ಕೆರೆಗಳಲ್ಲಿ ತುಂಬಿರುವ ನೀರು ನೋಡಿದರೆ ಡಾ.ಸುಧಾಕರ್‌ ಕಾಣಿಸುತ್ತಾರೆ. ರೈತರು ಬೆಳೆಯುವ ಹೂವಿನಲ್ಲಿ ಸುಧಾಕರ್‌ ಕಾಣಿಸಲಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಸುಧಾಕರ್‌ ಕಾಣಿಸುತ್ತಾರೆ. ಹೀಗೆಂದು ತಾವು ಹೇಳುತ್ತಿಲ್ಲ. ತಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. 

ಚಿಕ್ಕಬಳ್ಳಾಪುರ (ಏ.30): ಕೆರೆಗಳಲ್ಲಿ ತುಂಬಿರುವ ನೀರು ನೋಡಿದರೆ ಡಾ.ಸುಧಾಕರ್‌ ಕಾಣಿಸುತ್ತಾರೆ. ರೈತರು ಬೆಳೆಯುವ ಹೂವಿನಲ್ಲಿ ಸುಧಾಕರ್‌ ಕಾಣಿಸಲಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಸುಧಾಕರ್‌ ಕಾಣಿಸುತ್ತಾರೆ. ಹೀಗೆಂದು ತಾವು ಹೇಳುತ್ತಿಲ್ಲ. ತಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ತಾಲೂಕಿನ ಪಟ್ರೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ಪ್ರಚಾರ ನಡೆಸಿದ ಅವರು, ತಾವು ಕ್ಷೇತ್ರದ ಪ್ರತಿಯೊಂದು ಕುಟುಂಬದ ಮನೆಯ ಸದಸ್ಯ ಎಂದು ತೀರ್ಮಾನಿಸಿ, ಕ್ಷೇತ್ರದ ಮತದಾರರು ಮತ ನೀಡಲು ತೀರ್ಮಾನಿಸಿದ್ದು, ಕಳೆದ ಮೂರು ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಈ ಬಾರಿ ಗೆಲುವು ಸಾಧಿಸಲಿರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಡಾ.ಸುಧಾಕರ್‌ಗೆ ಯುವಪೀಳಿಗೆ ಬೆಂಬಲ: ಕಾಂಗ್ರೆಸ್‌ ಜಾತಿ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದೆ, ಆದರೆ ಕ್ಷೇತ್ರದ ಜನರು ಜಾತಿಗೆ ಮನ್ನಣೆ ನೀಡುವುದಿಲ್ಲ. ಜಾತಿಗೆ ಹೊರತಾಗಿ ಜನ ತಮಗೆ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ, ಯುವಕರಿಗೆ ಉದ್ಯೋಗ ನೀಡುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ಹಾಗಾಗಿ ಯುವಪೀಳಿಗೆ ತಮ್ಮ ಪರವಾಗಿದೆ. ಮಾತುಗಳಿಂದ ಆರೋಗ್ಯ ಸಿಕ್ಕಿದೆಯಾ, ಮಾತುಗಳಿಂದ ಕೆರೆಗಳು ತುಂಬಿವೆಯೇ, ಮಹಿಳೆಯರು ಮುಖ್ಯವಾಹಿನಿಗೆ ಬರುತ್ತಿದ್ದಾರೆ, ಯುವಕರಿಗೆ ಶಿಕ್ಷಣ ನೀಡಲಾಗುತ್ತಿದೆ, ಚಿಕ್ಕಬಳ್ಳಾಪುರವನ್ನು ಮಾದರಿ ಕ್ಷೇತ್ರವಾಗಿ ಮಾಡುವ ಪ್ರಯತ್ನ ಕಳೆದ ಹತ್ತು ವರ್ಷಗಳಿಂದ ಪ್ರಾಮಾಣಿಕವಾಗಿ ಮಾಡಲಾಗಿದೆ. 

ಕೊನೆ ಚುನಾವಣೆ ಎನ್ನುವ ಗಿರಾಕಿಗಳನ್ನು ಎಂದಿಗೂ ನಂಬದಿರಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಮಾತು ಮತ್ತು ಆಭಿವೃದ್ಧಿಯ ನಡುವಿನ ಸಂಘರ್ಷದಲ್ಲಿ ಜನತೆ ನನ್ನ ಪರ ಕ್ಷೇತ್ರದ ಜನ ಇದ್ದಾರೆ ಎಂದು ಹೇಳಿದರು. ಪಟ್ರೇನಹಳ್ಳಿ ಗ್ರಾಪಂನ್ನು ನಗರದ ಮಾದರಿಯಲ್ಲಿಯೇ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಕೈಗಾರಿಕೆಗಳನ್ನು ತಂದು ಈ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮುಂದಿನ ಐದು ವರ್ಷದಲ್ಲಿ ಮಾಡಲಾಗುವುದು. ಪ್ರಸ್ತುತ ಶೇ.80 ರಷ್ಟುರೈತರು ಕ್ಷೇತ್ರದಲ್ಲಿ ಹೂವು ಬೆಳೆಯುತ್ತಿದ್ದಾರೆ, ಎಚ್‌ಎನ್‌ ವ್ಯಾಲಿಯಿಂದ ನೀರು ತಂದ ಕಾರಣ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಬಂದಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.

ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್‌: ಕಾಂಗ್ರೆಸ್‌ ಪರಿಶಿಷ್ಟರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ, ಇವರಿಗೆ 50 ವರ್ಷಗಳಿಂದ ಮೀಸಲಾತಿ ಹೆಚ್ಚಿಸಲಿಲ್ಲ, ಆದರೆ ಮೊದಲು ಇದ್ದ ಮೀಸಲಾತಿಗೆ 101 ಜಾತಿಗಳನ್ನು ಸೇರಿಸಿದ್ದು ಕಾಂಗ್ರೆಸ್‌. ಇದರಿಂದ ನಿಜವಾಗಿಯೂ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಅವಕಾಶಗಳು ಕಡಿಮೆ ಆಯಿತು. ಅಂಬೇಡ್ಕರ್‌ ಅವರ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಎರಡು ಬಾರಿ ಅವರನ್ನು ಸೋಲಿಸಿದ್ದು ಯಾಕೆ ಎಂದು ಪ್ರಶ್ನಿಸಿದರು. ಇಡೀ ವಿಶ್ವವೇ ಅಂಬೇಡ್ಕರ್‌ ಅವರ ಜಯಂತಿಯನ್ನು ವಿಶ್ವ ಜ್ಞಾನದ ದಿನವಾಗಿ ಆಚರಿಸುತ್ತಿದೆ. ಅವರ ಹೆಸರಿನಲ್ಲಿ ಅವರು ಜನಿಸಿದ ಗ್ರಾಮದಿಂದ ಪುನರುತ್ಥಾನವಾದ ಸ್ಥಳದವರೆಗೂ ಐದು ಸ್ಥಳಗಳಿಗೆ ವಿಶೇಷ ಒತ್ತು ನೀಡಿದ್ದು ಹಾಗೂ ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಿದ್ದು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಎಂದು ಹೇಳಿದರು.

ಮೋದಿ ಕೈ ಬಲವಡಿಸಲು ನಿರ್ಧಾರ: ಕೋವಿಡ್‌ ನಂತರದ ದಿನಗಳಲ್ಲಿ ಆರ್ಥಿಕ ಪುನಶ್ಚೇತನ ಆಗಿರುವ ದೇಶ ಭಾರತ, ಶಕ್ತಿಯುತ ಭಾರತವನ್ನು ನಿರ್ಮಾಣ ಮಾಡುವ ಕನಸು ಕಾಣುತ್ತಿರುವ ಯುವಕರು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಮೋದಿ ಅವರ ಕೈ ಬಲಪಡಿಸಿದಂತಾಗುತ್ತದೆ. ಮೋದಿ ಅವರು ಯಾವ ರೀತಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂಬುದು ಜಗತ್ತಿಗೇ ಗೊತ್ತಿದೆ ಎಂದರು. ಪ್ರಸ್ತುತ ಕ್ಷೇತ್ರದಲ್ಲಿ ಚುನಾವಣೆಗಳು ಅಭಿವೃದ್ಧಿ ಮತ್ತು ಮಾತಿನ ನಡುವೆ ನಡೆಯುತ್ತಿವೆ. ಯುವಕರು ತಮ್ಮನ್ನು ನಂಬಿ ಮತ ನೀಡುವ ವಿಶ್ವಾಸ ಇದೆ, ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಪ್ರಧಾನಿಯ ಬಗ್ಗೆ ಮಾತನಾಡಿರುವುದು ಸರಿಯಲ್ಲ. 

ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ

ವಿಶ್ವ ಮನ್ನಣೆ ಪಡೆದ ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿರುವುದು ಅವರ ರಾಜಕೀಯ ದಿವಾಳಿತನ ಮತ್ತು ಅವರ ವ್ಯಕ್ತಿತ್ವ ತೋರಿಸುತ್ತೆ. ಇಂತಹ ಮಾತು ಖರ್ಗೆ ಅವರಿಂದ ನಿರೀಕ್ಷಿಸರಲಿಲ್ಲ ಎಂದರು. ಬಿಎಂಟಿಸಿ ಉಪಾದ್ಯಕ್ಷ ಕೆ.ವಿ. ನವೀನ್‌ ಕಿರಣ್‌,ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಯೋಜನಾ ಪ್ರಾದಿಕಾರದ ಅಧ್ಯಕ್ಷ ಕೃಷ್ಣಮೂರ್ತಿ,ಜಿ.ಪಂ.ಮಾಜಿ ಅದ್ಯಕ್ಷ ಪುರದಗಡ್ಡೆ ಮುನೇಗೌಡ, ಟಿಎಪಿಸಿಎಂಎಸ್‌ ಮಾಜಿ ಅದ್ಯಕ್ಷ ಮರಳು ಕುಂಟೆ ಕೃಷ್ಣಮೂರ್ತಿ, ನಗರಸಭೆ ಮಾಜಿ ಅದ್ಯಕ್ಷ ಮುನಿಕೃಷ್ಣ,ತಾ.ಪಂ.ಮಾಜಿ ಅದ್ಯಕ್ಷ ಪಿ.ಎ.ಮೋಹನ್‌. ಮಂಚನಬಲೆ ಶ್ರೀಧರ್‌, ಸೇರಿದಂತೆ ಮತ್ತಿತರ ಬಿಜೆಪಿ ಮುಖಂಡರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.