Asianet Suvarna News Asianet Suvarna News

Lok Sabha Election 2024: ಕರ್ನಾಟಕ ಬೂತ್‌ ಅಧ್ಯಕ್ಷರ ಜತೆಗಿಂದು ಮೋದಿ ಸಂವಾದ

ಸಂಜೆ 4.30ಕ್ಕೆ ಮೋದಿ ಅವರು ಸಂವಾದ ನಡೆಸಲಿದ್ದು, ಬೂತ್ ಅಧ್ಯಕ್ಷರಲ್ಲದೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೋರ್‌ಕಮಿಟಿ ಸದಸ್ಯರು, ಲೋಕಸಭಾ ಅಭ್ಯರ್ಥಿಗಳು, ಶಾಸಕರು ಭಾಗವಹಿಸಲಿದ್ದಾರೆ 

PM Narendra Modi's Interaction with Karnataka Booth Presidents on April 5th grg
Author
First Published Apr 5, 2024, 6:07 AM IST

ಬೆಂಗಳೂರು(ಏ.05):  ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಜ್ಯ ಬಿಜೆಪಿಯ ಬೂತ್ ಅಧ್ಯಕ್ಷರೊಂದಿಗೆ 'ನಮೋ ಆ್ಯಪ್' ಮೂಲಕ ಸಂವಾದ ನಡೆಸಲಿದ್ದಾರೆ.

ಸಂಜೆ 4.30ಕ್ಕೆ ಮೋದಿ ಅವರು ಸಂವಾದ ನಡೆಸಲಿದ್ದು, ಬೂತ್ ಅಧ್ಯಕ್ಷರಲ್ಲದೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೋರ್‌ಕಮಿಟಿ ಸದಸ್ಯರು, ಲೋಕಸಭಾ ಅಭ್ಯರ್ಥಿಗಳು, ಶಾಸಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಕ್ಕೆ 358 ಅಭ್ಯರ್ಥಿಗಳ ನಾಮಪತ್ರ

ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತದೆ. ಬೂತ್‌ಗಳು ಬಲಶಾಲಿಯಾಗಿದ್ದರೆ ಗೆಲುವು ಸುಲಭ ಎಂಬ ಅಭಿಪ್ರಾಯವಿದೆ. ಹೀಗಾಗಿ, ಮೋದಿ ಅವರು ಲೋಕಸಭಾ ಚುನಾವಣೆಗೆ ಕೈಗೊಳ್ಳಬೇಕಾಗಿರುವ ಪ್ರಚಾರದ ಕುರಿತು ಬೂತ್‌ ಅಧ್ಯಕ್ಷರಿಗೆ ಸಲಹೆ ನೀಡಲಿದ್ದಾರೆ.

Follow Us:
Download App:
  • android
  • ios