Asianet Suvarna News Asianet Suvarna News

ಜೆಡಿಎಸ್ ಹೋರಾಟಕ್ಕೆ ಸದಾ ಸಿದ್ಧವಾಗಿದೆ : ನಿಖಿಲ್ ಕುಮಾರಸ್ವಾಮಿ

ರಾಜ್ಯದ ಯಾವುದೇ ಭಾಗದಲ್ಲಿ ರೈತರಿಗೆ ಅನ್ಯಾಯವಾದರೆ ಅವರ ಪರ ಹೋರಾಟಕ್ಕೆ ದೇವೇ ಗೌಡರ ನೇತೃತ್ವದಲ್ಲಿ ಜೆಡಿಎಸ್‌ ಸದಾ ಸಿದ್ಧವಿದೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ಹೇಳಿದರು.

 JDS Will Always Support  Farmers Says Nikil Kumaraswamy snr
Author
First Published Oct 21, 2022, 5:04 AM IST

 ಪಿರಿಯಾಪಟ್ಟಣ (ಅ.21):ರಾಜ್ಯದ ಯಾವುದೇ ಭಾಗದಲ್ಲಿ ರೈತರಿಗೆ ಅನ್ಯಾಯವಾದರೆ ಅವರ ಪರ ಹೋರಾಟಕ್ಕೆ ದೇವೇ ಗೌಡರ ನೇತೃತ್ವದಲ್ಲಿ ಜೆಡಿಎಸ್‌ ಸದಾ ಸಿದ್ಧವಿದೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ (Market ) ದರ ಕುಸಿತದಿಂದ ರೈತರು (Farmers)  ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಹಿನ್ನೆಲೆ ಮಾರುಕಟ್ಟೆಆವರಣದಲ್ಲಿ ನಡೆದ ರೈತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ತಂಬಾಕು ಬೆಳೆಗಾರರ ಹೋರಾಟಕ್ಕೆ ನಮ್ಮ ಕುಟುಂಬದ ಹಿರಿಯರು ಹಿಂದಿನಿಂದಲೂ ಕೈಜೋಡಿಸಿದ್ದು, ರಾಜ್ಯದ ತಂಬಾಕು ಬೆಳೆಗಾರರಿಗೆ ಅನ್ಯಾಯವಾಗಲು ಜೆ ಡಿ ಎಸ್‌ ಬಿಡುವುದಿಲ್ಲ, ತಂಬಾಕು ಖರೀದಿ ಕಂಪನಿಗಳಿಗೆ ರೈತರು ಅನಿವಾರ್ಯವೇ ಹೊರತು ಕಂಪನಿಗಳು ರೈತರಿಗೆ ಅನಿವಾರ್ಯವಲ್ಲ, ಕಂಪನಿಗಳು ರೈತರಿಂದ ಲಾಭ ಪಡೆದು ಉದ್ದಾರವಾಗಿವೆ, ಹೊರತು ರೈತರ ಅಭಿವೃದ್ಧಿಯಾಗಿಲ್ಲ, ತಂಬಾಕು ರೈತರ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಎಚ್‌.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ತಾಲೂಕಿಗೆ ಆಗಮಿಸಿ ತಂಬಾಕು ರೈತರ ಹೋರಾಟಕ್ಕೆ ಕೈಜೋಡಿಸಲಿದ್ದಾರೆ ಎಂದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ರೈತರೊಂದಿಗೆ ಸಭೆ ನಡೆಸುವ ವಿಷಯ ತಿಳಿದು ತಾಲೂಕಿನ ವಿವಿಧೆಡೆ ಯಿಂದ ಸಾವಿರಾರು ಮಂದಿ ರೈತರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಂಡಳಿ ಆವರಣ ಬಳಿ ಕಾದು ಕುಳಿತಿದ್ದು, ಅನ್ಯಕಾರ್ಯ ನಿಮಿತ್ತ ಎಚ್‌ಡಿಕೆ ಅವರು ಸಭೆಗೆ ಬರುತ್ತಿಲ್ಲ ಎಂಬ ವಿಷಯ ತಿಳಿದು ನಿರಾಶರಾದರು. ಸಭೆಯ ಮಧ್ಯೆ ದೂರವಾಣಿ ಕರೆಯ ಮೂಲಕ ಎಚ್‌ಡಿಕೆ ಅವರು ರೈತರನ್ನು ಉದ್ದೇಶಿಸಿ ಮಾತನಾಡಿ, ರೈತರ ಮೇಲೆ ಲಾಠಿ ಚಾಜ್‌ರ್‍ ಮಾಡಿರುವುದು ಖಂಡನೀಯ, ಸದಾ ರೈತಪರ ನಿಲುವು ಹೊಂದಿರುವ ನಾವು ಮತ್ತು ನಮ್ಮ ಪಕ್ಷ ನಿಮ್ಮೊಂದಿಗೆ ಇದ್ದೇವೆ, ಮುಂದಿನ ದಿನಗಳಲ್ಲಿ ತಂಬಾಕು ಬೆಳೆಗಾರರನ್ನು ಖುದ್ದು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿ ಉತ್ತಮ ಬೆಲೆಕೊಡಿಸಲು ಹೋರಾಟ ನಡೆಸುತ್ತೇನೆ, ಮುಂಬರುವ ವಿಧಾನಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿಗಳ ಸಭೆ ಪೂರ್ವ ನಿರ್ಧರಿತವಾದ್ದರಿಂದ ಸಭೆಗೆ ಗೈರಾಗಿದ್ದರು, ನಾನೆಂದೂ ರೈತಪರ ಅವರಿಗೆ ಅನ್ಯಾಯವಾಗಲು ಬಿಡಲ್ಲ ಎಂದರು.

ಶಾಸಕ ಕೆ. ಮಹದೇವ್‌ ಅವರು ಮಾತನಾಡಿ, ತಾಲೂಕಿನ ರೈತರಿಗೆ ಯಾವುದೆ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ, ಕಳೆದ ವಾರ ಮಾರುಕಟ್ಟೆಗೆ ಭೇಟಿ ನೀಡಿ ಖರೀದಿದಾರರು ಮತ್ತು ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ಸಂದರ್ಭ ಯಾರು ನಿರೀಕ್ಷೆ ಮಾಡದೆ ಇರುವಷ್ಟುಬೆಲೆ ನೀಡುವ ಸುಳಿವು ದೊರೆತಿತ್ತು, ಆದರೆ ದಿಢೀರ್‌ ಬೆಲೆ ಕುಸಿತ ಮಾಡಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದರು.

ಮೈಮೂಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿದರು. ಬುಧವಾರದಂದು ರೈತರ ಪ್ರತಿಭಟನೆ ಹಿನ್ನೆಲೆ ಎಎಸ್ಪಿ ನಂದಿನಿ ಅವರ ನೇತೃತ್ವ ಇನ್ಸ್‌ಪೆಕ್ಟರ್‌ ಜಗದೀಶ…, ಸಬ… ಇನ್‌ಸ್ಪೆಕ್ಟರ್‌ ಪ್ರಕಾಶ್‌ ಎಂ. ಯತ್ತಿನಮನಿ, ಗೋವಿಂದ್‌, ಸುರೇಶ್‌, ಪೊ›ಬೆಷನರಿ ಎಸ್‌ಐ ವರ್ಷ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್‌್ತ ಕೈಗೊಂಡಿದ್ದರು.

ವಿಪ ಸದಸ್ಯ ಭೋಜೇಗೌಡ, ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎಂ. ಲಕ್ಷ್ಮಣ್‌ ರಾವ್‌, ಜೆಡಿಎಸ್‌ ತಾಲುಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿ.ಎನ್‌. ರವಿ, ಜಿಪಂ ಮಾಜಿ ಸದಸ್ಯ ಕೆ.ಎಸ್‌. ಮಂಜುನಾಥ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ಪುರಸಭೆ ಅಧ್ಯಕ್ಷ ಕೆ.ಮಹೇಶ್‌, ರೈತ ಸಂಘ ರಾಜ್ಯ ಉಪಾಧ್ಯಕ್ಷ ಲೋಕೇಶ್‌ ರಾಜೇ ಅರಸ್‌, ಬಿ.ಜೆ. ದೇವರಾಜ್‌ ಜೆಡಿಎಸ್‌ ವಕ್ತಾರರಾದ ನಜ್ಮಾ ನಜೀರ್‌ ಇದ್ದರು.

Follow Us:
Download App:
  • android
  • ios