ಚಿಕ್ಕಪೇಟೆಯಲ್ಲಿ ಸಾವಿರ ಕೋಟಿ ಒಡೆಯನಿಂದ ಕಾಂಗ್ರೆಸ್ ಸೆಡ್ಡು ನಿಂತು ಬಂಡಾಯ, ಮಾಜಿ ಮೇಯರ್ ಕಣದಿಂದ ಹಿಂದಕ್ಕೆ
ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಣದಿಂದ ಕೆಜಿಎಫ್ ಬಾಬು ಶಾಜೀಯಾ ತರನುಂ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಕಣದಲ್ಲಿದ್ದಾರೆ.
ಬೆಂಗಳೂರು (ಏ.24): ಇಂದು ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದ್ದು, ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಣದಿಂದ ಕೆಜಿಎಫ್ ಬಾಬು ಶಾಜೀಯಾ ತರನುಂ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದಕ್ಕೆ ಅಸಮಾಧಾನಗೊಂಡಿದ್ದ ಕೆಜಿಎಫ್ ಬಾಬು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮಾತ್ರವಲ್ಲ ತಾನು ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯಲ್ಲ ಎಂದು ಕೆಜಿಎಫ್ ಬಾಬು ಹೇಳಿಕೆ ನೀಡಿದ್ದಾರೆ. ಹೀಗಾಗಿ ತನ್ನ ಪತ್ನಿ ನಾಮಪತ್ರವನ್ನು ಮಾತ್ರ ವಾಪಸ್ ಪಡೆದಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲ , ವೇಣುಗೋಪಾಲ್ ನನಗೆ ಪೋನ್ ಮಾಡಿ ರಾಜ್ಯಸಭಾ ಸದಸ್ಯನನ್ನಾಗಿ ಮಾಡ್ತೇವೆ ಎಂದು ಹೇಳಿದರು. ನಾನು ಅದಕ್ಕೆ ಒಪ್ಪಲಿಲ್ಲ, ನಾನು ಪಕ್ಷೇತರನಾಗಿ ನಿಲ್ಲುತ್ತೇನೆ. 50 ಸಾವಿರ ಲೀಡ್ ನಲ್ಲಿ ಈ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸ್ತಾರೆ ಎಂದು ಬಾಬು ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮತ್ತೋರ್ವ ಅಭ್ಯರ್ಥಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಕೊನೆಗೂ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರ ಮಾತಿಗೆ ಕಟ್ಟು ಬಿದ್ದು ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಚುನಾವಣಾ ಕಚೇರಿಗೆ ಏಜೆಂಟ್ ನ್ನು ಕಳಿಸಿ ಗಂಗಾಂಬಿಕೆ ನಾಮಪತ್ರ ವಾಪಸ್ಸು ಪಡೆದರು.
ಇದಕ್ಕೂ ಮುನ್ನ ಗಂಗಾಂಭಿಕೆ ಮನವೊಲಿಸಲು ಕಾಂಗ್ರೆಸ್ ನಾಯಕರು ಹರಸಾಹಸ ಪಟ್ಟರು. ಟಿಕೆಟ್ ಘೋಷಣೆಗೂ ಮುನ್ನವೇ ಗಂಗಾಂಬಿಕೆ ನಾಮಪತ್ರ ಸಲ್ಲಿಸಿದ್ದರು. ಆದ್ರೆ ಕಾಂಗ್ರೆಸ್ ಪಕ್ಷ ಆರ್.ವಿ.ದೇವರಾಜ್ ಗೆ ಟಿಕೆಟ್ ನೀಡಿತ್ತು. ಹೀಗಾಗಿ ಪಕ್ಷೇತರವಾಗಿ ನಿಲ್ಲಲು ನಿರ್ಧರಿಸಿದ್ದರು. ಬೆಂಗಳೂರು ದಕ್ಷಿಣ ಎಲೆಕ್ಷನ್ ಉಸ್ತುವಾರಿ ಅಭಿಷೇಕ್ ದತ್ತ ಗಂಗಾಂಭಿಕೆ ಮನವೊಲಿಸಲು ಯತ್ನಿಸಿದರು. ಗಂಗಾಂಭಿಕೆ ನಾಮಪತ್ರ ವಾಪಸ್ಸು ಪಡೆಯದಿದ್ದರೆ. ಕಾಂಗ್ರೆಸ್ ಮತ ಹಂಚಿಕೆಯಾಗೋದು ನಿಶ್ಚಿತ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಲಾಭವಾಗುತ್ತೆ. ಈ ಬಾರಿಯೂ ಚಿಕ್ಕಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ. ಆದ್ರಿಂದ ನೀವು ನಾಮಪತ್ರ ವಾಪಸ್ಸು ಪಡೆದು. ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇವರಾಜ್ ಗೆ ಬೆಂಬಲ ನೀಡುವಂತೆ ನಾಯಕರು ಮನ ಒಲಿಸಿದರು.
ಇನ್ನು ಜೆಡಿಎಸ್ ಕಚೇರಿಯಲ್ಲಿ ಚಿಕ್ಕಪೇಟೆಯಲ್ಲಿನ ಸ್ಥಳೀಯ ನಾಯಕರ ಅಸಮಾಧಾನ ಹಿನ್ನೆಲೆ ಸಭೆ ನಡೆಸಲಾಯ್ತು. ಅಸಮಾಧಾನ ಸರಿಪಡಿಸಲು ಸಂಧಾನ ಸಭೆ ನಡೆಸಲಾಯ್ತು. ಚಿಕ್ಕಪೇಟೆಯಲ್ಲಿ ಟಿಕೆಟ್ ನಿರೀಕ್ಷೆಯಲ್ಲಿ ಜೆಡಿಎಸ್‌ನ ಹಲವು ವ್ಯಕ್ತಿಗಳಿದ್ದರು. ಪೈಪೋಟಿ ನಡುವೆ ಇಮ್ರಾನ್ ಪಾಷಗೆ ಟಿಕೆಟ್ ನೀಡಲಾಗಿತ್ತು. ಹೀಗಾಗಿ ಹೀಗಾಗಿ ಅಸಮಾಧಾನಿತರ ಮನವೊಲಿಕೆಗೆ ಬೆಂ.ನಗರ ಅಧ್ಯಕ್ಷ ರಮೇಶ್ ಗೌಡ, ,ಪರಿಷತ್ ಸದಸ್ಯ ಟಿ ಎ ಶರವಣ ನೇತ್ರತ್ವದಲ್ಲಿ ಸಭೆ ನಡೆಸಲಾಯ್ತು.
ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಇರಬೇಕು, 50% ಮೀಸಲಾತಿ ತೆಗೆದು ಹಾಕಿ: ಬಿಜೆ
ಚಿಕ್ಕಪೇಟೆ ಅಭ್ಯರ್ಥಿಯನ್ನ ಅಳೆದು ತೂಗಿ ಇಮ್ರಾನ್ ಪಾಷಾ ಆಯ್ಕೆಯನ್ನು ಕುಮಾರಸ್ವಾಮಿ ಮಾಡಿದ್ದರು. ಬಸವನಗುಡಿ ಮತ್ತು ಚಿಕ್ಕಪೇಟೆ ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಅನೇಕ ಜನರು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಬಿಜೆಪಿ-ಕಾಂಗ್ರೆಸ್ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಜೆಡಿಎಸ್ ಅರಳಿಸಲು ಜನ ತೀರ್ಮಾನ ಮಾಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗ್ತಾರೆ. ಬೀದಿಗಿಳಿದು ನಾವು ಚುನಾವಣೆ ಮಾಡ್ತೀವಿ. ಮನೆ ಮನೆಗೆ ತೆರಳಿ ಪಕ್ಷದ ಕಾರ್ಯಕ್ರಮ ತಿಳಿಸುತ್ತೇವೆ. ಕುಮಾರಸ್ವಾಮಿ ಅನಾರೋಗ್ಯದಲ್ಲಿ ಇದ್ದರು ಅಲ್ಲೆ ಪಕ್ಷದ ಕೆಲಸ ಗಮನಿಸುತ್ತಿದ್ದಾರೆ. ಕುಮಾರಸ್ವಾಮಿ ಅದಷ್ಟು ಬೇಗ ಡಿಸ್ ಚಾರ್ಜ್ ಆಗಿ ಪ್ರಚಾರ ಮಾಡ್ತಾರೆ. ಬೆಂಗಳೂರಿನಲ್ಲಿ 7-8 ಕ್ಷೇತ್ರ ಗೆಲ್ಲುವ ಗುರಿ ಇದೆ. ಈ ಹಿಂದೆ 26 ಸಾವಿರ ಮತ ಅಭ್ಯರ್ಥಿ ಪಡೆದಿದ್ದಾರೆ. ಇಮ್ರಾನ್ ಪಾಷಾ ಪಕ್ಕದ ಕ್ಷೇತ್ರದವರು. ಇವರಿಗೆ ಕ್ಷೇತ್ರದ ಒಡನಾಟ ಇದೆ. ಈ ಬಾರಿ ಜೆಡಿಎಸ್ ಗೆಲ್ಲುತ್ತೆ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಾಂಗ್ರೆಸ್ ಬೇಡ, ಬಿಜೆಪಿ ಬೇಡ ಅಂತ ಜನ ತೀರ್ಮಾನ ಮಾಡಿದ್ದಾರೆ. ಈ ಬಾರಿ ಜೆಡಿಎಸ್ ಅನ್ನ ಜನ ಆಶೀರ್ವಾದ ಮಾಡ್ತಾರೆ ಎಂದು MLC ಶರವಣ ಹೇಳಿಕೆ ನೀಡಿದ್ದಾರೆ.
ಯಾರು ಏನೇ ತಂತ್ರಗಾರಿಕೆ ಮಾಡಿದರೂ ಗೆಲುವು ನನ್ನದೇ: ಜಗದೀಶ್ ಶೆಟ್ಟರ್
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.