Asianet Suvarna News Asianet Suvarna News

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶುರುವಾಯ್ತು ಕಾಂಗ್ರೆಸ್ V/S ಬಿಜೆಪಿ ನಡುವೆ ರಾಜಕೀಯ ತಿಕ್ಕಾಟ!

ಗ್ರಾಮಪಂಚಾಯ್ತಿ ಕಟ್ಟಡಕ್ಕೆ ಒಂದೇ ದಿನ ಎರಡು ಕಡೆ ಭೂಮಿ ಪೂಜೆ ನಡೆದಿದೆ. ಒಂದೆಡೆ ಕಾಂಗ್ರೆಸ್ ಶಾಸಕರು ಭೂಮಿ ಪೂಜೆ ಮಾಡಿದ್ರೆ ಮತ್ತೊಂದೆಡೆ ಶಾಸಕರಿಗೆ ಬಿಜೆಪಿ ಬೆಂಬಲಿತ ಗ್ರಾಮಪಂಚಾಯ್ತಿ  ಅಧ್ಯಕ್ಷೆ ಸೆಡ್ಡು ಹೊಡೆಯುವ ಮೂಲಕ ಮತ್ತೊಂದು ಕಡೆ ಭೂಮಿ ಪೂಜೆ ನೇರವೇರಿಸಿದ್ದಾರೆ. 

Political fight between Congress vs BJP started in Gundlupet Constituency gvd
Author
First Published Oct 26, 2023, 11:01 PM IST

ವರದಿ: ಪುಟ್ಟರಾಜು.ಆರ್.ಸಿ.ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಅ.26): ಗ್ರಾಮಪಂಚಾಯ್ತಿ ಕಟ್ಟಡಕ್ಕೆ ಒಂದೇ ದಿನ ಎರಡು ಕಡೆ ಭೂಮಿ ಪೂಜೆ ನಡೆದಿದೆ. ಒಂದೆಡೆ ಕಾಂಗ್ರೆಸ್ ಶಾಸಕರು ಭೂಮಿ ಪೂಜೆ ಮಾಡಿದ್ರೆ ಮತ್ತೊಂದೆಡೆ ಶಾಸಕರಿಗೆ ಬಿಜೆಪಿ ಬೆಂಬಲಿತ ಗ್ರಾಮಪಂಚಾಯ್ತಿ  ಅಧ್ಯಕ್ಷೆ ಸೆಡ್ಡು ಹೊಡೆಯುವ ಮೂಲಕ ಮತ್ತೊಂದು ಕಡೆ ಭೂಮಿ ಪೂಜೆ ನೇರವೇರಿಸಿದ್ದಾರೆ. ಇದರಿಂದ ಗ್ರಾಮಪಂಚಾಯ್ತಿಯಲ್ಲಿ  ಬಿಜೆಪಿ, ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಶುರುವಾಗಿದೆ.  ಹೌದು! ಒಂದೇ  ಗ್ರಾಮ  ಪಂಚಾಯತಿ  ಕಟ್ಟಡಕ್ಕೆ  ಎರಡು  ಕಡೆ  ಗುದ್ದಲಿ    ಪೂಜೆ ಮಾಡಿದ ವಿಲಕ್ಷಣ ಘಟನೆ ಚಾಮರಾಜನಗರ ತಾಲೂಕಿನ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಗೋವಿಂದವಾಡಿಯಲ್ಲಿ ನಡೆದಿದೆ. 

ಒಂದು ಕಡೆ ಗುಂಡ್ಲುಪೇಟೆ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ಅವರು ಗೋವಿಂದವಾಡಿ ಶಾಲಾ ಆವರಣದ ಬಳಿ ಗುದ್ದಲಿ ಪೂಜೆ ನೇರವೇರಿಸಿದ್ರೆ ಶಾಸಕರಿಗೆ ಸೆಡ್ಡು ಹೊಡೆದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಲಾಂಬಿಕೆ ಜಿಲ್ಲಾಧಿಕಾರಿಗಳು ಅನುಮೋದಿಸಿರುವ  ಗ್ರಾಮದ ಸರ್ವೇ ನಂಬರ್ 465 ರ 20 ಗುಂಟೆ ಜಮೀನಿನ ಜಾಗದಲ್ಲಿ  ಗ್ರಾಮ ಪಂಚಾಯತಿ ಕಟ್ಟಡ ಕಟ್ಟಲು   ಬಿಜೆಪಿ ಬೆಂಬಲಿತ ಸದಸ್ಯರೊಡಗೂಡಿ ಗುದ್ದಲಿ ಪೂಜೆ ಮಾಡಿದ್ದಾರೆ. ಈ ಗುದ್ದಲಿ ಪೂಜೆ ಕ್ಷೇತ್ರದಲ್ಲಿ ಮತ್ತೇ ಬಿಜೆಪಿ, ಕಾಂಗ್ರೆಸ್ ನಡುವೆ ಫೈಟ್ ಗೆ ನಾಂದಿ ಹಾಡಿದೆ. ಈ ಗೋವಿಂದವಾಡಿ ಗ್ರಮಪಂಚಾಯ್ತಿಗೆ ಸ್ವಂತ ಕಟ್ಟಡವಿಲ್ಲ. 

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಶಾಸಕ ಪ್ರದೀಪ್‌ ಈಶ್ವರ್‌ ದಿಢೀರ್‌ ಭೇಟಿ: ಯಾಕೆ ಗೊತ್ತಾ?

ಸದ್ಯ ಬಾಡಿಗೆ ಕಟ್ಟಡದಲ್ಲಿ ಗ್ರಾಮಪಂಚಾಯ್ತಿ  ಕಾರ್ಯನಿರ್ವಹಿಸುತ್ತಿದೆ. ಇದನ್ನು ಮನಗೊಂಡಿದ್ದ ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್  ತಮ್ಮ ಅಧಿಕಾರವಧಿಯಲ್ಲಿ ಗ್ರಾಮದ ಶಾಲಾ  ಆವರಣದಲ್ಲಿ ಗ್ರಾ.ಪಂ. ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿದರು. ಆದ್ರೆ ನಂತರ ರಾಜಕೀಯ ಬದಲಾವಣೆ ವೇಳೆ ಬಿಜೆಪಿಯಿಂದ ನಿರಂಜನ್ ಕುಮಾರ್ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಗೋವಿಂದವಾಡಿ ಗ್ರಾ.ಪಂ. ನಲ್ಲಿ ಬಿಜೆಪಿ ಬೆಂಬಲಿತ ಶಾಸಕರು ಅಧಿಕಾರ ಹಿಡಿದಿದ್ದರು. ಬಿಜೆಪಿ ಅಧಿಕಾರವಧಿ ಇದ್ದ ವೇಳೆ ಗ್ರಾಮದ ಸರ್ವೇ ನಂಬರ್ 465 ರ 20 ಗುಂಟೆ ಜಾಗದಲ್ಲಿ ಗ್ರಾ.ಪಂ.ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಆದೇಶ ಪಡೆದುಕೊಂಡಿದ್ದಾರೆ. 

ಇದೀಗಾ ಹಠಕ್ಕೆ ಬಿದ್ದಿರುವ ಶಾಸಕ ಗಣೇಶ್ ಪ್ರಸಾದ್ ರಾಜಕೀಯ ಮಾಡುತ್ತಿದ್ದಾರೆಂದು ಶಾಲಾ ಆವರಣದಲ್ಲಿ ಗ್ರಾಮಪಂಚಾಯ್ತಿ ಕಛೇರಿ ಆದರೆ ಶಾಲಾ ಮಕ್ಕಳ ಪಾಠ ಪ್ರವಚನ, ಆಟ ಪಾಠ  ಹಾಗು ಕಲಿಕೆಗೆ ತೊಂದರೆಯಾಗುತ್ತದೆ ಹಾಗಾಗಿ ಶಾಲಾ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ಕಾರಣಕ್ಕು ಅವಕಾಶ ನೀಡುವುದಿಲ್ಲ ಎಂದು ಗ್ರಾ.ಪಂ.ಅಧ್ಯಕ್ಷೆ ಸವಾಲೆಸೆದಿದ್ದಾರೆ.. ಇನ್ನೂ ಈ ಬಗ್ಗೆ ಶಾಸಕರನ್ನು ಕೇಳಿದ್ರೆ ಗೀತಾ ಮಹದೇವಪ್ರಸಾದ್ ಸಚಿವರಾಗಿದ್ದಾಗ ಭೂಮಿ ಪೂಹೆಯಾಗಿತ್ತು. ಸರ್ಕಾರಿ ಶಾಲೆಯಿಂದ ಒತ್ತುವರಿಯಾಗಿ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಶಿಕ್ಷಣ ಇಲಾಖೆ ಒತ್ತುವರಿ ಜಾಗದಲ್ಲಿ ಅಡುಗೆ ಮನೆ ನಿರ್ಮಿಸಿದೆ. ತಾಂತ್ರಿಕ ಸಮಸ್ಯೆ ಬಗೆಹರಿಸಿ ಈಗ ಅದೇ ಜಾಗದಲ್ಲಿ ಮತ್ತೇ ಭೂಮಿ ಪೂಜೆ ಮಾಡಿದ್ದೇನೆ. 

ಶೋಭಾ, ಯತ್ನಾಳ್‌ ನೇಮಕಕ್ಕೆ ಬಿಎಸ್‌ವೈ ವಿರೋಧವಿಲ್ಲ: ಶಾಸಕ ವಿಜಯೇಂದ್ರ

ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯರು ಅಡ್ಡಿಪಡಿಸಲು ಮುಂದಾದರು. ಆದ್ರಿಂದ ಪೊಲೀಸ್ ಸರ್ಪಗಾವಲಿನಲ್ಲಿ ಗುದ್ದಲಿ ಪೂಜೆ ನೇರವೇರಿದೆ. ಯಾರು ಏನೆ ಅಡ್ಡಿಪಡಿಸಿದರು ಶಾಲಾ ಆವರಣದಲ್ಲೇ ಗ್ರಾಮಪಂಚಾಯ್ತಿ ಕಟ್ಟಡ ನಿರ್ಮಾಣ ಮಾಡಲು ಕಾಮಗಾರಿ ಕೂಡ ಆರಂಭವಾಗುತ್ತೆ ಅಂತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕರಾದ ಗಣೇಶ್ ಪ್ರಸಾದ್. ಒಟ್ನಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಗ್ರಾ.ಪಂ.ಕಚೇರಿ ಕಟ್ಟಡ ಭೂಮಿ ಪೂಜೆ ರಾಜಕೀಯ ತಿಕ್ಕಾಟಕ್ಕೆ ಸಾಕ್ಷಿಯಾಗಿದ್ದು,ಮುಂದೆ ಶಾಸಕರು ಗುದ್ದಲಿ ಪೂಜೆ ನೇರವೇರಿಸಿರುವ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಗ್ರಾ.ಪಂ.ಕಟ್ಟಡ ಕಟ್ಟಲೂ ಬಿಡಲ್ಲವೆಂದು ಗ್ರಾ.ಪಂ.ಅಧ್ಯಕ್ಷೆ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ಪಟ್ಟು ಹಿಡಿದಿದ್ದಾರೆ.ಮುಂದೆ ಯಾವೆಲ್ಲಾ ರಾಜಕೀಯ ಸಂಘರ್ಷಕ್ಕೆ ಈ ಕಟ್ಟಡ ಸಾಕ್ಷಿಯಾಗುತ್ತೆ ಅನ್ನೋದ್ನ ಕಾದುನೋಡಬೇಕಾಗಿದೆ.

Follow Us:
Download App:
  • android
  • ios