Asianet Suvarna News Asianet Suvarna News

ನಾಮಪತ್ರ ವಾಪಸ್ ಪಡೆದು ಚುನಾವಣಾ ಅಖಾಡದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

ಬಿಜೆಪಿ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದು ಚುನಾವಣಾ ಅಖಾಡದಿಂದೆ ಸರಿದಿದ್ದಾರೆ. ಇದರಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ.

Congress Wins In haveri municipality-president-election rbj
Author
Bengaluru, First Published Oct 31, 2020, 3:57 PM IST

ಹಾವೇರಿ, (ಅ.31): ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇಂದು (ಶನಿವಾರ) ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

ಅಧ್ಯಕ್ಷ-ಉಪಾಧ್ಯಕ್ಷ ಎರಡು ಸ್ಥಾನಗಳಲ್ಲಿ ಗೆದ್ದುಕೊಂಡಿದೆ. ಅಧ್ಯಕ್ಷರಾಗಿ‌ ಸಂಜೀವ ಕುಮಾರ ನೀರಲಗಿ, ಉಪಾಧ್ಯಕ್ಷರಾಗಿ ಜಹೀದಾಬಾನು ಜಮಾದಾರ ಅವಿರೋಧ ಆಯ್ಕೆಯಾದರು.

ಆಪರೇಷನ್ ಕಮಲ ಸಕ್ಸಸ್: ಸಚಿವ ಸುಧಾಕರ್ ವರ್ಚಸ್‌ನಿಂದ ಕಾಂಗ್ರೆಸ್‌ಗೆ ಮರ್ಮಾಘಾತ

ಬಿಜೆಪಿ ಸದಸ್ಯರ ಸಂಖ್ಯಾ ಬಲ ಕೊರತೆ ಹಿನ್ನೆಲೆ ಬಿಜೆಪಿ ಬೆಂಬಲಿತ ಬಸವರಾಜ ಬೆಳವಡಿ ನಾಮಪತ್ರ ಹಿಂಪಡೆದಿದ್ದರಿಂದ ಕಾಂಗ್ರೆಸ್ ಸಂಜೀವಕುಮಾರ ನೀರಲಗಿ ಅವಿರೋಧವಾಗಿ ಗೆಲುವು ಸಾಧಿಸಿದರು.

ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಭಾರಿ ಪೈಪೋಟಿ ನಡೆಸಿದ್ದವು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಪಕ್ಷೇತರರು ನಿರ್ಣಾಯಕರಾಗಿದ್ದರು. ಅಂತಿಮವಾಗಿ ನ4 ಪಕ್ಷೇತರರ ಬೆಂಬಲ ಪಡೆಯುವ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು.

ಚುನಾವಣಾಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Follow Us:
Download App:
  • android
  • ios