ಬೆಂಗಳೂರು, (ಅ.31): ಆರ್.ಆರ್.ನಗರ ಕ್ಷೇತ್ರದಲ್ಲಿ ಪ್ರಾಮಾಣಿಕ ಅಭ್ಯರ್ಥಿ ಹಾಕಿದ್ದೇವೆ, ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುತ್ತಾರೆ ಇದಕ್ಕೆ ಜನ ಚುನಾವಣೆ ದಿನ ಉತ್ತರ ಕೊಡುತ್ತಾರೆ ಎಂದು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಪೀಣ್ಯದ ಕೈಗಾರಿಕೆ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಕೈಗಾರಿಕೆಗೆ ಒತ್ತು ನೀಡಿದ್ದೆ. ಕಾಂಪೀಟ್ ವಿತ್ ಚೀನಾ ಯೋಜನೆ ಜಾರಿ ಮಾಡಿದ್ದೆ. ಇದೀಗ ಪ್ರಧಾನಿ ಮೋದಿ ನನ್ನ ಪ್ರಾಜೆಕ್ಟ್ ಹೈಜಾಕ್ ಮಾಡಿದ್ದಾರೆ ಎಂದರು.

ನಾಮಪತ್ರ ವಾಪಸ್ ಪಡೆದು ಚುನಾವಣಾ ಅಖಾಡದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

ಲೂಟಿ ಹೊಡೆಯುವವರನ್ನ ಆಯ್ಕೆ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿಯ ಮಾತು ರಾಜ್ಯದಲ್ಲಿ ಪಾಲಿಸಬೇಕು. ಕಳಪೆ ಕಾಮಗಾರಿಯಿಂದ ಹಣ ಮಾಡಿದ್ದಾರೆ. ಲೂಟಿ ಮಾಡಿದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಎಂದು ಕುಮಾರಸ್ವಾಮಿ ಹೇಳಿದರು.

ಕೈಗಾರಿಕೋದ್ಯಮ ಸಂಘದ ಮುಖಂಡರ ಜೊತೆ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣ ಮೂರ್ತಿ, ಮಾಜಿ ಶಾಸಕ ಶರವಣ ಹಾಗೂ ಜೆಡಿಎಸ್ ನಗರ ಅಧ್ಯಕ್ಷ ಪ್ರಕಾಶ್ ಹಾಜರಿದ್ದರು.