Asianet Suvarna News Asianet Suvarna News

Punjab Election : ಪಂಜಾಬ್ ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಸಿಧು-ಚನ್ನಿ ಜಟಾಪಟಿ!

ಚರಂಜೀತ್ ಸಿಂಗ್ ಚನ್ನಿ-ನವಜೋತ್ ಸಿಧು ನಡುವೆ ಮಾತಿನ ಸಮರ
ಭಾನುವಾರ ಪ್ರಕಟವಾಗಲಿದೆ ಪಂಜಾಬ್ ಗೆ ಕಾಂಗ್ರೆಸ್ ನ ಮುಖ್ಯಮಂತ್ರಿ ಅಭ್ಯರ್ಥಿ
ಪ್ರಾಮಾಣಿಕ ವ್ಯಕ್ತಿ ಪಂಜಾಬ್ ಸಿಎಂ ಅಭ್ಯರ್ಥಿ ಆಗಬೇಕು ಎಂದ ನವಜೋತ್ ಸಿಧು

party must choose someone honest and with a clean track record for Punjab Chief Minister candidate says Navjot Sidhu san
Author
Bengaluru, First Published Feb 4, 2022, 11:09 PM IST

ಚಂಡೀಗಢ (ಫೆ.4): ಮುಂಬರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ (Five State Election) ಪಂಜಾಬ್ (Punjab) ರಾಜ್ಯವನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಹಠದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ  (Congress Party) ರಾಜ್ಯದ ಇಬ್ಬರು ಪ್ರಮುಖ ನಾಯಕರುಗಳ ನಡುವಿನ ಭಿನ್ನಾಭಿಪ್ರಾಯವೇ ಹಿನ್ನಡೆ ಆಗುವ ಸಾಧ್ಯತೆ ಇದೆ. ಪಂಜಾಬ್ ಚುನಾವಣೆಗೆ (Punjab Election) ಕಾಂಗ್ರೆಸ್ ಅಭ್ಯರ್ಥಿಯನ್ನು ಪಕ್ಷ ಭಾನುವಾರ ಪ್ರಕಟ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿರುವ ಬೆನ್ನಲ್ಲಿಯೇ, ಉಭಯ ನಾಯಕರುಗಳ ನಡುವೆ ಮಾತಿನ ಸಮರ ಜೋರಾಗಿ ನಡೆಯುತ್ತಿದೆ.

ಪಂಜಾಬ್ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ರಾಹುಲ್ ಗಾಂಧಿ (Rahul Gandhi) ಇನ್ನೆರಡೇ ದಿನದಲ್ಲಿ ತೆರೆ ಎಳೆಯಲಿರುವ ನಡುವೆಯೇ, ಶುಕ್ರವಾರ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ( Punjab Congress chief Navjot Sidhu ) ತಮ್ಮ ಪ್ರತಿಸ್ಪರ್ಧಿ ಹಾಗೂ ಹಾಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Chief Minister  Charanjit Singh Channi) ವಿರುದ್ಧ ನೇರವಾಗಿ ಮಾತಿನ ದಾಳಿ ನಡೆಸಿದ್ದಾರೆ. ಚರಂಜಿತ್ ಸಿಂಗ್ ಚನ್ನಿಯ ಸಂಬಂಧಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟ ಬೆನ್ನಲ್ಲಿಯೇ ಪದಗಳ ಆಯ್ಕೆಯಲ್ಲಿ ಬಹಳ ಎಚ್ಚರ ವಹಿಸಿ ಮಾತನಾಡಿರುವ ಸಿಧು, "ಪ್ರಾಮಾಣಿಕ ಹಾಗೂ ಕ್ಲೀನ್ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ವ್ಯಕ್ತಿ" ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಬೇಕು ಎಂದು ಹೇಳಿದ್ದಾರೆ. ಅದಲ್ಲದೆ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ನಾಯಕ ಕನಿಷ್ಠ 60 ಶಾಸಕರ ಬೆಂಬಲವನ್ನಾದರೂ ಹೊಂದಿರಬೇಕು ಎಂದು ನವಜೋತ್ ಸಿಧು ಅಭಿಪ್ರಾಯಪಟ್ಟಿದ್ದಾರೆ.

"ನೀವು ನೈತಿಕ ಅಧಿಕಾರವಿಲ್ಲದ, ನೈತಿಕತೆಯಿಲ್ಲದ ಅಥವಾ ಅಪ್ರಾಮಾಣಿಕ ಮತ್ತು ಕೆಲವು ಭ್ರಷ್ಟಾಚಾರ ಮತ್ತು ಮಾಫಿಯಾದ ಭಾಗವಾಗಿರುವ ಯಾರನ್ನಾದರೂ ಆರಿಸಿದರೆ, ಜನರು ಬದಲಾವಣೆಗಾಗಿ ಮತ ಚಲಾಯಿಸುತ್ತಾರೆ" ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ತಿಳಿಸಿದ್ದಾರೆ. 

Trouble for Navjot Sidhu : ಸಿಧುವಷ್ಟು ಕ್ರೂರಿ ಯಾರೂ ಇಲ್ಲ ಅಂದ್ರು ಸಹೋದರಿ, ಆಕೆ ಯಾರು ಗೊತ್ತೇ ಇಲ್ಲ ಅಂದ್ರು ಸಿಧು ಪತ್ನಿ!
"ನಮಗೆ ಪ್ರಾಮಾಣಿಕ ಅಭ್ಯರ್ಥಿ ಬೇಕು. ನಿಮ್ಮ ಹಣೆಬರಹವು ನೀವು ಆಯ್ಕೆಮಾಡುವದನ್ನು ಅವಲಂಬಿಸಿರುತ್ತದೆ. ಇದು ಆಯ್ಕೆಯಾಗಿದೆ, ಅವಕಾಶವಲ್ಲ, ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. 'ಮಾಫಿಯಾ-ರೀತಿಯ ವ್ಯಕ್ತಿ' ನಿಮ್ಮ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಸ್ವತಃ ಮಾಫಿಯಾ ರಕ್ಷಕ-ಮುಖ್ಯಸ್ಥನಾದಲ್ಲಿ ಅವನು ಮಾಫಿಯಾವನ್ನು ಹೇಗೆ ನಿಯಂತ್ರಿಸಲು ಸಾಧ್ಯ ಎಂದು ಸಿಧು ಪ್ರಶ್ನೆ ಮಾಡಿದ್ದಾರೆ.

Punjab Elections 2022: ಆಪ್ ಕೈಗೆ ಅಧಿಕಾರ ಸಾಧ್ಯತೆ, ಚುನಾವಣಾ ಪೂರ್ವ ಸಮೀಕ್ಷೆ ವರದಿ
ಪಂಜಾಬ್‌ಗೆ ಕಾಂಗ್ರೆಸ್‌ನ ಪೂರ್ವಭಾವಿ ಮುಖ್ಯಮಂತ್ರಿ ಎಂದು ಘೋಷಿಸುವ ರೇಸ್‌ನಲ್ಲಿ ಸಿಧು ಮುಖ್ಯಮಂತ್ರಿ ಚನ್ನಿ ಅವರೊಂದಿಗೆ ಸ್ಪರ್ಧೆಯಲ್ಲಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪೇಂದ್ರ ಸಿಂಗ್ "ಹನಿ" ಯನ್ನು (Bhupendra Singh "Honey") ಜಾರಿ ನಿರ್ದೇಶನಾಲಯವು ಬಂಧಿಸಿದೆ ಎನ್ನುವ ನಿಟ್ಟಿನಲ್ಲಿ ಸಿಧು ಆಡಿರುವ ಮಾತುಗಳು ಮಹತ್ವ ಪಡೆದುಕೊಂಡಿವೆ.

"ನನ್ನನ್ನು ನಾನು ಸಿಎಂ ಅಭ್ಯರ್ಥಿ ಎಂದು ಕರೆದುಕೊಳ್ಳುವುದಿಲ್ಲ. ಆದರೆ, ಆರು ಚುನಾವಣೆಗಳಲ್ಲಿ ಗೆದ್ದಿರುವ ಎಷ್ಟು ಜನರನ್ನು ನೀವು ನೋಡುಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಜನರು ಮಾತ್ರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬಹುದು. ಜನರ ಧ್ವನಿ ದೇವರ ಧ್ವನಿ. ಇತರರು ಏನು ಮಾಡುತ್ತಾರೆ ಎಂಬುದಕ್ಕೆ ನಾನು ಜವಾಬ್ದಾರನಲ್ಲ ಎಂದು ನಾನು ಹೇಳಬಲ್ಲೆ ಎಂದಿದ್ದಾರೆ. ನಿಮ್ಮ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಧು, "ನಾನು ಒಪ್ಪಿಕೊಳ್ಳುತ್ತೇನೋ ಇಲ್ಲವೋ ಎಂಬ ಪ್ರಶ್ನೆಯೇ ಇಲ್ಲ. ಜನರು ಅದನ್ನು ಸ್ವೀಕರಿಸುತ್ತಾರೆಯೇ ಎನ್ನುವುದೇ ಮುಖ್ಯ, ನಿಮ್ಮ ನಾಯಕ ಯಾರೇ ಆಗಿದ್ದರೂ ಅವರಿಗೆ 60 ಶಾಸಕರ ಬೆಂಬಲ ಬೇಕು. ಎಲ್ಲರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ.ಶಾಸಕರ ಬೆಂಬಲವಿಲ್ಲದೆಯೇ ನೀವು ಸಿಎಂ ಆಗಲು ಹೇಗೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios