ಪೊಲೀಸ್ ಸ್ಟೇಷನ್‌ಗಳು ಕಾಂಗ್ರೆಸ್ ಕಚೇರಿಗಳಾಗಿವೆ: ಅಶೋಕ್
ಕಾಂಗ್ರೆಸ್ ಸರ್ಕಾರ ಬಂದರೆ ಕೋಮುವಾದಿ ಮುಸ್ಲಿಮರಿಗೆ ಹಬ್ಬ ಇದ್ದಂತೆ. ಮಾಡಬಾರದ್ದನ್ನು ಮಾಡಿ ನಮ್ಮ ಸರ್ಕಾರ ಇದೆ ಎಂದು ಹೇಳುತ್ತಾರೆ. ಯಾವುದೇ ರಸ್ತೆಯಲ್ಲೂ ನಿರ್ಭಯವಾಗಿ ಗಣೇಶನ ಮೆರವಣಿಗೆ ಮಾಡಲಾಗುತ್ತಿಲ್ಲ. ಇಡೀ ರಾಜ್ಯದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತ ಸ್ಥಿತಿ ಇದೆ: ಪ್ರತಿಪಕ್ಷ ನಾಯಕ ಆರ್.ಅಶೋಕ್
ಹಾಸನ(ಸೆ.22): ರಾಜ್ಯದಲ್ಲಿ ಪೊಲೀಸ್ ಸ್ಟೇಷನ್‌ಗಳು ಸ್ಟೇಷನ್‌ಗಳಾಗಿ ಉಳಿದಿಲ್ಲ. ಕಾಂಗ್ರೆಸ್ ಕಚೇರಿಗಳಾಗಿ ಮತ್ತು ಆ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೆಲ ಕೋಮುವಾದಿ ಮುಸ್ಲಿಮರಿಗೆ ಹಬ್ಬವಿದ್ದಂತೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ನನ್ನ ಮೇಲೆ, ಶೋಭಾ ಕರಂದ್ಲಾಜೆ ಹಾಗೂ ಯತ್ನಾಳ್ ಅವರ ಮೇಲೆ ಕೇಸ್ ಹಾಕಿದ್ದಾರೆ. ತನಿಖೆ ಮಾಡಿ ಅಂತ ಹೇಳುವ ಹಕ್ಕು ವಿರೋಧ ಪಕ್ಷದ ನಾಯಕನಿಗೆ ಇಲ್ಲವೇ?. ಸುಮೋಟೋ ಕೇಸ್ ದಾಖಲಿಸಿದ್ದಾರೆ. ಕಾನ್ಸ್‌ಟೇಬಲ್ ಕಂಪ್ಲೆಂಟ್ ಕೊಡುತ್ತಾನೆ, ಇನ್ಸ್‌ಪೆಕ್ಟರ್ ಕೇಸ್ ಹಾಕುತ್ತಾನೆ. ಈಗ ಪೊಲೀಸ್ ಸ್ಟೇಷನ್‌ಗಳು ಸ್ಟೇಷನ್‌ಗಳಾಗಿ ಉಳಿದಿಲ್ಲ. ಪೊಲೀಸ್ ಸ್ಟೇಷನ್‌ಗಳು ಕಾಂಗ್ರೆಸ್ ಕಚೇರಿಗಳಾಗಿ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.
ಗಲಭೆಗೆ ಸರ್ಕಾರದ ವೈಫಲ್ಯವೇ ಕಾರಣ: ಕಾಂಗ್ರೆಸ್ ನಾಯಕರಿಗೆ ಆರ್.ಅಶೋಕ್ ತಿರುಗೇಟು
ಕಾಂಗ್ರೆಸ್ ಸರ್ಕಾರ ಬಂದರೆ ಕೋಮುವಾದಿ ಮುಸ್ಲಿಮರಿಗೆ ಹಬ್ಬ ಇದ್ದಂತೆ. ಮಾಡಬಾರದ್ದನ್ನು ಮಾಡಿ ನಮ್ಮ ಸರ್ಕಾರ ಇದೆ ಎಂದು ಹೇಳುತ್ತಾರೆ. ಯಾವುದೇ ರಸ್ತೆಯಲ್ಲೂ ನಿರ್ಭಯವಾಗಿ ಗಣೇಶನ ಮೆರವಣಿಗೆ ಮಾಡಲಾಗುತ್ತಿಲ್ಲ. ಇಡೀ ರಾಜ್ಯದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತ ಸ್ಥಿತಿ ಇದೆ. ಗಣೇಶನನ್ನು ಎಲ್ಲಿ, ಎಷ್ಟು ದಿನ ಕೂರಿಸಬೇಕೆಂದು ಗಣಪತಿ ಸೇವಾಸಮಿತಿ ತೀರ್ಮಾನ ಮಾಡುತ್ತಿದ್ದರು. ಈಗ ಗಣೇಶನನ್ನು ಕೂರಿಸುವ ಸಂಬಂಧ ಪೊಲೀಸರು ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.