ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಕಲು ಮಾಡುವ ಮೋದಿ: ಕೃಷ್ಣಮೂರ್ತಿ ಆಚಾರ್ಯ
ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ನೀಡಿದ ಜನಕಲ್ಯಾಣ ಯೋಜನೆಗಳನ್ನು ಉಚಿತ ಯೋಜನೆಗಳು, ಬಿಟ್ಟಿ ಭಾಗ್ಯಗಳು ಎಂದು ಹಿಯಾಳಿಸುತ್ತಾ ಭಾರತ ಪಾಕಿಸ್ತಾನ, ಶ್ರೀಲಂಕಾ ರೀತಿ ಆಗುತ್ತದೆ ಎನ್ನುತ್ತಿದ್ದ ಬಿಜೆಪಿ ಈಗ ಅದೇ ಗ್ಯಾರಂಟಿ ಮಾದರಿಯಲ್ಲಿ ಘೋಷಣೆಗಳನ್ನು ಮಾಡುತ್ತಿದೆ: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ
ಉಡುಪಿ(ನ.09): ಉಚಿತ ಯೋಜನೆಗಳಿಂದ ಆರ್ಥಿಕತೆ ಹಾಳಾಗುತ್ತದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಈಗ ‘ಮೋದಿ ಕಿ ಗ್ಯಾರಂಟಿ’ ಘೋಷಿಸಿದ್ದಾರೆ. ಇದು ನರೆಂದ್ರ ಮೋದಿ ಕಿ ಗ್ಯಾರಂಟಿ ಅಲ್ಲ, ಇದು ಜನರಿಗೆ ಮತ್ತೋಮ್ಮೆ ಮಂಕು ಬೂದಿ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಹೇಳಿದ್ದಾರೆ.
ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ನೀಡಿದ ಜನಕಲ್ಯಾಣ ಯೋಜನೆಗಳನ್ನು ಉಚಿತ ಯೋಜನೆಗಳು, ಬಿಟ್ಟಿ ಭಾಗ್ಯಗಳು ಎಂದು ಹಿಯಾಳಿಸುತ್ತಾ ಭಾರತ ಪಾಕಿಸ್ತಾನ, ಶ್ರೀಲಂಕಾ ರೀತಿ ಆಗುತ್ತದೆ ಎನ್ನುತ್ತಿದ್ದ ಬಿಜೆಪಿ ಈಗ ಅದೇ ಗ್ಯಾರಂಟಿ ಮಾದರಿಯಲ್ಲಿ ಘೋಷಣೆಗಳನ್ನು ಮಾಡುತ್ತಿದೆ ಎಂದವರು ಟೀಕಿಸಿದ್ದಾರೆ.
ಉಡುಪಿ: ಚಪ್ಪಲಿ ಸಂಗ್ರಹ ಅಭಿಯಾನಕ್ಕೆ ಭೇಷ್ ಎಂದ ಬಿ.ಎಲ್. ಸಂತೋಷ್..!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದಿನ ಆಡಳಿತದ ಐದು ವರ್ಷದಲ್ಲಿ ನುಡಿದಂತೆ ನಡೆದಿದ್ದಾರೆ. ಇದು ಎಲ್ಲ ರಾಜ್ಯಗಳಿಗೂ ಮಾದರಿಯಾಗಿದೆ. ಆದರೆ ಬಣ್ಣಬಣ್ಣದ ಭಾಷಣಗಳನ್ನು ಮಾಡಿದ ನರೇಂದ್ರ ಮೋದಿ ಅವರು ಗೆದ್ದ ನಂತರ ಭಾಷಣದಲ್ಲಿ ಹೇಳಿದ ಭರವಸೆಗಳನ್ನು ಈಡೇರಿಸಿಲ್ಲ. ಈಗ ಕಾಂಗ್ರೆಸಿನ ಉಚಿತ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಜನರಿಗೆ ಮೋಸ ಮಾಡಿ ಮತವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಳೆದ 9 ವರ್ಷದಲ್ಲಿ ಭರವಸೆಗಳನ್ನು ಸುಳ್ಳು ಮಾಡಿದ ಅವರನ್ನು ಜನರು ರಾಜ್ಯದಲ್ಲಿ ತಿರಸ್ಕರಿಸಿದ್ದಾರೆ. ಇದೀಗ ಲೋಕಸಭಾ ಚುನಾವಣೆಯಲ್ಲಿಯೂ ಗ್ಯಾರಂಟಿಯಾಗಿ ವರನ್ನು ಜನರು ಮನೆಗೆ ಕಳಿಸುತ್ತಾರೆ ಎಂದು ಕೃಷ್ಣಮೂರ್ತಿಆಚಾರ್ಯ ಪ್ರಕಟಣೆಯಲ್ಲಿ ಹೇಳಿದ್ದಾರೆ.