Assembly election: ರಾಜಕೀಯ ಬದ್ಧ ವೈರಿ ಯೋಗೇಶ್ವರ್- ಡಿ.ಕೆ. ಸುರೇಶ್ ಹಸ್ತಲಾಘವ: ಕಾಲೆಳೆದುಕೊಂಡ ನಾಯಕರು
ರಾಜ್ಯ ರಾಜಕಾರಣದಲ್ಲಿ ಬದ್ದ ವೈರಿಗಳು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮತ್ತು ಸಂಸದ ಡಿ.ಕೆ ಸುರೇಶ್ ಹಸ್ತಲಾಘವ ಮಾಡಿ ಮುಖಾಮುಖಿ ಮಾತನಾಡಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಕಾಲೆಳೆದುಕೊಂಡು ಸುತ್ತಲೂ ಇದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ.
ರಾಮನಗರ (ಜ.05): ರಾಜ್ಯ ರಾಜಕಾರಣದಲ್ಲಿ ಬದ್ದ ವೈರಿಗಳು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮತ್ತು ಸಂಸದ ಡಿ.ಕೆ ಸುರೇಶ್ ಹಸ್ತಲಾಘವ ಮಾಡಿ ಮುಖಾಮುಖಿ ಮಾತನಾಡಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಕಾಲೆಳೆದುಕೊಂಡು ಸುತ್ತಲೂ ಇದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ. ಆದರೆ, ಇಬ್ಬರ ಮಾತಿನಲ್ಲಿಯೂ ರಾಜಕೀಯ ದ್ವೇಷ ಮಾತ್ರ ಎದ್ದು ಕಾಣುತ್ತಿತ್ತು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ವೀಕ್ಷಣೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಗಮನ ಹಿನ್ನೆಲೆಯಲ್ಲಿ ಇಬ್ಬರೂ ಆಗಮಿಸಿದ್ದರು. ಈ ವೇಳೆ ಸ್ಥಳಕ್ಕೆ ಸಚಿವರಾದ ಅಶ್ವಥ್ ನಾರಾಯಣ್, ಗೋಪಾಲಯ್ಯ, ಡಿ.ಕೆ ಸುರೇಶ್, ಯೋಗೇಶ್ವರ್ ಆಗಮಿಸಿದ್ದಾರೆ. ಈ ವೇಳೆ ರಾಜಕೀಯ ಬದ್ಧ ವೈರಿಗಳಾಗಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮತ್ತು ಸಂಸದ ಡಿ.ಕೆ ಸುರೇಶ್ ಹಸ್ತಲಾಘವ ಮಾಡಿಕೊಂಡು ಅಲ್ಲಿ ನೆರೆದಿದ್ದ ಎಲ್ಲರಿಗೂ ಆಶ್ಚರ್ಯ ಉಂಟಾಗುವಂತೆ ಮಾಡಿದ್ದಾರೆ.
ಜೆಡಿಎಸ್‌ನಿಂದ ಜಿಲ್ಲೆಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ: ಸಿ.ಪಿ.ಯೋಗೇಶ್ವರ್
ಮಾತುಗಳಲ್ಲಿಯೇ ಚೇಷ್ಟೆ ಮಾಡಿದ ರಾಜಕೀಯ ವೈರಿಗಳು: ಮಾತು ಆರಂಭಿಸಿದ ಸಿ.ಪಿ. ಯೋಗೇಶ್ವರ್, ಎಲ್ಲಪ್ಪಾ ಜೆಡಿಎಸ್ ಒಬ್ಬರೂ ಕಾಣಿಸ್ತಿಲ್ಲ, ಬಿಜೆಪಿ-ಕಾಂಗ್ರೆಸ್ ಮಾತ್ರ ಬಂದಿದ್ದೀರಿ. ಕಾಮಗಾರಿ ಎಲ್ಲಾ ಮುಗಿದ್ಮೇಲೆ ಪ್ಲೆಕ್ಸ್ ಹಾಕೊಲೋದಾ ಎಂದು ಕೇಳಿದ್ದಾರೆ. ಯೋಗೇಶ್ವರ್ ಮಾತಿಗೆ ಸಂಸದ ಡಿ.ಕೆ ಸುರೇಶ್ ಹುಸಿ ನಗು ಬೀರುತ್ತಾ ಸುಮ್ಮನಿದ್ದರು. ನಂತರ, ಯೋಗೇಶ್ವರ್ ರಾಮನಗರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರ ಬಗ್ಗೆ ಮಾತನಾಡಿ ಲಾಸ್ಟ್ ಟೈಮ್‌ನಲ್ಲಿ ಗೆಲುವು ಆಗುತ್ತಿತ್ತು. ಆದರೆ, ನಿಮ್ಮ ಗುರುಗಳೇ ಡಿ.ಕೆ ಸುರೇಶ್ ಸಪೋರ್ಟ್ ಮಾಡ್ಲಿಲ್ಲ. ಏಯ್ ಗೆಲ್ಲಿಸ್ರಪ್ಪಾ ಸಪೋರ್ಟ್ ಮಾಡಿ ಎಂದು ಯೋಗೇಶ್ವರ್ ಕುಚೇಷ್ಟೆ ಮಾಡಿದರು.
ಪರಸ್ಪರ ಕಿಚಾಯಿಸಿಕೊಂಡ ನಾಯಕರು
ಡಿ.ಕೆ ಸುರೇಶ್: ಏನಪ್ಪಾ ಮೀಡಿಯಾ ಮುಂದೆ ಫುಲ್ ಮಿಂಚಿಂಗ್ ಆಗಿದ್ದೀಯಾ?
ಯೋಗೇಶ್ವರ್: ನಿಮ್ಮಷ್ಟು ಇಲ್ಲ ಬಿಡಣ್ಣ..
ಸುರೇಶ್: ಏಯ್ ಕನಕಪುರ ರಸ್ತೆ ಅರ್ಧಕ್ಕೇ ನಿಮಥೋಯ್ತಲ್ಲಪ್ಪಾ.. ಮೈಸೂರು - ಬೆಂಗಳೂರು ರಸ್ತೆ ಏನೋ ಸರಿ ಹೋಯ್ತು
ಯೋಗೇಶ್ವರ್: ನಿಮ್ಮ ಕನಕಪುರ ರಸ್ತೆ ಮಾಡಿಸ್ರಪ್ಪಾ, ನೀನು ಸೌಂಡ್ ಮಾಡಪ್ಪ.
ಸುರೇಶ್: ಏಯ್ ಎಲ್ಲ ನಿಮ್ಮ ಬಿಜೆಪಿ ಅವರೇ ಕಂಟ್ರಾಕ್ಟರ್ ಅಲ್ವೇನಯ್ಯಾ, ಅವರೇ ಮಾಡಿಸಬೇಕು
ದಲಿತರನ್ನು ಸಿಎಂ ಮಾಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ: ಸಂಸದ ಸುರೇಶ್
ಕುಟುಂಬದ ಪಕ್ಷದಲ್ಲಿರುವ ಸಿದ್ದರಾಮಯ್ಯನಿಗೆ ನೈತಿಕತೆ ಇಲ್ಲ: ಸಚಿವ ಅಶ್ವತ್ಥನಾರಾಯಣ ಮಾತನಾಡಿ, ನಮ್ಮ ಸರ್ಕಾರ ಭ್ರಷ್ಟಾಚಾರ ರಹಿತ ಜನಪರ ರಹಿತವಾಗಿ ಕೆಲಸ ಮಾಡಿದೆ. ಯಾರು ಹೋಟೆಲ್ ನಲ್ಲಿದ್ರು, ಯಾರು ಇಲ್ಲಿದ್ರು ಅಂತ ಗೋತ್ತಿದೆ. ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರ ಎಲ್ಲಾರು ಕಾಲದಲ್ಲಿ ಹಣ ಸಿಕ್ಕಿದೆ. ತನಿಖೆ ಮಾಡಲು ಹೇಳಿದ್ದಿವಿ. ಯಾವ ದುಡ್ಡನ್ನು ಭ್ರಷ್ಟಾಚಾರ ಮಾಡಲಿಕ್ಕೆ ಬಿಡಲ್ಲ. ರಾಜ್ಯದಲ್ಲಿ ನಮ್ಮ ಸರ್ಕಾರ ಭ್ರಷ್ಟಾಚಾರ ಮುಕ್ತವಾಗಿದೆ. ಭ್ರಷ್ಟಾಚಾರ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕ ಹಕ್ಕಿಲ್ಲ. ಲೋಕಾಯುಕ್ತ ಸಂಸ್ಥೆಯನ್ನ ಮುಚ್ಚಿದ್ದ ಕಾಂಗ್ರೆಸ್. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮಾತುನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯನವರದ್ದು ಕುಟುಂಬದ ಪಕ್ಷವಾಗಿದೆ. ಪ್ರಜಾಪ್ರಭುತ್ವದ ಗೌರವ ಇದೀಯಾ.? ಪಪ್ಪಿ ಯಾರು ಸಿದ್ದರಾಮಯ್ಯ.? ಇವರ ಪರಿಸ್ಥಿತಿಯನ್ನು ಇವರೇ ನೋಡಿಕೊಂಡಿಲ್ಲ. ನಮ್ಮಲ್ಲಿ ಇವರ ಥರ ಇಲ್ಲ. ಕಾಂಗ್ರೆಸ್-ಜೆಡಿಎಸ್ ಪಾರ್ಟಿಯಲ್ಲಿ ವಂಶಪಾರಂಪರ್ಯವಾಗಿ ಬಂದಿದೆ. ಸಿದ್ದರಾಮಯ್ಯನವರಿಗೆ ನಿಜಕ್ಕೂ ನೈತಿಕತೆ ಇದ್ರೆ ಪಕ್ಷದಿಂದ ಹೊರಗಡೆ ಬರಲಿ ಎಂದು ಸಚಿವ ಡಾ.ಅಶ್ವಥ್ ನಾರಾಯಣ್ ಸವಾಲು ಹಾಕಿದರು.