ಮುಂಬರುವ ಚುನಾವಣೆಯಲ್ಲಿ ಜನರ ಆಶೀರ್ವಾದ ಪಡೆದೇ ನಂತರ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ನೆರವೇರಿಸುವುದಾಗಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. 

ಶ್ರೀರಂಗಪಟ್ಟಣ (ಅ.30): ಮುಂಬರುವ ಚುನಾವಣೆಯಲ್ಲಿ ಜನರ ಆಶೀರ್ವಾದ ಪಡೆದೇ ನಂತರ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ನೆರವೇರಿಸುವುದಾಗಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ತಾಲೂಕಿನ ಟಿ.ಎಂ ಹೊಸೂರು ಗ್ರಾಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಮ್ಮಿಕೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಗುದ್ದಲಿ ಹಿಡಿಯುವುದಿಲ್ಲ ಎಂದು ಶಾಸಕರ ಬಳಿ ಹೇಳಿದ್ದೆ. ಭಗವಂತ ಹಾಗೂ ಜನರು ನನ್ನ ಕೈ ಹಿಡಿದ ನಂತರ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಗುದ್ದಲಿ ಹಿಡಿಯುತ್ತೇನೆ. ಆ ಒಂದು ಸಂದರ್ಭ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಭಾರಿ ಮಂಡ್ಯ ಜಿಲ್ಲೆಗೆ ಬಂದಾಗ ತಾವುಗಳು ತೋರುವ ಪ್ರತಿಗೆ ನಾನು ಚಿರಋುಣಿ ಯಾಗಿರುತ್ತೇನೆ. ಮುಂದೆ 6 ತಿಂಗಳಲ್ಲಿ ಚುನಾವಣೆ ಎದುರಿಸುತ್ತಿದ್ದು ಅಭಿವೃದ್ಧಿ ವಿಚಾರಲ್ಲಿ ಸದಾ ಮುಂದೆ ಇರುವ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಕ್ಷೇತ್ರದ ಜನರು ಮತ್ತೊಮ್ಮೆ ಅವರನ್ನು ಕಳೆದ 2018ರ ಚುನಾವಣೆ ರೀತಿಯಲ್ಲಿ ಗೆಲ್ಲಿಸಿಕೊಡು ವಿಶ್ವಾಸ ನನ್ನಲ್ಲಿದೆ ಎಂದರು. ಇದಕ್ಕೂ ಮುನ್ನ ಗ್ರಾಮಸ್ಥರು ನಿಖಿಲ್‌ ಕುಮಾರಸ್ವಾಮಿ ಅವರನ್ನು ಗ್ರಾಮದ ಮುಖ್ಯದ್ವಾರದ ಬಳಿ ಅದ್ಧೂರಿಯಾಗಿ ಸ್ವಾಗತ ಕೋರಿ ಪುಷ್ಪದ ಸುರಿಮಳೆಗೈದು ಬರಮಾಡಿಕೊಂಡರು. ನಂತರ ಗ್ರಾಮದ ದಾರಿಯುದ್ದಕ್ಕೂ ತಮಟೆ ಸದ್ದಿನೊಂದಿಗೆ ಸಾಗಿದರು. ಈ ವೇಳೆ ಯುವಕ, ಯುವತಿಯರು ತಮ್ಮ ಮೊಬೈಲ್‌ನಲ್ಲಿ ಸೆಲ್ಪಿ ಕ್ಲಿಕಿಸಿಕೊಂಡು ನಿಖಿಲ್‌ ಕುಮಾರಸ್ವಾಮಿ ಅವರ ಜೊತೆ ಸಂಭ್ರಮಿಸಿದರು.

ಅಸೆಂಬ್ಲಿ ಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧೆ ಖಚಿತಪಡಿಸಿದ ಎಚ್‌ಡಿಕೆ

ವಿಧಾನಸಭೆ ಚುನಾವಣೆಗೆ ನನ್ನ ಸ್ಪರ್ಧೆ ಪಕ್ಷ ತೀರ್ಮಾನಿಸುತ್ತದೆ: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಷದ ತೀರ್ಮಾನಕ್ಕೆ ಬಿಟ್ಟವಿಷಯ. ಸದ್ಯ ಕುಮಾರಣ್ಣನವರ ಸೂಚನೆಯಂತೆ ಪಕ್ಷ ಸಂಘಟನೆಯೇ ನನ್ನ ಗುರಿ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾಸ್ವಾಮಿ ಹೇಳಿದರು. ತಾಲೂಕಿನ ಟಿ.ಎಂ.ಹೊಸೂರು ಹಾಗೂ ಕಾಳೇನಹಳ್ಳಿಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯರೊಂದಿಗೆ 1 ಕೋಟಿ 70 ಲಕ್ಷ ರು. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ಹಾಗೂ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನನ್ನ ಸ್ಪರ್ಧೆಯ ವಿಷಯದಲ್ಲಿ ಕುಮಾರಣ್ಣ ಹಾಗೂ ಪಕ್ಷದ ತೀರ್ಮಾನವೇ ಅಂತಿಮ. ನಾನಿನ್ನು ಪಕ್ಷ ಕಟ್ಟುವ ಸಂಘಟನೆಯಲ್ಲಿ ತೊಡಗಿದ್ದೇನೆ. ಪಕ್ಷದ ವರಿಷ್ಠರ 123 ಗುರಿಯನ್ನು ಮುಟ್ಟಲು ಯುವ ಶಕ್ತಿಯನ್ನು ಒಗ್ಗೂಡಿಸುವ ಕೆಲಸದಲ್ಲಿದ್ದೇನೆ ಎಂದರು. ರಾಜ್ಯದ ಜನರು ಅನುಭವಿಸುತ್ತಿರುವ ಕಷ್ಣಗಳನ್ನು ಮನಗಂಡು ಮಾಜಿ ಸಿಎಂ ಕುಮಾರಣ್ಣ ರವರ ನೇತೃತ್ವದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿ ಸೇರಿದಂತೆ ಪಂಚರತ್ನ ಯೋಜನೆ ಮೂಲಕ ರಾಜ್ಯಾದ್ಯಂತ ಜೆಡಿಎಸ್‌ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದರು.

ಕನ್ನಡ ರಾಜ್ಯೋತ್ಸವವನ್ನು ರಾಜ್ಯದ ಜನತೆ ಸಡಗರ ಸಂಭ್ರಮದಿಂದ ಆಚರಿಸುವ ಹಾಗೇ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ರಾಜ್ಯದ ನೆಲ, ಜಲ, ಭಾಷೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸದಾ ದ್ವನಿ ಎತ್ತುತ್ತಾ ಬಂದಿದ್ದಾರೆ. ಹಾಗೆಯೇ ರಾಜ್ಯದ ಪ್ರತಿಯೊಬ್ಬ ಜನರು ಮನೆಗಳ ಮೇಲೆ ಕನ್ನಡ ಭಾವುಟ ಹಾರಿಸುವ ಮೂಲಕ ಕನ್ನಡವನ್ನ ಎತ್ತಿ ಹಿಡಿಯುವಂತೆ ಪಕ್ಷವು ಮನವಿ ಮಾಡಿದೆ ಎಂದರು.

ಜೆಡಿಎಸ್ ಹೋರಾಟಕ್ಕೆ ಸದಾ ಸಿದ್ಧವಾಗಿದೆ : ನಿಖಿಲ್ ಕುಮಾರಸ್ವಾಮಿ

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಜೆಡಿಎಸ್‌ ಯುವ ಘಟಕದ ರಾಜ್ಯಾಧಧ್ಯಕ್ಷ ನಿಖಿಲ್‌ ಕುಮಾಸ್ವಾಮಿ ಆಗಮಿಸಿರುವುದು ಸಂತಸ ತಂದಿದೆ. ಜನರು ಸಹ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಸಂಭ್ರಮಿಸಿದ್ದಾರೆ. ಈ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಅತ್ಯವಶ್ಯಕವಾಗಿತ್ತು. ಸದ್ಯ ಈಗ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಬೆಳವಣಿಗೆಗಳು ನಡೆಯುತ್ತಿಲ್ಲ. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದರು. ಇದಕ್ಕೂ ಮುನ್ನ ತಾಲೂಕಿನ ಕೆ.ಶೆಟ್ಟಹಳ್ಳಿಯಲ್ಲಿ 67.65 ಲಕ್ಷ ರು.ಗಳ ರಸ್ತೆ ಅಭಿವೃದ್ಧಿಗೆ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.