ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಶಾಸಕ ಪ್ರದೀಪ್ ಈಶ್ವರ್ ದಿಢೀರ್ ಭೇಟಿ: ಯಾಕೆ ಗೊತ್ತಾ?
ಶಾಸಕ ಪ್ರದೀಪ್ ಈಶ್ವರ್ ಬುಧವಾರ ಜಿಲ್ಲಾಸ್ಪತ್ರೆಗೆ ದಿಡೀರ್ ಭೇಟಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾವಿಭಾಗ, ಔಷಧಾಗಾರ,ಹೊರ ರೋಗಿಗಳು ಹಾಗೂ ಒಳ ರೋಗಿಗಳ ವಿಭಾಗ, ಹೆರಿಗೆ ವಿಭಾಗ, ಡಯಾಲಿಸಿಸ್, ಎಲುಬು ಮತ್ತು ಕೀಲು ಪ್ರಯೋಗಾಲಯ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಚಿಕ್ಕಬಳ್ಳಾಪುರ (ಅ.26): ಶಾಸಕ ಪ್ರದೀಪ್ ಈಶ್ವರ್ ಬುಧವಾರ ಜಿಲ್ಲಾಸ್ಪತ್ರೆಗೆ ದಿಡೀರ್ ಭೇಟಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾವಿಭಾಗ, ಔಷಧಾಗಾರ,ಹೊರ ರೋಗಿಗಳು ಹಾಗೂ ಒಳ ರೋಗಿಗಳ ವಿಭಾಗ, ಹೆರಿಗೆ ವಿಭಾಗ, ಡಯಾಲಿಸಿಸ್, ಎಲುಬು ಮತ್ತು ಕೀಲು ಪ್ರಯೋಗಾಲಯ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ವೈದ್ಯರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ರೋಗಿಗಳ ಯೋಗ ಕ್ಷೇಮ ವಿಚಾರಿಸಿದರಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರಾ? ಅಥವಾ ನೀವೇನಾದರೂ ಹಣ ನೀಡಿದ್ದೀರಾ? ಎಂದು ವಿಚಾರಿಸಿದಾಗ ಯಾರು ಹಣ ಕೇಳಿಲ್ಲಾ ಮತ್ತು ಯಾರಿಗೂ ತಾವು ಹಣ ನೀಡಿಲ್ಲಾ ಎಂದು ಚಿಕಿತ್ಸೆಗಾಗಿ ಬಂದ ಓಳ ಮತ್ತು ಹೊರ ರೋಗಿಗಳು ತಿಳಿಸಿದರು.
ನಂತರ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ಸಭೆ ನಡೆಸಿ ಆಸ್ಪತ್ರೆಯ ನ್ಯೂನ್ಯತೆಗಳ ಬಗ್ಗೆ ಮಾಹಿತಿ ಪಡೆದರು.ಆಸ್ಪತ್ರೆಗೆ ಬರುವ ರೋಗಿಗಳು ಬಡವರಾಗಿದ್ದು, ಅವರೊಂದಿಗೆ ನೀವು ಸೌಜನ್ಯದಿಂದ ವರ್ತಿಸಿ, ಚಿಕಿತ್ಸೆ ನೀಡಬೇಕು. ರೋಗಿಗಳಿಂದ ಯಾವುದೇ ಹಣಕ್ಕೆ ಒತ್ತಾಯಿಸ ಬಾರದು ಹಾಗೇನಾದರೂ ದೂರುಗಳು ಬಂದರೆ ಕಠಿಣ ಕ್ರಮ ತೆಗೆದು ಕೊಳ್ಳುವ ಎಚ್ಚರಿಕೆ ನೀಡಿದರು. ಪ್ರಸೂತಿ ವಿಭಾಗದಲ್ಲಿ ಲಂಚದ ದೂರುಗಳು ಬಂದ ಹಿನ್ನಲೆ, ವಿಭಾಗದ ಡಿ.ದರ್ಜೆ ನೌಕರರನ್ನು ತಕ್ಷಣದಿಂದಲೇ ಬದಲಾಯಿಸುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ಸೂಚಿಸಿದರು.
ಖಾಲಿ ಸೈಟ್ ಸ್ವಚ್ಛತೆ ಕಾಪಾಡದಿದ್ದರೆ ಮುಟ್ಟುಗೋಲು: ಶಾಸಕ ಪ್ರದೀಪ್ ಈಶ್ವರ್
ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿಗೆ ಕನಕಪುರ ಸೇರಿಸೋದು ಸರಿ: ಕನಕಪುರ ಬೆಂಗಳೂರಿಗೆ ಸೇರಿಸುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಸಂಬಂಧ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ಅಭಿವೃದ್ಧಿ ವಿಚಾರವಾಗಿ ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದು ಉತ್ತಮ. ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿರೋದು ಸರಿ ಇದೆ. ಉದ್ಯಮಿಗಳು ಧೈರ್ಯದಿಂದ ಬಂದು ಕನಕಪುರದಲ್ಲಿ ಬಂಡವಾಳ ಹೂಡುತ್ತಾರೆ. ಇದರಿಂದ ಕನಕಪುರ ಅಭಿವೃದ್ಧಿ ಆಗಲಿದೆ ಆದರೆ ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಬೈಯ್ಯುವುದೇ ಅವರ ಕೆಲಸ ಎಂದು ತಿರುಗೇಟು ನೀಡಿದರು
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ರಕ್ಷಾ ರಾಮಯ್ಯ
ಮೆಡಿಕಲ್ ಕಾಲೇಜಿನ ಡೀನ್.ಡಾ.ಮಂಜುನಾಥ್, ಜಿಲ್ಲಾಶಸ್ತ್ರ ಚಿಕಿತ್ಸಕಿ ಡಾ.ಮಂಜುಳಾದೇವಿ, ನಿವಾಸಿ ವೈದ್ಯಾಧಿಕಾರಿ. ಡಾ.ಪಿ.ವಿ.ರಮೇಶ್, ವೈದ್ಯರಾದ ಡಾ.ರಮೇಶ್, ಡಾ.ವಿಶ್ವನಾಥ ರೆಡ್ಡಿ, ಡಾ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ನಗರಸಭಾ ಸದಸ್ಯ ಕಣಿತಹಳ್ಳಿ ವೆಂಕಟೇಶ್, ಮುಖಂಡರಾದ ವಿನಯ್ ಬಂಗಾರಿ, ರಾಜಶೇಖರ್(ಬುಜ್ಜಿ), ನಾಗಭೂಷಣ್, ಎಸ್.ಎಂ.ಜಗದೀಶ್, ಶಾಹೀದ್, ಶಂಕರ, ಆಸ್ಪತ್ರೆಯ ವೈದ್ಯ ಮತ್ತು ವೈದ್ಯಕೀಯೇತರ ಸಿಬ್ಬಂದಿ,ಮತ್ತಿತರರು ಇದ್ದರು.