ಬೆಂಗಳೂರು (ಜು. 17): ಕರ್ನಾಟಕದಲ್ಲಿ ಕಾಂಗ್ರೆಸ್‌ ವಿರುದ್ಧ ರಮೇಶ್‌ ಜಾರಕಿಹೊಳಿ 2018ರ ಜನವರಿಯಲ್ಲಿ ಬಂಡಾಯ ಹೂಡಿದಾಗ ಬಿಜೆಪಿ ಶಾಸಕರು ಶಿಫ್ಟ್‌ ಆಗಿದ್ದು ದಿಲ್ಲಿಯಿಂದ 50 ಕಿಲೋಮೀಟರ್‌ ದೂರ ಇರುವ ಗುರುಗ್ರಾಮದ ಮಾನೇಸರ್‌ನ ಐಟಿಸಿ ಗ್ರಾಂಡ್‌ ಭಾರತ 7 ಸ್ಟಾರ್‌ ಹೋಟೆಲ್‌ಗೆ.

ಸಚಿನ್ ಪೈಲಟ್ VS ಅಶೋಕ್ ಗೆಹ್ಲೋಟ್; ಜ್ಯೋತಿರಾದಿತ್ಯ ಸಿಂಧಿಯಾ ಪಾತ್ರವೇನು?

ಈಗ ಸಚಿನ್‌ ಪೈಲಟ್‌ ಪರ ಇರುವ 18 ಶಾಸಕರು ಇರುವುದೂ ಇದೇ ಹೋಟೆಲ್‌ನಲ್ಲಿ. ಹರಾರ‍ಯಣದ ಖಟ್ಟರ್‌ ಸರ್ಕಾರ ಐಟಿಸಿ ಗ್ರಾಂಡ್‌ ಭಾರತ ಹೋಟೆಲ್‌ಗೆ ಆಗಲೂ ಭದ್ರತೆ ಒದಗಿಸಿತ್ತು, ಈಗಲೂ ಒದಗಿಸಿದೆ. ಅಂದಹಾಗೆ, ಇನ್ನೊಂದು ಸಾಮ್ಯತೆಯೂ ಇದೆ; ಕರ್ನಾಟಕದಲ್ಲಿ ಕಾಂಗ್ರೆಸ್‌ ವಿರುದ್ಧ ಬಂಡೆದ್ದ ಶಾಸಕರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದು ದಿವಂಗತ ಅರುಣ್‌ ಜೇಟ್ಲಿ ಆಪ್ತಮಿತ್ರ ಮುಕುಲ್‌ ರೋಹಟಗಿ, ಈಗ ಸಚಿನ್‌ ಪೈಲಟ್‌ ಜೊತೆಗಿರುವ ಶಾಸಕರ ಪರವಾಗಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ವಾದ ಹೂಡುತ್ತಿರುವವರೂ ಮುಕುಲ್‌ ರೋಹಟಗಿ ಅವರೇ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ