ಬೆಂಗಳೂರು, [ಫೆ.06]:  ಮತ್ತೆ ರಾಜಕೀಯ ಹೈಡ್ರಾಮಾಕ್ಕೆ ಕರ್ನಾಟಕ ಸಾಕ್ಷಿಯಾಗಿದೆ. ಮೈತ್ರಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದ ಕಾಂಗ್ರೆಸ್ ಅತೃಪ್ತ ಶಾಸಕರ ನಡೆಗೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರು ಕೆಂಡಾಮಂಡಲರಾಗಿದ್ದು, ಅತೃಪ್ತರಿಗೆ ಲಾಸ್ಟ್ ಲಾನ್ಸ್ ಕೊಟ್ಟಿದ್ದಾರೆ.

ಇಂದು [ಬುಧವಾರ] ಬಜೆಟ್ ಅಧಿವೇಶನಕ್ಕೆ ಹಾಜರಾಗಬೇಕೆಂದು ಮಂಗಳವಾರವೇ ಕಾಂಗ್ರೆಸ್ ತನ್ನೆಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಆದ್ರೆ ವಿಪ್ ಗೆ ಕಿಮ್ಮತ್ತು ಕೊಡದೇ ಕಾಂಗ್ರೆಸ್ ನ 7 ಶಾಸಕರು ಬಜೆಟ್ ಅಧಿವೇಶನಕ್ಕೆ  ಗೈರಾಗಿದ್ದರು. 

ಬಜೆಟ್ ಅಧಿವೇಶನ ಆರಂಭ: ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ಅಡ್ಡಿ

ಇದು ಸಿದ್ದರಾಮಯ್ಯ ಅವರನ್ನು ಕೆರಳಿಸಿದ್ದು, ಇದೀಗ ಆ ಶಾಸಕರಿಗೆ ಡೆಡ್ ಲೈನ್ ಕೊಟ್ಟಿದ್ದಾರೆ. ಫೆಬ್ರವರಿ 8ರಂದು ಕರೆದಿರೋ ಶಾಸಕಾಂಗ ಸಭೆಗೆ ಅತೃಪ್ತರು ಖುದ್ದು ಹಾಜರಾಗಲೇಬೇಕು ಎಂದು ಸಿದ್ದರಾಮಯ್ಯ ಅವರು ಮತ್ತೊಮ್ಮೆ ನೋಟಿಸ್ ನೀಡಿದ್ದಾರೆ.

ಫೆ.8ರಂದು ಶಾಸಕಾಂಗ ಸಭೆಗೆ ಗೈರಾದ್ರೆ ಅತೃಪ್ತರ ವಿರುದ್ಧ ಸ್ಪೀಕರ್ ಗೆ ದೂರು ನೀಡುವುದರ ಜತೆಗೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹತೆಗೆ ಶಿಫಾರಸ್ಸು ಮಾಡಲಾಗುವುದು ಎಂದು ಖಡಕ್ ಆಗಿ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ

ಎಲ್ಲಿ ಹೋದರು ಚಿಂಚೋಳಿ ಕಾಂಗ್ರೆಸ್ ಶಾಸಕ ?

ಗೋಕಾಕ್ ಶಾಸಕ [ಮಾಧ್ಯಮಗಳಿಂದ ಬ್ಯಾನ್], ಉಮೇಶ್ ಜಾಧವ್, ಮಹೇಶ್ ಕಮಟಳ್ಳಿ, ನಾಗೇಂದ್ರ, ಜೆ.ಎನ್.ಗಣೇಶ್, ಡಾ. ಸುಧಾಕರ್ ಸೇರಿದಂತೆ ಹಲವರು ಇಂದು ಬಜೆಟ್ ಅಧಿವೇಶಕ್ಕೆ ಗೈರಾಗಿದ್ದರು.

ಇದ್ರಿಂದ ಬಿಜೆಪಿ ಸೈಲೆಂಟ್ ಆಗಿ ತನ್ನ ಆಪರೇಷನ್ ಮುಂದುವರಿಸಿದೆ. ಇದರ ಮುಂಜಾಗ್ರತಾ ಕ್ರಮವಾಗಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಒಂದು ವೇಳೆ ಇದಕ್ಕೂ ಗೈರಾದರೆ ಅತೃಪ್ತ ಶಾಸಕರ ವಿರುದ್ಧ ಕ್ರಮಕೈಗೊಳ್ಳುವುದು ಕಟ್ಟಿಟ್ಟ ಬುತ್ತಿ.