ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ತಡ ರಾತ್ರಿ 3.30ರವರೆಗೂ ಚುನಾವಣಾ ಸಮಿತಿ ಸಭೆ, ಕೆಲಸ ಮಾಡದ ಹಲವು ಸಂಸದರಿಗೆ ಕೊಕ್‌

ಲೋಕಸಭಾ ಚುನಾವಣೆಯ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಗುರುವಾರ ರಾತ್ರಿ 10.3ರಿಂದ ತಡರಾತ್ರಿ 3.30ರವರೆಗೂ 16 ರಾಜ್ಯಗಳ ಅಭ್ಯರ್ಥಿಗಳ ಕುರಿತು ಸಮಾಲೋಚನೆ ನಡೆಸಿದೆ.  ಸರಿಯಾಗಿ ಕಾರ್ಯನಿರ್ವಹಿಸದ ಹಲವು ಸಂಸದರಿಗೆ ಕೊಕ್‌.

PM Modi Lead BJP's Late-Night Meeting To Pick Candidates For Lok Sabha election 2024 gow

ನವದೆಹಲಿ (ಮಾ.2): ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿದೆ. ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಗುರುವಾರ ರಾತ್ರಿ 10.3ರಿಂದ ತಡರಾತ್ರಿ 3.30ರವರೆಗೂ 16 ರಾಜ್ಯಗಳ ಅಭ್ಯರ್ಥಿಗಳ ಕುರಿತು ಸಮಾಲೋಚನೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜ್‌ನಾಥ್‌ ಸಿಂಗ್‌ ಮೊದಲಾದವರು ಭಾಗಿಯಾಗಿದ್ದ ಸಭೆಯಲ್ಲಿ 110 ಸ್ಥಳಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಹೀಗೆ ಅಂತಿಮಗೊಂಡ ಪಟ್ಟಿಯನ್ನು ಯಾವುದೇ ಕ್ಷಣದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಅದರಲ್ಲಿ ಪ್ರಧಾನಿ ಮೋದಿ ಅವರ ವಾರಾಣಸಿ, ಅಮಿತ್‌ ಶಾ ಗಾಂಧೀನಗರ, ರಾಜ್‌ನಾಥ್‌ ಅವರ ಲಖನೌ ಕ್ಷೇತ್ರಗಳು, ಹಲವು ಕೇಂದ್ರ ಸಚಿವರ ಕ್ಷೇತ್ರ, ರಾಜ್ಯಸಭೆ ಬದಲು ಲೋಕಸಭೆ ಕಣಕ್ಕೆ ಇಳಿಸಲ್ಪಡುವ ಕೇಂದ್ರ ಸಚಿವರ ಕ್ಷೇತ್ರ ಸೇರಿರಲಿವೆ ಎನ್ನಲಾಗಿದೆ.

ಮೋದಿ ನೀವಲ್ಲ ನಿಮ್ಮಜ್ಜ ಬಂದ್ರೂ ತಮಿಳುನಾಡಿನಲ್ಲಿ ಡಿಎಂಕೆಗೆ ಏನೂ ಮಾಡೋಕೆ ಆಗಲ್ಲ: ಉದಯನಿಧಿ ಸ್ಟ್ಯಾಲಿನ್‌!

ಹಲವರಿಗೆ ಕೊಕ್‌: ಕಳೆದ 5 ವರ್ಷಗಳಲ್ಲಿ ಸಂಸದರಾಗಿ ಯಾವುದೇ ಗಮನಾರ್ಹ ಸೇವೆ ಸಲ್ಲಿಸದ ಹಲವರಿಗೆ ಪಕ್ಷ ಈ ಬಾರಿ ಕೊಕ್‌ ನೀಡಲು ನಿರ್ಧರಿಸಿದೆ. ಇದರಲ್ಲಿ ಹಲವು ನಟರು ಸೇರಿದ್ದಾರೆ ಎನ್ನಲಾಗಿದೆ.

ರಾತ್ರಿ 3.30ರವರೆಗೂ ಸಭೆ ನಡೆಸಿ ಬೆ.8ಕ್ಕೇ ಪ್ಲೇನ್‌ ಏರಿದ ಮೋದಿ!
ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಬಿಜೆಪಿಯ ಕೇಂದ್ರೀಯ ಮಂಡಳಿ ಸಭೆಯಲ್ಲಿ ಗುರುವಾರ ರಾತ್ರಿ 3:30ರವರೆಗೂ ಹಾಜರಿದ್ದರೂ, ಮನೆಗೆ ತೆರಳಿ ತಮ್ಮ ದೈನಂದಿನ ಕೆಲಸ ಮುಗಿಸಿ ವೇಳಾಪಟ್ಟಿಗೆ ಸರಿಯಾಗಿ ಬೆಳಗ್ಗೆ 8 ಗಂಟೆಗೆ ಜಾರ್ಖಂಡ್‌ಗೆ ತೆರಳಲು ವಿಮಾನ ಏರಲು ಬಂದ ಪ್ರಧಾನಿ ಮೋದಿಯ ಕರ್ತವ್ಯಪ್ರಜ್ಞೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಪರವಾಗಿ ಬುಲೆಟ್ ರಾಣಿ ರಾಜ ಲಕ್ಷ್ಮಿಯಿಂದ ದೇಶಾದ್ಯಂತ ಪ್ರಚಾರ!

ಈ ಕುರಿತು ಟ್ವೀಟ್‌ ಮಾಡಿರುವ ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ‘ತಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ದೃಢ ವಿಶ್ವಾಸವಿದ್ದರೂ ಪ್ರಧಾನಿ ಮೋದಿಯವರು ಅತ್ಯಂತ ಬದ್ಧತೆಯಿಂದ ತಮ್ಮನ್ನು ತಾವು ದೇಶ ಸೇವೆಗೆ ಸಂಪೂರ್ಣ ಸಮರ್ಪಿಸಿಕೊಂಡಿರುವುದು ಯುವಜನತೆಗೆ ಸ್ಫೂರ್ತಿ ಮೂಡಿಸುತ್ತದೆ’ ಎಂದಿದ್ದಾರೆ.ಪ್ರಧಾನಿ ಮೋದಿ ವಿದೇಶಗಳಿಗೆ ವಿಮಾನದಲ್ಲಿ ತೆರಳುವಾಗಲೂ ರಾತ್ರಿ ಸಮಯವನ್ನೇ ಆಯ್ಕೆ ಮಾಡಿ, ಅಲ್ಲೇ ವಿಶ್ರಾಂತಿ ಪಡೆಯುವ ಮೂಲಕ ಸಮಯ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮಾಡುತ್ತಾರೆ.

Latest Videos
Follow Us:
Download App:
  • android
  • ios