ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಮೊಬೈಲ್ ಪತ್ತೆಯಾದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಸಿಟಿವಿ ಸಾಕ್ಷ್ಯಗಳಿದ್ದು, ಕುಮಾರಸ್ವಾಮಿ ಆಪ್ತರು ವಿಚಾರಣೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು: ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ದೆಹಲಿ ಮನೆಯಲ್ಲಿ ಮೊಬೈಲ್ ಪತ್ತೆ ವಿಚಾರಕ್ಕೆ ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ.. ಯಾರೇ ಇದ್ದರೂ ಸಹ ಅವರ ಕುರ್ಚಿ ಹಾಗೂ ಅವರ ಘನತೆ ಕಾಪಾಡಿಕೊಳ್ಳಬೇಕು. ಅದು ಬಿಟ್ಟು ವೈಯಕ್ತಿಕ ಟೀಕೆ ಮಾಡುವುದರಲ್ಲಿ ತೊಡಗಿದ್ದರು. ತಾಂತ್ರಿಕವಾಗಿ ತನಿಖೆ ನಡೆಸಿದ್ದಾಗ ಕೆಲ ಅಂಶ ಬೆಳಕಿಗೆ ಬಂದಿವೆ. ಕುಮಾರಸ್ವಾಮಿ ಅವರು ಕಮಿಷನರ್‌ ಕಚೇರಿಗೆ ಮುತ್ತಿಗೆ ಹಾಕಲು ಡಿಜಿ ಕಚೇರಿಗೆ ಭೇಟಿ ಯಾಕೆ ಮಾಡಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.

ಖರ್ಗೆ ಗರಂ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಎಕ್ಸ್‌ಚೇಂಜ್ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ನಡೆದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಬೆನ್ನಲ್ಲೇ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ತನಿಖೆಯಲ್ಲಿ ಅವರ ಜನರ ಹೆಸರು ಬಂತು. ಆಗ ಅವರಿಗೆ ನೋಟಿಸ್ ಬಂತು. ಆಗ ಅವರು ನೋಟಿಸ್‌ಗೆ ಉತ್ತರ‌ ಕೊಡದೇ ನೀರಿಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಹೀಗಾಗಿ ಇದರ ಮೂಲ ಯಾವುದು ಎಂದು ನೋಡಿದ್ದೆವೆ. ಸ್ಟಿಂಗ್ ಮಾಡಿದ್ದು ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ ? ಎಂಬುದು ಎಲ್ಲರಿಗೂ ಗೊತ್ತು. ಇದರ ಪ್ರಚಾರ ಮಾಡಿದ್ದು ಯಾರು ಎಂದು ಗೊತ್ತಾಗಬೇಕು. ಹೀಗಾಗಿ ಆ ಹಂತದಲ್ಲಿ ತನಿಖೆ ಮಾಡುತ್ತಿದ್ದೇವೆ. ಈ ವೇಳೆ ಕುಮಾರಸ್ವಾಮಿ ಆಪ್ತರು ವಿಚಾರಣೆಗೆ ಬರದೇ ನಾಪತ್ತೆಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯಗೆ ನ್ಯಾಯ ಸಿಗಬೇಕು ಎಂದು 20 ಸಲ ಇವರೇ ತಾನೆ ಧ್ವನಿ ಎತ್ತಿದ್ದು. ಈಗ ತನಿಖೆಗೆ ಕರೆದಾಗ ಯಾಕೆ ಅವರು ಬರ್ತಿಲ್ಲ? ನಾವು ತನಿಖೆ ನಡೆಸಿದಾಗ ಈ ವ್ಯಕ್ತಿ ನಮ್ಮಗೆ ಸಿಕ್ಕ, ಅದಾದ ಬಳಿಕ ಮೊಬೈಲ್ ಖರೀದಿ ಏಲ್ಲಿ ಆಯ್ತು? ಆ ಮೊಬೈಲ್ ಏಲ್ಲಿ ಎಕ್ಸ್ ಚೇಂಜ್ ಆಯ್ತು? ಎಲ್ಲದಕ್ಕೂ ಸಹ ಸಿಸಿಟಿವಿ ಸಾಕ್ಷ್ಯಗಳಿವೆ. ಇವರೆಲ್ಲರೂ ಕುಮಾರಸ್ವಾಮಿ ಜೊತೆ ಕೆಲಸ ಮಾಡಿಕೊಂಡು ಅವರ ಜೊತೆ ಇರುವವರು. ಕುಮಾರಸ್ವಾಮಿ ಅವರು ಏನು ಮಾಡಿಲ್ಲ ಅಂದರೆ ಈ ಮೂರು ಜನರ ಹೆಸರು ಯಾಕೆ ಬಂತು?

ಕೇಂದ್ರ ಸಚಿವ ಕುಮಾರಸ್ವಾಮಿ ಡರ್ಟಿ ರಾಜಕೀಯ ಮಾಡುತ್ತಿದ್ದಾರೆ. ನಾಚಿಕೆ ಬರಬೇಕು ಅವರಿಗೆ.. ಅವರಿಗೆ ಏನು ಸಾಕ್ಷಿ ಬೇಕು ಎಲ್ಲಾ ಕೊಡುತ್ತೇವೆ. ಇದು ಬರೀ ಟ್ರೈಲರ್, ಅಭಿ ಪಿಕ್ಚರ್ ಬಾಕಿ ಹೈ. ಡಿಕೆಶಿ ಅವರು ಸ್ಟಿಂಗ್ ಮಾಡಿಸಿದ್ರು ಅಂದ್ರು. ನಂತರ ನಾನೇ ಮಾಡಿಸಿದೆ ಎಂದು ಹೇಳಿದ್ರು. ಈಗ ಏನು ಹೇಳುತ್ತಾರೆ? ಸಾಕ್ಷ್ಯ ಇದ್ರೆ ಕಾನೂನಿನ ಅಡಿ ಯಾರಾದ್ರೂ ಸಹ ಕರೆಸುತ್ತೇವೆ. ಅದು‌ ಕುಮಾರಸ್ವಾಮಿ ಇರಬಹುದು, ಅವರ‌ ಜೊತೆ ಇರುವವರೇ ಇರಬಹುದು. ನಿಮ್ಮವರು ಯಾಕೆ ಇದರಲ್ಲಿ ಭಾಗಿಯಾದ್ರು ಎಂದು ಕುಮಾರಸ್ವಾಮಿಗೆ ಕೇಳಬೇಕು ಎಂದು ಕಿಡಿಕಾರಿದರು.

ಇಷ್ಟೆಲ್ಲ ನಮ್ಮಗೆ ಗೊತ್ತಿದ್ದರೂ ಸಹ ನಾವು ತನಿಖೆಯ ಗೌಪ್ಯತೆ ಕಾಪಾಡಿದ್ದೇವೆ. ಪಿಚ್ಚರ್ ಇನ್ನೂ ಬಹಳ ಇದೆ, ಸದ್ಯ ಇಂಟರವಲ್ ಆಗಿದೆ ಅಷ್ಟೇ. ಇಂದು..ಇಲ್ಲಾ..ನಾಳೆ ಎಲ್ಲವೂ ಸಹ ಬಹಿರಂಗವಾಗುತ್ತದೆ. ವೀಡಿಯೋ ಎಲ್ಲಿ ಅಪಲೋಡ್ ಆಗಿದೆ? ಎಲ್ಲದಕ್ಕೂ ಸಾಕ್ಷ್ಯ ಇದೆ. ಈ ವೀಡಿಯೋ ಬಗ್ಗೆ ಬಹಳ‌ ಕಾಳಜಿ ವಹಿಸಿದವರ ಕಡೆಯಿಂದಲೇ ವೀಡಿಯೋ ಅಪಲೋಡ್ ಆಗಿದೆ. ಅಗತ್ಯ ಬಿದ್ದರೆ ಎಲ್ಲರನ್ನೂ ನಾನು ಕರೆಸುತ್ತೇನೆ. ನಾನು ಹಿಟ್ ಆ್ಯಂಡ್ ರನ್ ಮಾಡುವ ವ್ಯಕ್ತಿ ಅಲ್ಲ ಎಂದು ಗುಡುಗಿದ್ದಾರೆ.