ರಾಜಸ್ಥಾನ ರಾಜಕೀಯ ಡ್ರಾಮಾ ಕ್ಲೈಮಾಕ್ಸ್‌ಗೆ ದಿನಾಂಕ ಫಿಕ್ಸ್! ಪೈಲಟ್ ಕಿರುನಗೆ

ರಾಜಸ್ಥಾನ ಪೊಲಿಟಿಕಲ್ ಹೈ ಡ್ರಾಮಾ/  ವಿಚಾರಣೆ ಮುಂದಕ್ಕೆ ಹಾಕಿದ ನ್ಯಾಯಾಲಯ/ 21 ರ ವರೆಗೆ ಸ್ಪೀಕರ್ ಯಾವುದೆ ಕ್ರಮ ತೆಗೆದುಕೊಳ್ಳುವಂತೆ ಇಲ್ಲ

Pilot Rebel Congress MLAs Disqualification Case HC Defers Hearing Till July 20

ಜೈಪುರ(ಜು. 17) ರಾಜಸ್ಥಾನದ ರಾಜಕಾರಣದ ಒಂದು ಹಂತದ ಕ್ಲೈಮಾಕ್ಸ್ ಗೆ ದಿನಾಂಕ ನಿಗದಿಯಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಇತರೆ 18 ಬಂಡಾಯ ಶಾಸಕರಿಗೆ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿ  ಪೈಲಟ್ ತಂಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟ್ ಜು. 20ಕ್ಕೆ ಮುಂದೂಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇಂದ್ರಜೀತ್ ಮಹಂತಿ ಹಾಗೂ ನ್ಯಾಯಮೂರ್ತಿ ಪ್ರಕಾಶ್ ಗುಪ್ತಾವಿಭಾಗೀಯ ಪೀಠ, ಮಂಗಳವಾರದವರೆಗೆ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸ್ಪೀಕರ್ ಸಿಪಿ ಜೋಶಿಗೆ ಸೂಚಿಸಿದೆ.

ಕರ್ನಾಟಕಕ್ಕೂ ರಾಜಸ್ಥಾನಕ್ಕೂ ರಾಜಕೀಯ ಡ್ರಾಮಾದಲ್ಲಿ ಏನೆಲ್ಲ ಸಾಮ್ಯತೆ

ಸಚಿನ್ ಪೈಲಟ್ ಹಾಗೂ ಇತರ 18 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಸಿ. ಪಿ. ಜೋಷಿ ಅವರು ನೋಟಿಸ್ ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ನಿಮ್ಮ ಮೇಲೆ ಯಾಕೆ ಕ್ರಮ ಜರುಗಿಸಬಾರದು ಎಂದು ಪ್ರಶ್ನೆ ಮಾಡಿದ್ದರು.

ಜುಲೈ 21ರ ವರೆಗೆ ಬಂಡಾಯ ಶಾಸಕರ ವಿರುದ್ಧ ಸ್ಪೀಕರ್ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಕೋರ್ಟ್ ಗೆ ತಿಳಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ  ಮಾಹಿತಿ ನೀಡಿದ್ದಾರೆ.

ಪೈಲಟ್ ಬಣದ ಪರ ವಾದ ಮಂಡಿಸಿದ ವಕೀಲ ಹರೀಶ್ ಸಾಳ್ವೆ, ವಿಧಾನಸಭೆ ಅಧಿವೇಶನ ನಡೆದ ಸಂದರ್ಭದಲ್ಲಿ ಮಾತ್ರ ವಿಪ್‌ ಅನ್ವಯವಾಗುತ್ತದೆ. ಹೀಗಾಗಿ ಸ್ಪೀಕರ್ ನೀಡಿರುವ ಈ ನೋಟಿಸ್‌ಗೆ ಈಗ ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂಬ ವಾದ ಮುಂದಿಟ್ಟರು. ಸಚಿನ್‌ ಪೈಲಟ್‌ ಪರ ಹರೀಶ್‌ ಸಾಳ್ವೆ ಮತ್ತು ಮುಕುಲ್‌ ರೋಹಟಗಿ ವಾದ ಮಂಡಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios