ಅಪರೇಷನ್‌ ಹಸ್ತ: ಕಾಂಗ್ರೆಸ್‌ಗೆ ಹೋಗಲು ನಾವು ಹಸಿದು ಕೂತಿಲ್ಲ, ಜೆಡಿಎಸ್‌ ಶಾಸಕರ ಕಿಡಿ

ಜೆಡಿಎಸ್ ಶಾಸಕಾಂಗ ಪಕದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಕಾಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ. ಪಕ್ಷದ 18 ಶಾಸಕರು ಭಾಗವಹಿಸಲು ಪಕ್ಷವು ಸೂಚಿಸಿದೆ.

JDS MLA's Slams MLA CP Yogeshwar's  Operation Congress Statement grg

ಬೆಂಗಳೂರು(ನ.27):  ಜೆಡಿಎಸ್‌ ಶಾಸಕರನ್ನು ಸೆಳೆಯುವ ಕುರಿತು ಚನ್ನಪಟ್ಟಣ ಕ್ಷೇತ್ರದ ವಿಜೇತ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನೀಡಿದ ಹೇಳಿಕೆ ಖಂಡಿಸಿ ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ. ಇಂದು(ಬುಧವಾರ) ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಶಾಸಕರು ಒಗ್ಗಟ್ಟಾಗಿರುವ ಸಂದೇಶ ರವಾನಿಸಲು ತೀರ್ಮಾನಿಸಿದ್ದಾರೆ. 

ಜೆಡಿಎಸ್ ಶಾಸಕಾಂಗ ಪಕದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಕಾಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ. ಪಕ್ಷದ 18 ಶಾಸಕರು ಭಾಗವಹಿಸಲು ಪಕ್ಷವು ಸೂಚಿಸಿದೆ. 

ಆಪರೇಷನ್‌ ಹಸ್ತ: ಯೋಗೇಶ್ವರ್‌ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ಸಾಥ್‌!

ಕೆಲ ಶಾಸಕರು ಗೈರು?: 

ಈ ನಡುವೆ, ಶಾಸಕರು ನಡೆಸುವ ಪತ್ರಿಕಾಗೋಷ್ಠಿಗೆ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇ ಗೌಡ ಭಾಗವಹಿಸುವ ಬಗ್ಗೆ ಅನುಮಾನ ಇದೆ. ಜಿ.ಟಿ.ದೇವೇಗೌಡ ಜತೆಗೆ ಇತರ ಕೆಲವು ಶಾಸಕರು ಸಹ ಗೈರಾಗುವ ಸಾಧ್ಯತೆ ಇದೆ ಎಂದು ಹೇ ನಿಗಿದೆ. ಒಂದು ವೇಳೆ ಕೆಲವು ಶಾಸಕರು ಗೈರಾದರೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನೆಯಾಗಲಿದೆ. ಹೀಗಾಗಿ ಎಲ್ಲ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬೇಕು ಎಂಬ ಸೂಚನೆಯೂ ಪಕ್ಷದ ವರಿಷ್ಠರಿಂದ ಹೋಗಿದೆ ಎಂದು ಹೇಳಲಾಗಿದೆ.

ನಾವ್ಯಾರು ಕಾಂಗ್ರೆಸ್‌ಗೆ ಹೋಗಲು ಹಸಿದು ಕೂತಿಲ್ಲ: ದಳ ಶಾಸಕರ ಕಿಡಿ 

ಶಿವಮೊಗ್ಗ/ತಾಳಿಕೋಟೆ/ತುಮಕೂರು: ನಾಪಕ್ಷ ಟಾಸ್ಕ್ ಕೊಟ್ಟರೆ ಜೆಡಿಎಸ್‌ನ ಎಲ್ಲಾ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರಲು ಸಿದ್ದ ಎಂಬ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವ‌ರ್ ಹೇಳಿಕೆಗೆ ಇದೀಗ ಜೆಡಿಎಸ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ನಾವೇನು ಕಾಂಗ್ರೆಸ್‌ಗೆ ಹೋಗಲು ಹಸಿದು ಕೂತಿಲ್ಲ, ಯೋಗೇಶ್ವರ್ ಅವರನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ, ನಮ್ಮನ್ನೇನೂ ಖರೀದಿ ಮಾಡಲು ಆಗಲ್ಲ ಎಂದು ಜೆಡಿಎಸ್ ಶಾಸಕರಾದ ಶಾರದಾ ನಾಯಕ್, ರಾಜುಗೌಡ ಪಾಟೀಲ, ಎ.ಟಿ.ಕೃಷ್ಣಪ್ಪ ತಿರುಗೇಟು ನೀಡಿದ್ದಾರೆ. 

ಮಂಗಳವಾರ ಮಾತನಾಡಿದ ಅವರು, ಜೆಡಿಎಸ್ ಶಾಸಕರು ಪಕ್ಷ ನಿಷ್ಠೆಯಾಗಿ ಸಂವಿಧಾನಬದ್ದರಾಗಿದ್ದೇವೆ ಎಂದು ತಾಳಿ ಕೋಟೆ ಶಾಸಕ ರಾಜುಗೌಡ ಪಾಟೀಲ ತಿರುಗೇಟು ನೀಡಿದ್ದಾರೆ. 
ಇನ್ನು ನಾವು ನಿಮ್ಮನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ ಹೇಳಿದ್ದಾರೆ. ನಾವು ಜಿ.ಟಿ.ದೇವೇಗೌಡರ ರೀತಿ ಗೆದ್ದಿದ್ದೇವೆ, ಖರೀದಿ ಅಸಾಧ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು.

ಜಿ.ಟಿ. ದೇವೇಗೌಡರು ಕಾಂಗ್ರೆಸ್‌ಗೆ ಹೋಗಿದ್ದರೆ ಇಂದು ಸಚಿವರಾಗಿರುತ್ತಿದ್ದರು: ಸಿ.ಎಂ. ಇಬ್ರಾಹಿಂ

ಮೈಸೂರು:  ಕಳೆದ ಚುನಾವಣೆ ವೇಳೆಯೇ ಜಿ.ಟಿ. ದೇವೇಗೌಡರು ಕಾಂಗ್ರೆಸ್ ಗೆ ಹೋಗಿದ್ದರೆ ಇವತ್ತು ಸಚಿವರಾಗಿ ಇರುತ್ತಿದ್ದರು. ನಾವೇ ಜೆಡಿಎಸ್ ಪಕ್ಷ ಬಲ ಪಡಿಸಲು ಜೆಡಿಎಸ್ ನಲ್ಲಿ ಉಳಿಸಿಕೊಂಡಿದೆ. ಈಗ ಅವರ ಕತ್ತು ಕುಯ್ಯುವ ಕೆಲಸ ಮಾಡಲಾಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಆರೋಪಿಸಿದರು. 

ಗೌಡರ ಕುಟುಂಬದಿಂದ ಆಚೆ ಬರಲು ಒಕ್ಕಲಿಗ ಸಮುದಾಯ ತೀರ್ಮಾನಿಸಿದೆ: ಯೋಗೇಶ್ವ‌ರ್

ಸೋಮವಾರ ಶಾಸಕ ಜಿ.ಟಿ. ದೇವೇಗೌಡರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವಿಚಾರಗಳ ಬಗ್ಗೆ ನಾನು ಜಿ.ಟಿ.ದೇವೇಗೌಡರ ಜೊತೆ ಚರ್ಚೆ ಮಾಡಿದ್ದೇನೆ. ಇನ್ನೂ ಎರಡು ದಿನ ಬಿಟ್ಟು ನಾನು ರಾಜ್ಯ ಪ್ರವಾಸ ಹೋಗುತ್ತಿದ್ದೇನೆ. ಆಗ ಕೆಲವು ನಾಯಕರನ್ನು ಭೇಟಿ ಮಾಡುತ್ತೇನೆ. ಆ ನಂತರ ಮತ್ತೆ ನಾನು ಜಿ.ಟಿ ದೇವೇಗೌಡರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು. 

ಮೂಲ ಜೆಡಿಎಸ್ ನಮ್ಮದೆ. ಅದರ ಖಾತೆ, ಪಾಣಿ ಎಲ್ಲಾ ನಮ್ಮ ಹೆಸರಿನಲ್ಲಿದೆ. ಈಗಲೂ ಎಚ್.ಡಿ.ದೇವೇಗೌಡರು ಬಿಜೆಪಿ ಸಹವಾಸ ಬಿಟ್ಟು ಬರಲಿ ಜೆಡಿಎಸ್ ನ್ನು ಕಟ್ಟುತ್ತೇವೆ. ಹೊಸ ಪಕ್ಷವೊ ತೃತೀಯ ರಂಗವೊ ಅಥವಾ ಜೆಡಿಎಸ್ ಬಲವರ್ಧನೆಯೋ ಎಲ್ಲವೂ ಮುಂದಿನ ದಿನಗಳಲ್ಲಿ ತೀರ್ಮಾನ ಆಗಲಿದೆ ಎಂದರು. 

Latest Videos
Follow Us:
Download App:
  • android
  • ios