ಗುಜರಾತ್ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗಿ (ಒಟ್ಟಾರೆ ಚುನಾಯಿತ ಸರ್ಕಾರಗಳ ಮುಖ್ಯಸ್ಥರಾಗಿ) ನರೇಂದ್ರ ಮೋದಿ ಭಾನುವಾರ 8,931 ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ದೇಶದಲ್ಲಿ ಚುನಾಯಿತ ಸರ್ಕಾರದ ಅತ್ಯಂತ ದೀರ್ಘಾವಧಿಯ ಮುಖ್ಯಸ್ಥರೆನ್ನುವ ದಾಖಲೆ ಬರೆದಿದ್ದಾರೆ.

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗಿ (ಒಟ್ಟಾರೆ ಚುನಾಯಿತ ಸರ್ಕಾರಗಳ ಮುಖ್ಯಸ್ಥರಾಗಿ) ನರೇಂದ್ರ ಮೋದಿ ಭಾನುವಾರ 8,931 ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ದೇಶದಲ್ಲಿ ಚುನಾಯಿತ ಸರ್ಕಾರದ ಅತ್ಯಂತ ದೀರ್ಘಾವಧಿಯ ಮುಖ್ಯಸ್ಥರೆನ್ನುವ ದಾಖಲೆ ಬರೆದಿದ್ದಾರೆ.

Add Asianetnews Kannada as a Preferred SourcegooglePreferred

ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್‌ ಕುಮಾರ್‌ ಚಾಮ್ಲಿಂಗ್‌ 8,930 ದಿನ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರದಲ್ಲಿದ್ದರು. ಇದೀಗ ಮೋದಿಯವರು ಚಾಮ್ಲಿಂಗ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ಮೋದಿ 2001ರ ಅ.7ರಂದು ಗುಜರಾತ್‌ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹುದ್ದೆಯಲ್ಲಿ ಅವರು 2014ರ ಮೇ 26ರವರೆಗೆ ಮುಂದುವರಿದಿದಿದ್ದರು ಹಾಗೂ ನಂತರ ದೇಶದ ಪ್ರಧಾನಿ ಆದರು. ಅವರು ಸಿಎಂ ಆದಾಗಿನಿಂದ ಇಂದಿನವರೆಗೂ ಒಂದೂ ದಿನ ಅಧಿಕಾರದಿಂದ ದೂರ ಉಳಿದಿಲ್ಲ.

ಮೋದಿಯವರ ಈ ಸಾಧನೆಗೆ ಗೃಹಸಚಿವ ಅಮಿತ್‌ ಶಾ ಸೇರಿ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಇತರ ಹಲವು ದಾಖಲೆ:

ತಮ್ಮ ವೃತ್ತಿಜೀವನದಲ್ಲಿ, ಪ್ರಧಾನಿ ಮೋದಿ ಹಲವಾರು ಗಮನಾರ್ಹ ದಾಖಲೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಗುಜರಾತ್‌ನ ಅತಿ ದೀರ್ಘಕಾಲ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ ದೀರ್ಘಾವಧಿ ಅನುಭವ ಹೊಂದಿರುವ ಪ್ರಧಾನಿ ಎಂಬ ಹೆಗ್ಗಳಿಕೆಗಳೂ ಸೇರಿವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ, ಸತತ 3 ಲೋಕಸಭಾ ಚುನಾವಣೆಗಳಲ್ಲಿ ಗೆದ್ದ ಪ್ರಧಾನಿ, ಲೋಕಸಭೆಯಲ್ಲಿ ಪೂರ್ಣ ಬಹುಮತ ಪಡೆದ ಮೊದಲ ಕಾಂಗ್ರೆಸ್ಸೇತರ ನಾಯಕ, 2 ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಮತ್ತು ಸತತ 3ನೇ ಅವಧಿಗೆ ಮರಳಿ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ದಾಖಲೆಗಳೂ ಸೇರಿವೆ.

ಇನ್ನು ಈ ವರ್ಷದ ಆರಂಭದಲ್ಲಿಯೇ ಮೋದಿ ಡಿಜಿಟಲ್‌ ವೇದಿಕೆಗಳಲ್ಲಿ ಹಲವಾರು ಮೈಲುಗಲ್ಲುಗಳನ್ನು ತಲುಪಿದ್ದರು. ಯೂಟ್ಯೂಬ್ ಚಾನೆಲ್‌ನಲ್ಲಿ 3 ಕೋಟಿ ಚಂದಾದಾರರು ಮತ್ತು ಇನ್‌ಸ್ಟಾಗ್ರಾಂನಲ್ಲಿ 1 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಜಾಗತಿಕವಾಗಿ ಅತ್ಯಂತ ಪ್ರಭಾವಿ ನಾಯಕ ಎನಿಸಿದ್ದರು.

- 14 ವರ್ಷ ಸಿಎಂ, 11 ವರ್ಷ ಪ್ರಧಾನಿ ಹುದ್ದೆ

- 2001ರಿಂದ 2014ರವರೆಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಸೇವೆ

- ಬಳಿಕ ಸತತ 11 ವರ್ಷಗಳಿಂದ ಪ್ರಧಾನಿಯಾಗಿ ಮೋದಿ ಅಧಿಕಾರ

- 1994-2019ರವರೆಗೆ ಸಿಕ್ಕಿಂ ಸಿಎಂ ಆಗಿದ್ದ ಚಾಮ್ಲಿಂಗ್‌ ದಾಖಲೆ ಭಗ್ನ

- 3 ಲೋಕಸಭಾ ಚುನಾವಣೆಗಳನ್ನು ಗೆದ್ದ ಮೊದಲ ಪ್ರಧಾನಿ ದಾಖಲೆ

- ಸತತ 3ನೇ ಅವಧಿಗೆ ಮರಳಿ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ದಾಖಲೆಯೂ ಮೋದಿಗಿದೆ