ಬೆಂಗಳೂರು, [ಫೆ.07]: ನಾಳೆ [ಶುಕ್ರವಾರ] ರಾಜ್ಯ ಮೈತ್ರಿ ಸರ್ಕಾರದ ಬಜೆಟ್ ಇದೆ. ಮತ್ತೊಂದೆಡೆ ಕಾಂಗ್ರೆಸ್ ನ ಅತೃಪ್ತರ ಶಾಸಕರ ರಾಜಕೀಯ ಚದುರಂಗದಾಟ ಕ್ಲೈಮ್ಯಾಕ್ಸ್ ಗೆ ಬಂದಿದೆ.

ಮುಂಬೈನಲ್ಲಿ ಕುಳಿತು ರಾಜ್ಯ ಮೈತ್ರಿ ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದ ಕಾಂಗ್ರೆಸ್ ನ ಅತೃಪ್ತ ಶಾಸಕರು ತಮ್ಮ ವಾಸ್ತವ್ಯದ ಸ್ಥಳ ಬದಲಿಸಿದ್ದು, ಮತ್ತೊಮ್ಮೆ ರಾಜಕೀಯ ಹೈಡ್ರಾಮಾಕ್ಕೆ ರಾಜ್ಯ ಸಾಕ್ಷಿಯಾಗಲಿದೆ.

ಸಿಎಂಗೆ ಸಿದ್ದು ಬರೆದ್ರು 4 ಪತ್ರ: ಏನು ಕೇಳಿದ್ರು ಕುಮಾರಣ್ಣ ಹತ್ರ?

ಯಾಕಂದ್ರೆ ಗೋಕಾಕ ಶಾಸಕ ನೇತೃತ್ವದ ಅತೃಪ್ತರ ಟೀಂ ಕಳೆದ ಒಂದು ತಿಂಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿತ್ತು. ಆದ್ರೆ ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಮುಂಬೈನ ರೆನಾಸನ್ಸ್ ಹೋಟೆಲ್ ನಿಂದ ಚೆಕ್ ಜೌಟ್ ಆಗಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.

 ಇಂದು [ಗುರುವಾರ] ಗೋಕಾಕ್ ಶಾಸಕನ ಜೊತಗಿದ್ದ ಮಹೇಶ್ ಕುಮಟಳ್ಳಿ ಇವರಿಬ್ಬರ ಜತೆ ಇಬ್ಬರು ಪಕ್ಷೇತರ ಶಾಸಕರಾದ ನಾಗೇಶ್, ಶಂಕರ್  ಮಧ್ಯಾಹ್ನ ಮುಂಬೈನಿಂದ ವಿಮಾನ ಮೂಲಕ ಚನ್ನೈಗೆ ಬಂದಿಳಿದಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಇದು HDK  ಬಜೆಟ್ ‘ಕಾಪಿ’ ಆಪರೇಶನ್‌, ಬಿಜೆಪಿಗೆ ಹೊಸ ಟೆನ್ಶನ್

 ನಾಗೇಂದ್ರ, ಡಾ. ಉಮೇಶ್ ಜಾಧವ್,  ಗೋಕಾಕ್ ಶಾಸಕ, ಮಹೇಶ್ ಕುಮಟಳ್ಳಿ, ನಾಗೇಶ್ ಮತ್ತು ಶಂಕರ್ ಒಂದೇ ಕಡೆ ಬೆಂಗಳೂರಿನಲ್ಲಿ ಕೂಡಿಕೊಂಡಿದ್ದು, ಶುಕ್ರವಾರ ಶಾಸಕಾಂಗ ಸಭೆಗೆ ಹಾಜರಾಗಬೇಕಾ ಅಥವಾ ಬೇಡ್ವಾ? ಎಂದು ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಅತೃಪ್ತರ ಮುಂದಿನ ನಡೆ ಏನು..?
ಈಗ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್ ಆಗಿರುವ ಅತೃಪ್ತ ಶಾಸಕರ ರಾಜಕೀಯ ನಡೆ ಭಾರೀ ಕುತೂಹಲ ಮೂಡಿಸಿದೆ. ಯಾಕಂದ್ರೆ ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಸಭೆಗೆ ಬರುವಂತೆ ನೋಟಿಸ್ ನೀಡಿಲಾಗಿದೆ. ಅಷ್ಟೇ ಅಲ್ಲದೇ ಬಜೆಟ್ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ವಿಪ್ ಜಾರಿ ಮಾಡಿಲಾಗಿದೆ. 

ಮತ್ತೊಂದೆಡೆ ನಾಳೆ [ಶುಕ್ರವಾರ] ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಎಲ್ಲಾ ಅತೃಪ್ತರು ಬಂದೇ ಬರ್ತಾರೆ..ಬರ್ತಾರೆ..ಬರ್ತಾರೆ ಅಂತ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರು ವಿಶ್ವಾಸದಿಂದ ಮೂರು ಬಾರಿ ಒತ್ತಿ ಒತ್ತಿ ಹೇಳಿದ್ದಾರೆ. 

ಆದ್ರೆ ಅತೃಪ್ತ ಶಾಸಕರು ಅನರ್ಹ ಭೀತಿಯಿಂದ ತಪ್ಪಿಸಿಕೊಳ್ಳಲು ನಾಯಕರ ಜತೆ ಸಂಧಾನಕ್ಕೆ ಮುಂದಾಗುತ್ತಾರಾ? ಅಥವಾ ರಾಜೀನಾಮೆ ನೀಡುತ್ತಾರಾ? ಎನ್ನುವುದು ಮಾತ್ರ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಒಟ್ಟಿನಲ್ಲಿ ಅತೃಪ್ತರ ಆಟ ಕ್ಲೈಮ್ಯಾಕ್ಸ್ ಗೆ ಬಂದು ನಿಂತಿದ್ದು,  ಶುಕ್ರವಾರ ಸ್ಪಷ್ಟ ಚಿತ್ರಣ ತಿಳಿಯಲಿದೆ.