Asianet Suvarna News Asianet Suvarna News

ದೇಶವನ್ನು ದಿವಾಳಿ ಮಾಡಿದ್ದು ಮೋದಿ: ಸಿದ್ದು ವಾಗ್ದಾಳಿ

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನಮ್ಮ ದೇಶದ ಸಾಲ ₹53.11 ಲಕ್ಷ ಕೋಟಿ ಅಷ್ಟೇ ಇತ್ತು. ಆದರೆ ಇದೀಗ ಅದು 125 ಲಕ್ಷ ಕೋಟಿ ರು.ವರೆಗೂ ಮುಟ್ಟಿದೆ ಎಂದು ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

PM Narendra Modi has Bankrupted the Country Says Karnataka CM Siddaramaiah grg
Author
First Published Nov 12, 2023, 7:00 AM IST

ಬಂಗಾರಪೇಟೆ(ನ.11): ಕಾಂಗ್ರೆಸ್‌ ಸರ್ಕಾರ ಕರ್ನಾಟಕವನ್ನೇ ದಿವಾಳಿ ಮಾಡಿದೆ ಎಂದು ಅಸಂಬದ್ಧವಾಗಿ ಟೀಕಿಸುವ ಪ್ರಧಾನಿ ಮೋದಿ ದೇಶವನ್ನೇ ದಿವಾಳಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಅಣೆಕಟ್ಟನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನಮ್ಮ ದೇಶದ ಸಾಲ ₹53.11 ಲಕ್ಷ ಕೋಟಿ ಅಷ್ಟೇ ಇತ್ತು. ಆದರೆ ಇದೀಗ ಅದು 125 ಲಕ್ಷ ಕೋಟಿ ರು.ವರೆಗೂ ಮುಟ್ಟಿದೆ ಎಂದರು.

ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ: ಈಶ್ವರಪ್ಪ

ಹಗಲುಗನಸು:

ಇನ್ನು, ಪದೇ ಪದೇ ಕಾಂಗ್ರೆಸ್ ಹೆಚ್ಚು ದಿನ ಇರುವುದಿಲ್ಲ ಎಂದು ಮೋದಿ ಅಲ್ಲಲ್ಲಿ ಭವಿಷ್ಯ ನುಡಿಯುತ್ತಾರೆ. ಅದು ಕೇವಲ ಅವರ ಹಗಲುಗನಸು ಎಂದೂ ತಿರುಗೇಟು ನೀಡಿದರು.

Follow Us:
Download App:
  • android
  • ios