Asianet Suvarna News Asianet Suvarna News

Kalaburagi: ಮಳಖೇಡಕ್ಕೆ ಪ್ರಧಾನಿ ಮೋದಿ ಆಗಮನ: ಇಲ್ಲಿದೆ ನೋಡಿ ಸಿದ್ಧತೆಯ ಹೈಲೆಟ್ಸ್‌


ಕಲಬುರಗಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಗಮನದ ಹಿನ್ನೆಲೆಯಲ್ಲಿ 3 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನೂರು ಎಕರೆ ಕೃಷಿ ಭೂಮಿಯಲ್ಲಿ ಪೆಂಡಾಲ್‌ ನಿರ್ಮಿಸಿ 5 ಲಕ್ಷ ಜನರು ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. 

PM Narendra Modi arrival at Malakheda Here are highlights of the preparations sat
Author
First Published Jan 18, 2023, 10:38 PM IST

ಕಲಬುರಗಿ (ಜ.18): ಸೇಡಂ ತಾಲೂಕಿನ ಮಳಖೇಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಎಲ್ಲಿ 5 ಲಕ್ಷದಷ್ಟು ಜನ ಸೇರುವ ನಿರೀಕ್ಷೆ ಇದೆ. ಇದಕ್ಕಾಗಿ ಬಿಗಿ ಭದ್ರತೆ ಮಾಡಲಾಗಿದೆ. ಈಗಾಗಲೇ ಜಿಲ್ಲಾಡಳಿತ 3 ಸಾವಿರಕ್ಕೂ ಹೆಚ್ಚಿನ ಪೊಲೀಸ್‌ ಬಲ ಅಲ್ಲಿ ನಿಯೋಜಿಸಿದೆ. ಜೊತೆಗೆ 100 ಎಕರೆ ಹೊಲದಲ್ಲಿ ಬೃಹದಾಕಾರದ ಪೆಂಡಾಲ್ ಹಾಕಿ ದೊಡ್ಡ ವೇದಿಕೆಯನ್ನು ಸಿದ್ಧಗೊಳಿಸಲಾಗಿದೆ.

ಕಲಬರಗಿ ವಿಮಾನ ನಿಲ್ದಾಣದಿಂದ ಮಳಖೇವರೆಗೂ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಎಸ್ಪಿ ದರ್ಜೆಯ 5 ಅಧಿಕಾರಿಗಳು, 20 ಡಿವೈಎಸ್ಪಿಗಳು, 50 ಸಿಪಿಐ, 125 ಪಿಎಸ್‍ಐ, 165 ಎಎಸ್‍ಐ, 1 ಸಾವಿರ ಪೇದೆಗಳು, 500 ಹೋಮ್ ಗಾರ್ಡ್, ಕೆಎಸಾರ್ಪಿ, ಡಿಎಆರ್ 15 ತುಕುಡಿಗಳು, 300 ಸೈನಿಕರು ಸೇರಿದಂತೆ 3 ಸಾವಿರಕ್ಕೂ ಹೆಚ್ಚಿನ ಭದ್ರತಾ ಬಲದವರು ಮಳಖೇಡ ಪರಿಸರದಲ್ಲಿ ಕೆಲಸದ ಮೇಲೆ ನಿಯೋಜಿತರಾಗಿದ್ದಾರೆ. ಸದರಿ ಕಾರ್ಯಕ್ರಮಕ್ಕೆ 300 ಬಸ್, 1 ಸಾವಿರ ಕ್ರೂಸರ್, ಜೀಪ್, 1 ಸಾವಿರ ಬೈಕ್ ಬರಲಿವೆ. ಹೀಗಾಗಿ 5 ಲಕ್ಷಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆ ಸಂಘಟಕರದ್ದಾಗಿದೆ. 

ಕೊಡೆಕಲ್ ಹೆಲಿಪ್ಯಾಡಿನಿಂದ ಬಿಡುವ ಪ್ರದಾನಿ ಮೋದಿಯವರು ಮಧ್ಯಾಹ್ನ 2 ಗಂಟೆಗೆ ಮಳಖೇಡಕ್ಕೆ ಬರಲಿದ್ದಾರೆ. ಇಲ್ಲಿನ ಸಮಾರಂಭದಲ್ಲಿ 1 ಗಂಟೆ 10 ನಿಮಿಷ ಇದ್ದು ಹಕ್ಕುಪತ್ರ ವಿತರಿಸಿದ ನಂತರ ಹೆಲಿಕಾಪ್ಟರ್ ಮೂಲಕ  ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ವಿಮಾನಲ್ಲಿ ದೆಹಲಿ ಪ್ರಯಾಣ ಮಾಡಲಿದ್ದಾರೆ.

Kalaburagi: ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್‌ಗೂ ಮಾನ್ಯಕೇಟಕ್ಕೂ ನಂಟು: ಮುನ್ನೆಲೆಗೆ ಬಂದ ಇತಿಹಾಸ

100 ಎಕರೆ ಹೊಲದಲ್ಲಿ ಬೃಹತ್‌ ಪೆಂಡಾಲ್: ಮಳಖೇಡದಲ್ಲಿ ಪ್ರಧಾನಿ ಸಮಾರಂಭ ನಿಗದಿಯಾಗಿದ್ದರಿಂದ ಜಿಲ್ಲಾಡಳಿತ ಇಲ್ಲಿ 100 ಎಕರೆಗೂ ಹೆಚ್ಚಿನ ಹೊಲದಲ್ಲಿ ಪೆಂಡಾಲ್ ಹಾಕಿದೆ. ಕಲಬುರಗಿ ಕಡೆಯಿಂದ ಬರುವಾಗ ರಾಜ್ಯ ಹೆದ್ದಾರಿ 10 ರ ಬಲಗಡೆ ಈ ಜಾಗವಿದೆ. ವೇದಿಕೆ ಹಿಂಭಾಗದಲ್ಲೇ ವಾಹನ ನಿಲುಗಡೆ, ಪಕ್ಕದಲ್ಲೇ ಊಟದ ವ್ಯವಸ್ಥೆ ಮಾಡಲಾಗಿದೆ. ತೊಗರಿ ಹೊಲಗದ್ದೆಯಲ್ಲೇ ವೇದಿಕೆ ನಿರ್ಮಿಸಲಾಗಿದೆ. ತೊಗರಿ ರಾಶಿಯಾಗಿದ್ದು ಹೊಲಗದ್ದೆ ಖಾಲಿ ಇರೋದರಿಂದ ಇಲ್ಲೆಲ್ಲಾ ಸ್ವಚ್ಚಮಾಡಿ ಹಸನುಗೊಳಿಸಲಾಗಿದೆ. 500 ಮೀಟರ್ ಅಂತರದಲ್ಲಿ 3 ಹೆಲಿಪ್ಯಾಡ್ ನಿರ್ಮಿಸಲಾಗಿದ್ದು ಅಲ್ಲಿಂದ ವೇದಿಕೆಗೆ ರಸ್ತೆಯೂ ತಲೆ ಎತ್ತಿದೆ. ಹಲವೆಡೆ ಮುರುಮ್ ಹಾಕಿ ಗಟ್ಟಿ ಮಾಡಲಾಗಿದೆ. 

ಕಾರ್ಯಕ್ರಮದ ನಂತರ ಹೊಲ ಯಥಾರೀತಿ ಮಾಡಲು ಕ್ರಮ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ 100 ಹೊಲವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೆಲವೆಡೆ ಹೊಲ ಗಟ್ಟಿ ಮಾಡಲಾಗಿದೆ. ಹೊಲದ ಬದುವುಗಳನ್ನು ತೆರವು ಮಾಡಲಾಗಿದೆ. ಕಾರ್ಯಕ್ರಮದ ನಂತರ ಹೊಲಗದ್ದೆ ಯಥಾರೀತಿ ಇದ್ದಂತೆಯೇ ಮಾಡಿಕೊಡಲಾಗುತ್ತದೆ. ಬೆಳೆ ನಷ್ಟ ಆದಲ್ಲಿ ಭರಿಸಲಾಗುತ್ತದೆ ಎಂದು ಸ್ಥಳೀಯ ಮುಖಂಡರು ರೈತರ ಮನ ಒಲಿಸಿದ್ದಾರೆ, ರೈತರೂ ಪ್ರದಾನಿಗಾಗಿ ತಮ್ಮ ಹೊಲಗದ್ದೆ ಬಿಟ್ಟುಕೊಟ್ಟಿದ್ದಾರೆ. 8 ಕಡೆ ಸಂಪರ್ಕ ಸೇತುವೆ ನಿರ್ಮಿಸಲಾಗಿದೆ. ಇದರಿಂದ ತಮ್ಮ ಹೊಲಗಳಿಗೆ ಹೋಗಲು ಈ ಸೇತುವೆ ದಾರಿ ಅನುಕೂಲವಾಗಲಿದೆ ಎಂದು ರೈತರು ಸಂತಸದಲ್ಲಿದ್ದಾರೆ.

ಮಳಖೇಡಕ್ಕೆ ಆಗಮಿಸಲಿರುವ ಪ್ರಧಾನಿಗೆ ವಿಶೇಷ ಉಡುಗೊರೆ

ಸ್ವಯಂ ಪ್ರೇರಣೆಯಿಂದ ಹೊಲ ನೀಡಿದ ರೈತರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಳಖೇಡ ಸಮಾರಂಭಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ರೈತರು ಸ್ವಯಂ ಪ್ರೇರಣೆಯಿಂದ ಹೊಲದ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ರೈತ ಶರಣು ಸೇರಿದಂತೆ ಹಲವರು ತಮ್ಮ ಜಮೀನು ನೀಡಿದ್ದಾರೆ. ಹೆಲಿಪ್ಯಾಡ್ ಇತ್ಯಾದಿ ಕೆಲಸಗಲಿಗೆ ಜಮೀನು ನೀಡಿರುವ ಇವರು ದೇಶದ ಪ್ರಧಾನಿ ನಮ್ಮೂರಿಗೆ, ಹೊಲದಲ್ಲೇ ಬರುತ್ತಿದ್ದಾರೆಂದರೆ ಇದು ತಮ್ಮಸೌಭಾಗ್ಯ ಎಂದು ಹೇಳಿ ಸಂತಸದಲ್ಲಿದ್ದಾರೆ. ಪ್ರಧಾನಿ ವೇದಿಕೆಯ ಹಿಂಭಾಗದಲ್ಲಿರುವ 5 ಎಕರೆ ಕಡಲೆ ಬೆಳೆ ಮಾತ್ರ ವೇದಿಕೆ ಸಿದ್ಧತೆಯಲ್ಲಿ ತುಸು ಹಾನಿಗೊಳಗಾಗಿದೆ. 

ಕಾಯಿ ಕಟ್ಟುವ ಹಂತದಲ್ಲಿದ್ದ ಶೇಂಗಾ ಬೆಳೆ ಹಾನಿ: ಕಾಯಿ ಕಟ್ಟುವ ಹಂತದಲ್ಲಿರುವ ಕಡಲೆ ಬೆಳೆ ಅಲ್ಲಲ್ಲಿ ಮುರಿದು ಹೋಗಿದೆ. ಅಲ್ಲಿಗೆ ಬರುತ್ತಿರುವ ಜನ ಕಡಲೆ ಕಿತ್ತುಕೊಂಡು ತಿನ್ನುತ್ತಿದ್ದಾರೆ. ಯಾರಿಗೂ ನಯಂತ್ರಣ ಸಾಧ್ಯವಾಗುತ್ತಿಲ್ಲ. ರೈತ ಮಹಿಲೆ ಪಾರ್ವತಿ ಹಾಗೂ ಬಸವರಾಜ ಇವರು ಕಡಲೆ ಹಾಳಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರಾದರೂ ಪರಿಹಾರದ ಭರವಸೆ ಬೇಗ ಸಾಕಾರವಾಗಲಿ ಎಂದು ಹೇಳಿದ್ದಾರೆ. 60 ಎಕರೆಯಲ್ಲಿ ವೇದಿಎ ಹಾಗೂ ಉಳಿದಂತೆ ವಾಹನ ನಿಲುಗಡೆ, ಬೋಜನಕ್ಕೆ ಬಳಸಲಾಗುತ್ತಿದೆ.

Follow Us:
Download App:
  • android
  • ios