ಕಲಬುರಗಿ : ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾದವ್ ನಾಪತ್ತೆಯಾಗಿದ್ದು ಇದೀಗ ಅವರು ಎಲ್ಲಿ ತೆರಳಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ. ಇಂದಿನಿಂದ [ಫೆ.6] ರಾಜ್ಯ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು, ಅತೃಪ್ತರ ಗುಂಪಿನಲ್ಲಿದ್ದ ಜಾಧವ್ ಅಧಿವೇಶನಕ್ಕೆ ರಾಜರಾಗುವುದು ಅನುಮಾನವಾಗಿದೆ. 

ಬೆಂಗಳೂರಿನ ನಿವಾಸದಲ್ಲಿಯೂ ಇಲ್ಲವೆಂದು ಸ್ವತಃ ಉಮೇಶ್ ಜಾದವ್ ಪುತ್ರಿಯೇ ಮಾಹಿತಿ ನೀಡಿದ್ದಾರೆ.  ಅತೃಪ್ತ ಶಾಸಕರ ಟೀಮ್ ನಲ್ಲಿ‌ ಜಾಧವ್ ಕಾಣಿಸಿಕೊಂಡಿದ್ದು,  ಕಾಂಗ್ರೆಸ್ ನಾಯಕರ ಕೈಗೂ ಸಿಗದಂತೆ ಓಡಾಡುತ್ತಿದ್ದಾರೆ.  

ಈಗಾಗಲೇ ಕಾಂಗ್ರೆಸ್ ಮುಖಂಡರಿಗೆ ಅಧಿವೇಶನಕ್ಕೆ ಹಾಜರಾಗುವಂತೆ ಪಕ್ಷದಿಂದ ವಿಪ್ ಜಾರಿ ಮಾಡಿದ್ದು, ಉಮೇಶ್ ಜಾಧವ್ ಗೂ ಕೂಡ ವಿಪ್ ನೀಡಲಾಗಿದೆ. 

ಅಲ್ಲದೆ ಜನವರಿ ತಿಂಗಳಲ್ಲಿ ನಡೆದ ಶಾಸಕಾಂಗ ಸಭೆಗೆ ಆಗಮಿಸದಿರುವುದಕ್ಕೂ  ಖುದ್ದಾಗಿ ಹಾಜರಾಗಿ ಕಾರಣ ತಿಳಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.