Paresh Mesta Murder case: ಬಿಜೆಪಿಗೆ ಬಿಸಿಮುಟ್ಟಿಸಲು ಕಾಂಗ್ರೆಸ್ Rally
- ಪರೇಶ್ ಮೇಸ್ತ ಕೇಸ್: ಬಿಜೆಪಿಗೆ ಬಿಸಿಮುಟ್ಟಿಸಲು ಕಾಂಗ್ರೆಸ್ Rally
- ಇಂದು ಕುಮಟಾದಲ್ಲಿ ಜನಜಾಗೃತಿ ಸಮಾವೇಶ
- 2017ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಹೊನ್ನಾವರದಲ್ಲಿ ನಡೆದಿದ್ದ ಪರೇಶ್ ಮೇಸ್ತ ಸಾವು
- - ಅದು ರಾಜಕೀಯ ಕೊಲೆ ಎಂದು ಹೋರಾಟ ನಡೆಸಿದ್ದ ಬಿಜೆಪಿ
- ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವು ಎಂದು ಇತ್ತೀಚೆಗೆ ಸಿಬಿಐ ಬಿ ರಿಪೋರ್ಟ್
- ಅದರ ಲಾಭ ಪಡೆಯಲು ಈಗ ಕಾಂಗ್ರೆಸ್‌ನಿಂದ ಸಮಾವೇಶ
ಕಾರವಾರ (ನ.24) : ಐದು ವರ್ಷಗಳ ಹಿಂದೆ ನಡೆದ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಕೊಲೆಯೆಂದು ಬಿಂಬಿಸಿ ತನ್ನ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ತಿರುಗಿಬಿದ್ದಿದ್ದು, ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಹಾಕಿರುವ ಹಿನ್ನೆಲೆಯಲ್ಲಿ ಇದೀಗ ಬಿಜೆಪಿಗೆ ಚುರುಕು ಮುಟ್ಟಿಸಲು ಮುಂದಾಗಿದೆ.
ಪರೇಶ್ ಮೇಸ್ತ ಸಾವಿನ ಪ್ರಕರಣದ ಸತ್ಯಾಸತ್ಯತೆ ತಿಳಿಸುವ ನಿಟ್ಟಿನಲ್ಲಿ ನ.24ರಂದು ಕುಮಟಾದಲ್ಲಿ ಜನಜಾಗೃತಿ ಸಮಾವೇಶ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಲ್ಲಿ ನಡೆದ ಮೇಸ್ತ ಪ್ರಕರಣವನ್ನು ಬಿಜೆಪಿ ಕೊಲೆ ಎಂದು ಬಿಂಬಿಸಿತ್ತು. ಆದರೆ ನಾಲ್ಕೂವರೆ ವರ್ಷದ ಬಳಿಕ ತನಿಖೆ ನಡೆದು ಸಿಬಿಐ ಬಿ ರಿಪೋರ್ಟ್ ಹಾಕಿದೆ. ಈಗ ಪುನಃ ಬಿಜೆಪಿಗರು ಮರುಪರಿಶೀಲನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅದಕ್ಕೆ ಅಭ್ಯಂತರವಿಲ್ಲ. ಆದರೆ ಚುನಾವಣಾ ಮುಂದಿಟ್ಟುಕೊಂಡು ಸಂಚು ರೂಪಿಸಿರುವಂತೆ ಕಾಣುತ್ತಿದೆ ಎಂದು ದೂರಿದರು.
ಬಿಜೆಪಿ ಮಹಾನ್ ಸುಳ್ಳುಗಾರನೆಂದು ಮತ್ತೆ ಸಾಬೀತು: ಸಿದ್ದರಾಮಯ್ಯ
ಮುಂದಿನ ವಿಧಾನಸಭಾ ಚುನಾವಣೆಗೂ ಮೊದಲೇ ಸತ್ಯಾಸತ್ಯತೆ ಬಹಿರಂಗ ಆಗಬೇಕು. 2018ರ ಚುನಾವಣೆಯಂತೆ ಮತ್ತೆ ಗೊಂದಲ ಸೃಷ್ಟಿಸಬಾರದು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ಗೂ ಪರೇಶ ಮೇಸ್ತ ಪ್ರಕರಣಕ್ಕೂ ಸಂಬಂಧವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಪಕ್ಷದ ಮುಖಂಡರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.