Asianet Suvarna News Asianet Suvarna News

ಮೇ.3ರಂದು ಮುಲ್ಕಿಗೆ ಪ್ರಧಾನಿ ಮೋದಿ, ಮೇ.6ರಂದು ದಕ್ಷಿಣ ಕನ್ನಡಕ್ಕೆ ಯೋಗಿ: ಬಿಜೆಪಿ ಮೆಗಾ ರ್‍ಯಾಲಿ

ಕರಾವಳಿ ಜಿಲ್ಲೆಗೆ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಂದು ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

PM Modi and Yogi Adityanath to visit dakshina Kannada for BJP Election Rally gow
Author
First Published Apr 24, 2023, 7:31 PM IST | Last Updated Apr 24, 2023, 7:31 PM IST

ಮಂಗಳೂರು (ಏ.24): ಕರ್ನಾಟಕ ವಿಧಾನ ಸಭಾ ಚುನಾವಣಾ ಕಣ ರಂಗೇರಿದೆ. ಬಿರುಸಿನಿಂದ ಚುನಾವಣಾ ತಯಾರಿಗಳು ನಡೆಯುತ್ತಿದೆ. ಈ ನಡುವೆ ಬಿಜೆಪಿ ಸ್ಟಾರ್  ಪ್ರಚಾರಕರಲ್ಲಿ ಕರಾವಳಿ ಜಿಲ್ಲೆಗೆ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮೇ.3ರಂದು ಮುಲ್ಕಿಗೆ ಪ್ರಧಾನಿ ನರೇಂದ್ರ ಮೋದಿ ಬರ್ತಾರೆ. ಬಹುತೇಕ ಅವರ ಆಗಮನ ಖಚಿತವಾಗಿದೆ, ಅಂತಿಮ ಮಾಹಿತಿ ಬರಬೇಕು. ಮೇ.6ರಂದು ದ.ಕ ಜಿಲ್ಲೆಗೆ ಯೋಗಿ ಆದಿತ್ಯನಾಥ್ ಬರ್ತಾರೆ. ಆದರೆ ಯೋಗಿಯವರ ಕಾರ್ಯಕ್ರಮದ ಜಾಗ ನಿಗದಿಯಾಗಿಲ್ಲ. ಉಡುಪಿ ಮತ್ತು‌ ದ.ಕ ಜಿಲ್ಲೆ ಕೇಂದ್ರೀಕರಿಸಿ ಸಮಾವೇಶಗಳು ನಡೆಯಲಿದೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.
 
ಪುತ್ತೂರು ಸೇರಿದಂತೆ ಎಲ್ಲವನ್ನೂ ಬಿಜೆಪಿಯೇ ಗೆಲ್ಲಲಿದೆ: ಕೋಟಾ

ಕರಾವಳಿಯ 19 ಸೀಟ್ ಕೂಡ ಬಿಜೆಪಿ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿರುವ ಕೋಟಾ, ಹಿಂದುತ್ವ ನಮ್ಮ ಅಜೆಂಡಾಗಳಲ್ಲಿ ಒಂದು, ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಈ ಬಾರಿ ದ.ಕ ಜಿಲ್ಲೆಯಲ್ಲಿ ಎಂಟೂ ಕ್ಷೇತ್ರ ನಾವೇ ಗೆಲ್ತೇವೆ. ಡಿಕೆಶಿ ಹೇಳುವ ಕರಾವಳಿಯ ಗೆಲ್ಲುವ ಹತ್ತು ಕ್ಷೇತ್ರ ಯಾವುದು ಎಂಬುದು ನಮಗೆ ಗೊತ್ತಿಲ್ಲ. ಪಕ್ಷದ ವಿರುದ್ದ ಬಂಡಾಯ ಹೋದವರು ನಮ್ಮ ಜೊತೆ ಬರ್ತಾರೆ ಅನ್ನೋ ವಿಶ್ವಾಸ ಇದೆ ಎಂದಿದ್ದಾರೆ.

ಪುತ್ತೂರು ಬಿಜೆಪಿಗೆ ಪುತ್ತಿಲ ಕಂಟಕ, ಹಿಂದೂ ಮುಖಂಡ-ಬಿಜೆಪಿ ಜಗಳದಲ್ಲಿ ಗೆಲ್ಲುತ್ತಾ ಕಾಂಗ್ರೆಸ್?

ಅರುಣ್ ಪುತ್ತಿಲ ಬಗ್ಗೆ ಚರ್ಚೆ ಇಲ್ಲ:
ಪುತ್ತೂರು ಸೇರಿದಂತೆ ಎಲ್ಲವನ್ನೂ ಬಿಜೆಪಿಯೇ ಗೆಲ್ಲಲಿದೆ. ಬಿಜೆಪಿ ಗೆಲ್ಲುತ್ತೆ ಅಂದಾಗ ಉಳಿದವರು ಸೋಲ್ತಾರೆ ಅಂತಾನೇ ಅರ್ಥ. ಅದರಲ್ಲಿ ಪುತ್ತೂರು ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಪುತ್ತಿಲ ಅಥವಾ ಬೇರೆಯವರ ಚರ್ಚೆ ಇಲ್ಲ. ಬಂಡಾಯ ಹೋದವರು ನಮ್ಮ ಜೊತೆ ಬರುವ ವಿಶ್ವಾಸ ಇದೆ. ರಾಜಕಾರಣದಲ್ಲಿ ಯಾರು ಯಾರ ಮೇಲೂ ಏನು ಬೇಕಾದರೂ ಮಾಡಬಹುದು. ಹಾಗಾಗಿ ಕೆಲವು ನಾಯಕರು ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಅದು ಅವರವರ ಖಾಸಗಿ ಬದುಕು, ಹೀಗಾಗಿ ನಾವು ಏನೂ ಮಾಡಲು ಆಗಲ್ಲ. ದ.ಕ ಜಿಲ್ಲೆಗೆ ಹಲವು ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರ್ತಾರೆ ಎಂದಿದ್ದಾರೆ.

ಚಿಕ್ಕಪೇಟೆಯಲ್ಲಿ ಸಾವಿರ ಕೋಟಿ ಒಡೆಯನಿಂದ ಕಾಂಗ್ರೆಸ್ ಸೆಡ್ಡು ನಿಂತು ಬಂಡಾಯ, 

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios