ಬೆಂಗಳೂರು[ಫೆ.07] ಬಜೆಟ್ ಅಧಿವೇಶನ ಆರಂಭವಾಗಿದ್ದರೂ ರಾಜ್ಯ ಬಿಜೆಪಿ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.  ಬಜೆಟ್ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲರ ಭಾಷಣ ಓದಲು ಬಿಡದ ಬಿಜೆಪಿ ಬಜೆಟ್ ಮಂಡನೆ ವೇಳೆಯೂ ಗೊಂದಲ ನಿರ್ಮಾಣ ಮಾಡಲಿದೆ ಎಂಬುದನ್ನು ಮನಗಂಡಿರುವ ಕುಮಾರಸ್ವಾಮಿ ಹೊಸ ತಂತ್ರ ಹಣೆದಿದ್ದಾರೆ. ಬಜೆಟ್ ಪ್ರತಿ ಎಂಬ ಅಸ್ತ್ರ ಬಿಡಲು ಸಿದ್ಧವಾಗಿದ್ದಾರೆ.

 

ದೋಸ್ತಿ ಸರ್ಕಾರ ಉಳಿಸಲು 5 ಸಚಿವರ ರಾಜೀನಾಮೆ ?

ಬಜೆಟ್ ಮಂಡನೆ ಮುಕ್ತಾಯವಾಗುವವರೆಗೂ ವಿಪಕ್ಷಗಳಿಗೆ ಬಜೆಟ್ ಪ್ರತಿ ಕೊಡದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಂಡನೆ ಮುಗಿದ ಬಳಿಕವಷ್ಟೇ ಪ್ರತಿಗಳನ್ನು ಹಂಚಲು  ನಿರ್ಧಾರ ಮಾಡಲಾಗಿದ್ದು ಆ ಕ್ಷೇತ್ರಕ್ಕೆ ಕಡಮೆ,, ಈ ಕ್ಷೇತ್ರಕ್ಕೆ ಹೆಚ್ಚು ಎಂಬ ಕ್ಯಾತೆ ತೆಗೆಯಲು ಅವಕಾಶ ಇಲ್ಲದಂತೆ ಮಾಡುವುದು ಕುಮಾರಸ್ವಾಮಿ ತಂತ್ರ.

ರಾಜ್ಯದ ಇತಿಹಾಸದಲ್ಲಿಯೇ ಇದು ಹೊಸ ಸಂಪ್ರದಾಯವಾಗಲಿದೆ. ಆದರೆ ಇದನ್ನು ವಿರೋಧಿಸಿರುವ ಬಿಜೆಪಿ ಕುಮಾರಸ್ವಾಮಿ ಕದ್ದು ಮುಚ್ಚಿ ಬಜೆಟ್ ಮಂಡನೆ ಮಾಡಲು ಇಂಥ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದೆ.