರನ್ನು ಹೋಟೆಲ್‌ನಲ್ಲಿ ಭೇಟಿಯಾಗಲು ಹೋದಾಗ ಲೌಂಜನಲ್ಲಿ ನನ್ನನ್ನು, ಇಂಗ್ಲಿಷ್‌ ಪತ್ರಕರ್ತರಾದ ಸೌಮ್ಯ ಅಜಿ ಮತ್ತು ಅನೂಪ್‌ರನ್ನು ಕೂರಿಸಿ ಕೊಂಡ ರೆಡ್ಡಿ, ‘ಜಯಲಲಿತಾ 98ರಲ್ಲಿ ಇದೇ ಹೋಟೆಲ್‌ನ ಪ್ರೆಸಿಡೆಂಟ್‌ ಸೂಟ್‌ನಲ್ಲಿ ಉಳಿದು ಅಟಲ್ ಬಿಹಾರಿ ಸರ್ಕಾರವನ್ನು ತೆಗೆದಿದ್ದರು.

ಯಡಿಯೂರಪ್ಪನವರಿಗೆ ಪರ್ಯಾಯ ಎಲ್ಲಿದೆ?

ನಾನು ಅದೇ ಪ್ರೆಸಿಡೆಂಟ್‌ ಸೂಟ್‌ ನಲ್ಲಿದ್ದೇನೆ. ಯಜಮಾನರ (ಯಡಿಯೂರಪ್ಪ ) ಸರ್ಕಾರ ತೆಗೆಯುವವರೆಗೂ ದಿಲ್ಲಿಯಿಂದ ಹೋಗಲ್ಲ ಬಾಬು’ ಎಂದು ಹೇಳಿ ಅದು ಇದು ಮಾತನಾಡುತ್ತಾ ನನ್ನ ಬಳಿ, ‘ನೀವು 1ರ ಮೇಲೆ ಸೊನ್ನೆ ಎಣಿಸುತ್ತಾ ಹೋಗಿ ನೀವು ದಣಿಯುತ್ತೀರಿ. ಲೆಕ್ಕ ಮುಗಿಯೋಲ್ಲ ಅಷ್ಟುದುಡ್ಡಿದೆ’ ಎಂದು ಹೇಳುತ್ತಾ ಅಲಿಖಾನ್‌ ಜೊತೆ ಕಾರು ಹತ್ತುತ್ತಾ ಸೆಲ್ಯೂಟ್‌ ಹೊಡೆದ ಉದ್ದನೆಯ ಸೆಕ್ಯುರಿಟಿ ಗಾರ್ಡ್‌ಗೆ ಕೆಂಪು ನೋಟಿನ ಬಂಡಲ್ ಕೊಟ್ಟು, ನಮಗೊಂದು ಸ್ಟೈಲ್  ಹೊಡೆದು ಹೋದರು. ಬಂಡಾಯಗಾರರ ಟಾರ್ಗೆಟ್‌ ಇಲಿ ಇರುತ್ತದೆ. ಆದರೂ ಗಣಪತಿಯನ್ನು ಬೀಳಿಸುತ್ತೇನೆ ಎಂದು ಕೂಗಾಡುತ್ತಿರುತ್ತಾರೆ. ಯಡಿಯೂರಪ್ಪರನ್ನು ಬದಲಾಯಿಸಿಯೇ ತೀರುತ್ತೇವೆ ಎಂದು ಹೇಳುತ್ತಿದ್ದ ರೆಡ್ಡಿಗಳ ಟಾರ್ಗೆಟ್‌ ಇದ್ದದ್ದು ಶೋಭಾ ಕರಂದ್ಲಾಜೆ ಮಾತ್ರ!

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ