ಜನರ ಮಧ್ಯದಿಂದಲೇ ರೋಡ್ ಶೋ ಮೂಲಕ ವಿಜಯ ಸಂಕಲ್ಪ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ!

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಜನರ ನಡುವಿನಿಂದ ರೋಡ್ ಶೋ ಮೂಲಕ ಆಗಮಿಸಿದ್ದಾರೆ. ಈ ಮೂಲಕ ಗುಜರಾತ್ ಚುನಾವಣೆಗೂ ಮುನ್ನ ಮಾಡಿದ ರಣತಂತ್ರವ ಇಲ್ಲಿ ಪ್ರಯೋಗಿಸಿ, ಭರ್ಜರಿ ಗೆಲುವಿನ ಮುನ್ಸೂಚನೆ ನೀಡಿದ್ದಾರೆ. ಮೋದಿ ರೋಡ್ ಶೋ ಹೇಗಿತ್ತು?

PM Modi enter culmination of BJP Vijaya sankalpa yatra stage with open vehicle roadshow Davanagere Karnataka ckm

ದಾವಣಗೆರೆ(ಮಾ.25): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ರೀತಿಯಲ್ಲಿ ಭರ್ಜರಿ ಗೆಲುವು ದಾಖಲಿಸಲು ಪ್ರಧಾನಿ ನರೇಂದ್ರ ಮೋದಿ ಅದೇ ಮಾರ್ಗ ಅನುಸರಿಸಿದ್ದಾರೆ. ಇಂದು ದಾವಣಗೆರೆಯ ಬಿಡೆಪಿ ವಿಜಯ ಸಂಕಲ್ಪ ಸಮಾರಂಭದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಜನರ ಮಧ್ಯದಿಂದಲೇ ರೋಡ್ ಶೋ ಮೂಲಕ ಆಗಮಿಸಿದ್ದಾರೆ. ತೆರೆದ ವಾಹನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನರತ್ತ ಕೈಬೀಸುತ್ತಾ ವೇದಿಕೆಗೆ ಆಗಮಿಸಿದರು. ಈ ವೇಳೆ ಜನರು ಹೂವಿನ ಸುರಿಮಳೆಗೈದಿದಿದ್ದಾರೆ. ಅದ್ಧೂರಿ ರೋಡ್ ಶೋ ಮೂಲಕ ಪ್ರಧಾನಿ ಮೋದಿ ವೇದಿಕೆಗೆ ಎಂಟ್ರಿಕೊಟ್ಟಿದ್ದಾರೆ.

ಗುಜರಾತ್ ವಿಧಾಸಭಾ ಚುನಾವಣೆಯಲ್ಲಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಇದೇ ರೀತಿ ಜನರ ನಡುವೆ ತೆರೆದ ವಾಹನದ ಮೂಲಕ ವೇದಿಕೆಗೆ ಆಗಮಿಸಿದ್ದರು. ಬಳಿಕ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. ವಿಪಕ್ಷಗಳು ದೂಳೀಪಟವಾಗಿತ್ತು. ಇದೀಗ ಕರ್ನಾಟಕದಲ್ಲೂ ಅದೇ ರೀತಿ, ತೆರೆದ ವಾಹನದ ಮೂಲಕ ಜನರ ನಡುವಿನಿಂದಲೇ ರೋಡ್ ಶೋ ಮೂಲಕ ಪ್ರಧಾನಿ ಆಗಮಿಸಿದ್ದಾರೆ. ಕರ್ನಾಟಕದಲ್ಲಿ ಈ ರೀತಿ ಮೋದಿ ಸಮಾವೇಶ ಆಯೋಜಿಸಿದ ಸ್ಥಳದಲ್ಲಿ ಜನರ ನಡುವಿನಿಂದ ರೋಡ್ ಶೋ ಮೂಲಕ ಆಗಮಿಸಿರುವುದು ಇದೇ ಮೊದಲು.

ಕಾಂಗ್ರೆಸ್‌ಗೆ ಅಧಿಕಾರದ ದಾಹ, ಬಿಜೆಪಿಗೆ ಅಭಿವೃದ್ಧಿಯ ತುಡಿತ, ದಾವಣೆಗೆರೆಯಲ್ಲಿ ಸಿಎಂ ಬೊಮ್ಮಾಯಿ ಭಾಷಣ!

ಪ್ರಧಾನಿ ಮೋದಿ ತೆರೆದ ವಾಹನದ ಮೂಲಕ ಆಗಮಿಸಿದ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ  ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಾಥ್ ನೀಡಿದ್ದಾರೆ.

 ದಾವಣಗೆರೆಯ ಜಿಎಂಐಟಿ ಕಾಲೇಜಿನ ಸಮೀಪದ ಮೈದಾನದಲ್ಲಿ ಆಯೋಜಿಸಿರುವ ವಿಜಯ ಸಂಕಲ್ಪ ಯಾತ್ರೆಗೆ ಲಕ್ಷಾಂತರ ಮಂದಿ ಸೇರಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಪ್ರಧಾನಿ ಮೋದಿ ರಾಜ್ಯ ರಾಜಕೀಯ ಹಾಗೂ ಚುನಾವಣೆಗೆ ಹೊಸ ಹುರುಪು ನೀಡಿದ್ದಾರೆ. ಮಿಷನ್‌ 150 ಗುರಿಯೊಂದಿಗೆ ರಾಜ್ಯದ 4 ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿತ್ತು. ಮಾ.1ರಂದು ಮಲೆ ಮಾದೇಶ್ವರ ಬೆಟ್ಟ, ಮಾ.2ರಂದು ನಂದಗಡ, ಮಾ.3ಕ್ಕೆ ಬಸವ ಕಲ್ಯಾಣ, ಅದೇ ದಿನ ಅವತಿ ದೇವನಹಳ್ಳಿಯಿಂದ ರಥಯಾತ್ರೆ ಆರಂಭವಾಗಿತ್ತು. ಸುಮಾರು 5,600 ಕಿ.ಮೀ. ಕ್ರಮಿಸಿ ರಥಯಾತ್ರೆಗಳು ದಾವಣಗೆರೆಯಲ್ಲಿ ಮಹಾ ಸಂಗಮವಾಗಿದೆ.

ನನಗೆ 80 ವರ್ಷ, ಮನೆಗೆ ಮನಗೆ ತೆರಳಿ ಬಿಜೆಪಿ ಗೆಲ್ಲಿಸಲು ಶ್ರಮಿಸುತ್ತೇನೆ, ಮೋದಿ ಸಮ್ಮುಖದಲ್ಲಿ ಯಡಿಯೂರಪ್ಪ ಭರವಸೆ!

ದಾವಣಗೆರೆ ಕಾರ್ಯಕ್ರಮಕ್ಕೂ ಮೊದಲು ಪ್ರಧಾನಿ ಮೋದಿ ಚಿಕ್ಕಮಗಳೂರಿನ ಮಧುಸೂದನ್‌ ಸಾಯಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆ್ಯಂಡ್‌ ರಿಸರ್ಚ್ ಸೆಂಟರ್ ಉದ್ಘಾಟಿಸಿದ್ದಾರೆ. ಬಳಿಕ ಬೆಂಗಳೂರಿನ ವೈಟ್‌ಫೀಲ್ಡ್‌ ಮೆಟ್ರೋ ಲೈನ್‌ ಉದ್ಘಾಟಿಸಿ, ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಮೆಟ್ರೋ ಸಿಬ್ಬಂದಿಗಳ ಜೊತೆ ಮೋದಿ ಸಂಚಾರ ನಡೆಸಿದರು.   
 

Latest Videos
Follow Us:
Download App:
  • android
  • ios