Asianet Suvarna News Asianet Suvarna News

ನನಗೆ 80 ವರ್ಷ, ಮನೆಗೆ ಮನಗೆ ತೆರಳಿ ಬಿಜೆಪಿ ಗೆಲ್ಲಿಸಲು ಶ್ರಮಿಸುತ್ತೇನೆ, ಮೋದಿ ಸಮ್ಮುಖದಲ್ಲಿ ಯಡಿಯೂರಪ್ಪ ಭರವಸೆ!

ಬಿಜೆಪಿ ವಿಕಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಭಾಷಣ ಹೈಲೈಟ್ಸ್ ಇಲ್ಲಿದೆ.

BS Yediyurappa address people BJP Vijaya sankalpa yatra Davanagere Karnataka ckm
Author
First Published Mar 25, 2023, 4:00 PM IST

ದಾವಣಗೆರೆ(ಮಾ.25); ನನಗೆ 80 ವರ್ಷ ವಯಸ್ಸು. ಆದರೆ ವಿಶ್ರಾಂತಿ ಪಡೆಯಲ್ಲ. ನಾನು ಮನೆ ಮನೆಗೆ ತೆರಳಿ ಬಿಜೆಪಿ ಗೆಲ್ಲಿಸುವ ಕೆಲಸ ಮಾಡುತ್ತೇನೆ. ನನಗೆ ನಿಮ್ಮ ಸಹಕಾರ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರರಪ್ಪ ಹೇಳಿದ್ದಾರೆ. ದಾವಣೆಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, ಕಾರ್ಯಕರ್ತರಿಗೆ ವಿಶೇಷ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲೇ ಯಡಿಯೂರಪ್ಪ, ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ನೀಡಿದ್ದಾರೆ. 

ಒಂದು ಕಾಲವಿತ್ತು,  ಅಧಿಕಾರದ ಬಲ, ಹಣದ ಬಲ, ಹೆಂಡದ ಬಲದಿಂದ ಅಧಿಕಾರಕ್ಕೆ ಬರುವ ಕಾಲವಿತ್ತು. ಆದರೆ ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿ ಆಡಳಿತವನ್ನು ಮೆಚ್ಚಿಕೊಂಡಿದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಆಡಳಿತ ಅಭಿವೃದ್ಧಿಯನ್ನು ತಲುಪಿಸಿ. ಈ ಮೂಲಕ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬರಲು ನೀವೆಲ್ಲ ಕೈಜೋಡಿಸಬೇಕು ಎಂದು ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಇದು ಕೇವಲ ವಿಜಯ ಸಂಕಲ್ಪ ಯಾತ್ರೆ ಮಾತ್ರವಲ್ಲ, ವಿಜಯ ಯಾತ್ರೆಯಾಗಿದೆ. ಕಾಂಗ್ರೆಸ್ ಈಗಾಗಲೇ ಸೋಲೊಪ್ಪಿಕೊಂಡಿದ್ದಾರೆ. ಇದೀಗ ಕಾಂಗ್ರೆಸ್ ಗ್ಯಾರೆಂಟ್ ಕಾರ್ಡ್ ನೀಡುತ್ತಿದೆ. 70 ವರ್ಷ ಕಾಂಗ್ರೆಸ್ ಕಡುಬು ತಿಂತಾ ಇದ್ದೀರಾ. ಸುಳ್ಳು ಭರವಸೆಯನ್ನು ನೀಡಿ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ಯಡಿಯೂರಪ್ಪ ಹೇಳಿದರು.

70 ವರ್ಷದ ಅಧಿಕಾರದಲ್ಲಿರುವ ಕಾಂಗ್ರೆಸ್ ಏನೂ ಮಾಡದೇ ಇದೀಗ ಅನೇಕ ಭರವಸೆ ನೀಡಲು ಹೊರಟಿದೆ. ಆದರೆ ಪ್ರಧಾನಿ ಮೋದಿ ಆಡಳಿತದಲ್ಲಿ ಆತ್ಮನಿರ್ಭರ ಭಾರತ, ಸೌಭಾಗ್ಯ ಯೋಜನೆ, ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜೀವನ ಭೀಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರ್ಕಾರ 6,000 ರೂಪಾಯಿ ಕೊಟ್ಟರೆ, ರಾಜ್ಯ ಸರ್ಕಾರ 4,000 ರೂಪಾಯಿ ನೀಡಿ ಒಟ್ಟು 10,000 ರೂಪಾಯಿ ಕೊಡುತ್ತಿದ್ದೇವ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

ನನಗೆ 80 ವರ್ಷ ವಯಸ್ಸು. ಆದರೆ ನಾನು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲಲ್ಲ. ಮನೆ ಮನೆಗೆ ಹೋಗಿ ಬಿಜೆಪಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ. ಈ ಚುನಾವಣೆ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ನೀವೆಲ್ಲಾ ಆಶೀರ್ವಾದ ನೀಡಬೇಕು ಎಂದು ಯಡಿಯೂರಪ್ಪ ಸೇರಿದ್ದ ಜನರಿಗೆ ಮನವಿ ಮಾಡಿದ್ದಾರೆ. 

ದಾವಗಣೆರೆ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕಾರ್ಯಕ್ರಮ ಇದಾಗಿದೆ. ಕರ್ನಾಟಕದ ರಾಜ್ಯದಲ್ಲಿ ಸ್ವಂತ ಶಕ್ತಿ ಮೇಲೆ ಅಧಿಕಾರ ರಚಿಸುತ್ತೇವೆ ಎಂದು ನಾನು ಮೋದಿಗೆ ಭರವಸೆ ನೀಡಬಹುದೇ? ಎಂದು ಬಿಎಸ್ ಯಡಿಯೂರಪ್ಪ ಸೇರಿದ್ದ ಜನತೆಯನ್ನು ಪ್ರಶ್ನಿಸಿದರು. ಇದೇ ವೇಳೆ ಜನರು ಕೈಎತ್ತಿ ಯಡಿಯೂರಪ್ಪ ಅವರಿಗೆ ಸ್ಪಂದಿಸಿದರು.  

Follow Us:
Download App:
  • android
  • ios