Asianet Suvarna News Asianet Suvarna News

ಹೋಳಿ ಹಬ್ಬಕ್ಕೂ ಮೊದಲೇ ರಾಯಚೂರು ಜಿಲ್ಲೆಯಲ್ಲಿ ರಾಜಕೀಯ ರಂಗಿನಾಟ

ಪರಿಶಿಷ್ಟಜಾತಿಗೆ ಮೀಸಲಾದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ರಂಗಿನಾಟ ಜೋರಾಗಿದ್ದು ಪಕ್ಷಗಳ ಸಂಘಟನೆಗಾಗಿ ರಾಜಕೀಯ ನಾಯಕರು ಊರೂರು ಅಲೆದು ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

Political drama in Raichur before Holi festival rav
Author
First Published Mar 3, 2023, 7:40 AM IST

ಲಿಂಗಸುಗೂರು (ಮಾ.3) : ಪರಿಶಿಷ್ಟಜಾತಿಗೆ ಮೀಸಲಾದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ರಂಗಿನಾಟ ಜೋರಾಗಿದ್ದು ಪಕ್ಷಗಳ ಸಂಘಟನೆಗಾಗಿ ರಾಜಕೀಯ ನಾಯಕರು ಊರೂರು ಅಲೆದು ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

ಬಿಜೆಪಿ(BJP), ಕಾಂಗ್ರೆಸ್‌(Congress) ಹಾಗೂ ಜೆಡಿಎಸ್‌(JDS) ಪಕ್ಷಗಳು ಮತದಾರ ಮನೆ ಬಾಗಿಲು ತಟ್ಟುತ್ತಿವೆ. ಜೊತೆಗೆ ಆಮ್‌ ಆದ್ಮಿ ಪಕ್ಷದ ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದು, ದೆಹಲಿ ಮಾದರಿ ಆಡಳಿತಕ್ಕೆ ಬೆಂಬಲಿಸಿ ಎಂದು ಮನವಿ ಮಾಡುತ್ತಾ ಆಡಳಿತ ನಡೆಸಿದ ಪಕ್ಷಗಳ ಬಂಡವಾಳ ಬಯಲು ಮಾಡುತ್ತಾ ಜನರ ಬಳಿಗೆ ತೆರಳುತ್ತಿದ್ದಾರೆ.

ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯಗೆ ಜೈಲು ಖಚಿತ: ಕಟೀಲ್‌

ಪಂಚರತ್ನ ಯಾತ್ರೆ(Pancharatna rathayatre)ಯಿಂದ ಜೆಡಿಎಸ್‌ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದೆ. ಹತ್ತಾರು ವಾಹನಗಳಲ್ಲಿ ಪಕ್ಷದ ಅಭ್ಯರ್ಥಿ ಸಿದ್ದು ಬಂಡಿಯವರು ಮನೆ ಮನೆಗೆ ತೆರಳಿ ಜನರ ಕಾಲಿಗೆ ಬಿದ್ದು ಗೆಲ್ಲಿಸಲೇಬೇಕೆಂದು ಮೊರೆಯಿಡುತ್ತಿದ್ದಾರೆ. ಇತ್ತ ಬಿಜೆಪಿ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದು ಬೂತ್‌ ಮಟ್ಟಹಾಗೂ ವಿಜಯ ಸಂಕಲ್ಪ ಯಾತ್ರೆ (Vijaya sankalpa yatre)ಮೂಲಕ ಪ್ರಚಾರಕ್ಕೆ ಅಡಿಯಿಟ್ಟಿದೆ. ಮಾಜಿ ಶಾಸಕ, ಮಾನಪ್ಪ ವಜ್ಜಲ್‌(Manappa Vajwal) ನಾನಾ ಸಮಾರಂಭಗಳ ಆಯೋಜಿಸಿ ಜನರ ಸೆಳೆಯುತ್ತಿದ್ದಾರೆ.

ನಾವೇನು ಕಮ್ಮಿ ಇಲ್ಲಾ ಎಂಬಂತೆ ಕಾಂಗ್ರೆಸ್‌ ಶಾಸಕ ಡಿ.ಎಸ್‌ ಹೂಲಗೇರಿ ಪಟ್ಟು ಬಿಡದೆ ಪ್ರಚಾರ ನಡೆಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಜಿಪಂ ಮಾಜಿ ಸದಸ್ಯ ಎಚ್‌.ಬಿ ಮುರಾರಿ, ಆರ್‌.ರುದ್ರಯ್ಯನವರು ಪ್ರತ್ಯೇಕ ಗುಂಪುಗಳಾಗಿ ತೆರಳಿ ಕಾಂಗ್ರೆಸ್‌ ಬೆಂಬಲಿಸಲು ಮನವಿ ಮಾಡುತ್ತಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ಸೇರ್ಪಡೆ ಸಮಾರಂಭ ಆಯೋಜಿಸಿ ಪ್ರಚಾರ ನಡೆಸಿದ್ದಾರೆ.

ಇನ್ನೂ ಆಮ್‌ ಆದ್ಮಿ ಪಕ್ಷದ ಮುಖಂಡ ಶಿವಪುತ್ರ ಗಾಣದಾಳ ನೇತೃತ್ವದಲ್ಲಿ ದೆಹಲಿ ಮಾದರಿ ಆಡಳಿತ ಕರ್ನಾಟಕದಲ್ಲಿ ನೀಡಲಿದ್ದೇವೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಬ್ರಷ್ಟಪಕ್ಷಗಳಾಗಿವೆ. ಇವುಗಳನ್ನು ತಿರಸ್ಕರಿಸಿ ಆಪ್‌ ಬೆಂಬಲಿಸಿದರೆ ಸಾಮಾನ್ಯರ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಬಡವರ ಕಷ್ಟಕಾರ್ಪಣ್ಯ ದೂರ ಮಾಡಲಿದೆ ಎಂದು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ.

ಪಕ್ಷಗಳ ನಡುವೆ ಕೆಸರೆರಚಾಟ:

ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಬಲದಂಡೆ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿವೆ. ಇದಕ್ಕೆ ಬಗ್ಗದ ಬಿಜೆಪಿ ಶಾಸಕ ಡಿ.ಎಸ್‌ ಹೂಲಗೇರಿಯಿಂದ ಕ್ಷೇತ್ರದಲ್ಲಿ ಕುಡಿಯುವ ನೀರು, ನೀರಾವರಿ, ಸಾರಿಗೆ ಸಮಸ್ಯೆ ನಿವಾರಿಸಿಲ್ಲ. ಇನ್ನೂ ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್‌ನ ಸಿದ್ದು ಬಂಡಿಯವರ ಕೊಡುಗೆ ಏನು ಎಂದು ತಿರುಗೇಟು ನೀಡುತ್ತಿದ್ದರೆ, ಆಮ್‌ ಆದ್ಮಿ ಪಕ್ಷ ಮೂರು ಪಕ್ಷಗಳ ಭ್ರಷ್ಟಾಚಾರದ ಪಟ್ಟಿನೀಡುತ್ತಿದ್ದು ರಾಜಕೀಯ ರಂಗಿನಾಟದಲ್ಲಿ ಕೆಸರೆರಚಾಟವು ತಾರಕಕ್ಕೇರಿದೆ.

ಸುಗ್ಗಿ:

ಮೀಸಲು ಕ್ಷೇತ್ರ ಲಿಂಗಸುಗೂರು ರಾಜಕೀಯ ಕಾರ್ಖಾನೆ, ಚುನಾವಣೆ ಪೂರ್ವದಲ್ಲಿ ರಾಜಕೀಯ ಪಕ್ಷಗಳ 2ನೇ ಹಂತದ ನಾಯಕರಿಗೆ ಬಿಸಿಲಿನಲ್ಲೂ ಚುನಾವಣೆ ಸುಗ್ಗಿಯಾಗಿದೆ. ಆಯಕಟ್ಟಿನ ಸ್ಥಳದಲ್ಲಿ ಕುಳಿತ ನಾಯಕರು ಸ್ಪರ್ಧಾಳುಗಳಿಂದ ನಿತ್ಯವೂ ಉಪಚರಿಸಿಕೊಳ್ಳುವ ಜೊತೆಗೆ ಗುಂಡು-ತುಂಡು ಮದ್ಯದ ಅಮಲಿನಲ್ಲಿ ಲೋಲಾಡುತ್ತಿದ್ದಾರೆ.

ಸೇರ್ಪಡೆ-ಬೇರ್ಪಡೆ:

ಕ್ಷೇತ್ರದಲ್ಲಿ ತಾವಿರುವ ಪಕ್ಷಗಳ ತೊರೆದು ಅನ್ಯ ಪಕ್ಷಗಳ ಶಾಲು ಹೊದ್ದು ಪಕ್ಷಗಳ ಸೇರ್ಪಡೆ ನಡೆದಿದೆ. ಇದರ ಮಧ್ಯೆ ಮುನಿಸಿಕೊಂಡವರನ್ನು ಬೇರ್ಪಡಿಸುವ ಕಾರ್ಯವು ಮುನ್ನೆಲೆಗೆ ಬಂದಿದ್ದು ಒಂದೇ ಮನೆಯಲ್ಲಿ ಎರಡು ಪಾರ್ಟಿ, ಗುಂಪಿನಲ್ಲಿ ಗುರುತಿಸಿಕೊಳ್ಳುವ ಮೂಲಕ ಸೇರ್ಪಡೆ ಹಾಗೂ ಬೇರ್ಪಡುವ ಕಾರ್ಯ ರಭಸದಿಂದ ಸಾಗಿದೆ.

ಸಿದ್ದರಾಮಯ್ಯ, ಡಿ​ಕೆಶಿಗೆ ಸಿಎಂ ಹಗಲುಗನಸು: ಕಟೀಲ್‌ ಟೀಕೆ

ಪಕ್ಷಗಳು ಯಾರಿಗೆ ಟಿಕೆಟ್‌ ನೀಡುತ್ತಾರೆಂಬುದು ಇನ್ನೂ ತಿಳಿದಿಲ್ಲ. ಕೂಸು ಹುಟ್ಟುವ ಮೊದಲೇ ಕುಲಾಯಿ ಒಲಿಸಿದರು ಎಂಬಂತೆ ರಾಜಕೀಯ ಪಕ್ಷಗಳ ನಾಯಕರು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ.

ಇಂದು ಛಲ​ವಾದಿ ಸಮಾ​ವೇಶ

ಪರಿ​ಶಿಷ್ಟಜಾತಿಗೆ ಮೀಸ​ಲಿ​ರುವ ಲಿಂಗ​ಸು​ಗೂರು ಕ್ಷೇತ್ರ​ದಿಂದ ಅಸ್ಪೃ​ಶ್ಯ​ರಿಗೆ ಅದ​ರ​ಲ್ಲಿಯೂ ಛಲ​ವಾದಿ ಸಮು​ದಾ​ಯಕ್ಕೆ ಸೇರಿದ ಮುಖಂಡ​ರಿಗೆ ಟಿಕೆಟ್‌ ನಿಡ​ಬೇಕು ಎನ್ನುವ ಒತ್ತಾ​ಸೆ​ಯಡಿ ಶುಕ್ರ​ವಾರ ಪಟ್ಟ​ಣ​ದಲ್ಲಿ ಛಲ​ವಾದಿ ಸಮಾ​ವೇ​ಶ​ವನ್ನು ಏರ್ಪ​ಡಿ​ಸಿದ್ದು, ಎಲ್ಲ ರಾಜ​ಕೀಯ ಪಕ್ಷ​ಗಳ ಮುಖಂಡರು ಭಾಗ​ವ​ಹಿ​ಸ​ಲಿ​ದ್ದಾರೆ.

Follow Us:
Download App:
  • android
  • ios